PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ -23 - ಜಿಲ್ಲಾ ನಾಗರಿಕರ ಸಾಂಸ್ಕೃತಿಕ ವೇದಿಕೆ, ತಿರುಳ್ಗನ್ನಡ ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಕೊಪ್ಪಳ ಜಿಲ್ಲಾ ಉತ್ಸವದ ೩ನೇ ದಿನವಾದ ಆ.೨೪ ರಂದು ನಗರದ ಸಾಹಿತ್ಯ ಭವನದಲ್ಲಿ ಬೆ.೧೦ ಗಂಟೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಕೊಪ್ಪಳ ಜಿಲ್ಲಾ ಸರ್ಕಾರಿ ಪ್ರಾಥಮಿಕ ಮುಖ್ಯೋಪಾಧ್ಯಾಯರ ಸಂಘದಿಂದ ಜಿಲ್ಲಾ ಮಟ್ಟದ ಶೈಕ್ಷಣಿಕ ಮತ್ತು ಆಡಳಿತ ಕಾರ್ಯಾಗಾರ, ಸಂವಾದ ಕಾರ್ಯಕ್ರಮ ಹಾಗೂ ಸಂಜೆ ೫ ಗಂಟೆಗೆ ಜಿಲ್ಲಾ ಉತ್ಸವದ ಸಮಾರೋಪ ಸಮಾರಂಭ ಜರುಗಲಿದೆ ಎಂದು ನಾಗರಿಕರ ವೇದಿಕೆ ರಾಜ್ಯಾಧ್ಯಕ್ಷ ಮಹೇಶಬಾಬು ಸುರ್ವೆ  ಅವರು ತಿಳಿಸಿದ್ದಾರೆ.
ಆ.೨೪ ರಂದು ಸಂಜೆ ೫ ಗಂಟೆಗೆ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ಸಾಂಸ್ಕೃತಿಕ ಸೌರಭದ ಉದ್ಘಾಟನೆಯನ್ನು ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಅವರು ನೆರವೇರಿಸುವರು. ಪ್ರಶಸ್ತಿ ಪ್ರಧಾನವನ್ನು ಗಂಗಾವತಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರು ನೆರವೇರಿಸಿಕೊಡುವರು. ಅಧ್ಯಕ್ಷತೆಯನ್ನು ನಾಗರಿಕರ ವೇದಿಕೆ ಉಪಾಧ್ಯಕ್ಷ ಸಿದ್ದಪ್ಪ ಹಂಚಿನಾಳ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಜಿ.ಪಂ.ಉಪಕಾರ್ಯದರ್ಶಿ ರವಿ ಬಸರಿಹಳ್ಳಿ, ಸರ್ಕಲ್ ಇನ್ಸಪೆಕ್ಟರ್ ಮೋಹನ ಪ್ರಸಾದ್, ಸಮಾಜ ಸೇವಕರಾದ ಕೋಮಲಾ ಕುದರಿಮೋತಿ, ಹೋರಾಟಗಾರರಾದ ಗಿರಿಜಾ ಶಂಕರ ಪಾಟೀಲ್, ಬಿಜೆಪಿ ಮುಖಂಡ ಹೇಮಾವತಿ ಚಂದ್ರಪ್ಪ ಮಂಗಳೂರು, ಕಾಂಗ್ರೆಸ್ ಮುಖಂಡರಾದ ಅನುಸೂಯಮ್ಮ ವಾಲ್ಮೀಕಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಇಂದಿರಾ ಭಾವಿಕಟ್ಟಿ, ಮಹಿಳಾ ಕಾಂಗ್ರೆಸ್ ಮುಖಂಡರಾದ ಶಕುಂತಲಾ ಹುಡೇಜಾಲಿ, ಹಿರಿಯ ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿ, ಉದಯ ಟಿವಿ ವಾರ್ತಾವಾಚಕ ರಾಘವೇಂದ್ರ ಗಂಗಾವತಿ, ಧಾರವಾಡದ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಸಿ.ವಿ.ಚಂದ್ರಶೇಖರ, ಪಿಡಬ್ಲ್ಯೂಡಿ ಇಲಾಖೆಯ ಇ.ಇ. ಲಷ್ಕರಿನಾಯಕ್, ಪರಿಸರ ಅಧಿಕಾರಿ ಬಿ.ರುದ್ರೇಶ, ರಾಯಚೂರು ಉದಯವಾಣಿ ವರದಿಗಾರ ಭೀಮರಾಯ ಹದ್ದಿನಾಳ, ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತ, ವಿನೂತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿದ್ದಲಿಂಗಯ್ಯ ಹಿರೇಮಠ, ಜನಪದ ಲೋಕದ ಜಿಲ್ಲಾಧ್ಯಕ್ಷ ಹಾಗೂ ನಿವೃತ್ತ ವಾರ್ತಾಧಿಕಾರಿ ಬಸವರಾಜ ಆಕಳವಾಡಿ, ಪತ್ರಕರ್ತರಾದ ಶರಣಪ್ಪ ಬಾಚಲಾಪುರ, ಸೋಮರೆಡ್ಡಿ ಅಳವಂಡಿ, ಹರೀಶ ಹೆಚ್.ಎಸ್, ಓಲೇಕಾರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾಂಡುರಂಗ ಓಲೇಕಾರ, ಬಿಇಓ ಉಮೇಶ ಪೂಜಾರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಲಂಬು, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಪ್ರಭುಲಿಂಗ ಅವರು ಭಾಗವಹಿಸುವರು. ಸಂಜೆ ೬ ಗಂಟೆಗೆ ಕೊಪ್ಪಳ ಜಿಲ್ಲೆಯ ಪ್ರವಾಸಿ ತಾಣಗಳ ಕುರಿತು ಚಿತ್ರಕಲಾ ರೇಖಾ ಚಿತ್ರಗಳ ಪ್ರದರ್ಶನದ ಉದ್ಘಾಟನೆ ಸಮಾರಂಭ ಜರುಗಲಿದ್ದು, ಉದ್ಘಾಟನೆಯನ್ನು ಹಿರಿಯ ಚಿತ್ರಕಲಾವಿದ ಬಸವರಾಜ ಗವಿಮಠ ಅವರು ನೆರವೇರಿಸುವರು. ವಿ.ಕೆ.ಒಂಟಿಗೋಡಿಮಠ, ಫಕೃದ್ಧೀನ್ ತಳಕಲ್, ವೆಂಕಟೇಶ ಕಬಾಡಿ, ಮಹೇಶ ಬೆಳವಣಿಕೆ, ಅಪ್ಪಣ್ಣ ಚಿತ್ರಗಾರ, ಕೃಷ್ಣ ಇನಾಂದಾರ, ಬದರಿನಾಥ ಪುರೋಹಿತ್, ರವಿ ಮಾನ್ವಿ, ಬಿ.ಜಿ.ನೆಲಜೇರಿ ಸೇರಿದಂತೆ ಜಿಲ್ಲೆಯ ಚಿತ್ರಕಲಾ ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಅದೇ ದಿನ ರಾತ್ರಿ ೯.೩೦ ಕ್ಕೆ ಜನಪದ ಹಾಸ್ಯಗಾರ ಜೀವನಸಾಬ ಬಿನ್ನಾಳ ಇವರಿಂದ ಹಾಸ್ಯೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಕ್ಷೇತ್ರಗಳನ್ನು ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ನಾಗರಿಕರ ವೇದಿಕೆ ರಾಜ್ಯಾಧ್ಯಕ್ಷ ಮಹೇಶಬಾಬು ಸುರ್ವೆ ಅವರು ತಿಳಿಸಿದ್ದಾರೆ.
23 Aug 2015

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top