PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ- ೩೦, ಕ್ಷೇತ್ರದ ಶಿವಪುರ, ಹೊಸಬಂಡಿಹರ್ಲಾಪುರ ಗ್ರಾಮಗಳಲ್ಲಿ ಕೊಪ್ಪಳದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ಕರ್ನಾಟಕ ನೀರಾವರಿ ನಿಗಮ ನಿಯಮಿತ ಯೋಜನೆಯಡಿಯಲ್ಲಿ ರೂ. ೨ ಕೋಟಿ ಸಿಸಿ ರಸ್ತೆಯ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಉತ್ತಮ ಗುಣಮಟ್ಟದ ರಸ್ತೆಗಳ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಗ್ರಾಮಗಳವಿಕಾಸನ ಯೋಜನೆಯಡಿಯಲ್ಲಿ ಪ್ರತಿ ಗ್ರಾಮಗಳ

ಸರ್ವಾಂಗೀಣ ಅಭಿವೃದ್ಧಿ ಯಾಗುತ್ತಿದ್ದು. ಗ್ರಾಮಗಳ ಮೂಲಭೂತ ಸೌಕರ್ಯಗಳಾದ ಸಿಸಿ ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರಿನ ಘಟಕಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೆಚ್ಚಿನ ಅನುಧಾನವನ್ನು ನೀಡಿ ಜನರ ದೈನಂದಿಕ ಸಮಸ್ಯೆಗಳಿಗೆ ಪರಿಹಾರ ಕೈಗೊಳ್ಳಲಾಗುತ್ತಿದೆ. ಮಳೆಯ ಅಬಾವ ಇರುವುದರಿಂದ ಎಲ್ಲಿಯೂ ಕುಡಿಯುವ ನೀರಿಗೆ ಸಮಸ್ಯೆ ಯಾಗಬಾರದೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದು ತ್ವರಿತ ಗತಿಯಲ್ಲಿ ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲಾಗಿದೆ. ಇಂದು ಅಳವಂಡಿಯಲ್ಲಿ ಗೋಶಾಲೆ ಪ್ರಾರಂಭಿಸಲಾಗುವುದು. ಇನ್ನೂ ಎರೆಡು ಮೂರು ದಿನಗಳಲ್ಲಿ ಮೋರನಾಳ ಹಾಗೂ ಹಿರೇಸಿಂದೋಗಿಯಲ್ಲಿ ಗೋಶಾಲೆ ಪ್ರಾರಂಭಿಸಲಾಗುವುದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಾರಸ್ವತ ಲೋಕದ ದೃವತಾರೆಯಾಗಿದ್ದಾ ಎಮ್.ಎಮ್.ಕಲಬುರ್ಗಿಯವರ ಹತ್ಯೆಯನ್ನು ಖಂಡಿಸಿದ ಅವರು ಮಹಾನ್ ಸಂಶೋದಕರ ಅಗಲಿಕೆಯಿಂದ ಕರುನಾಡ ಬಡವಾಗಿದೆ. ಹಿರಿಯರ ಆತ್ಮಕ್ಕೆ ಶಾಂತಿ ಕೋರಿದರು. ಈ ಸಂದರ್ಭದಲ್ಲಿ ಟಿ.ಜನಾರ್ಧನ ಹುಲಿಗಿ, ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಮತಿ ಮಂಜುಳಾ ನಾಯಕ್, ದೇವಣ್ಣ ಮೇಕಾಳಿ, ಮರ್ದಾನಪ್ಪ ಬಿಸರಳ್ಳಿ, ವಿಶ್ವನಾಥ ರಾಜು, ಚನ್ನಕೃಷ್ಣ, ಶಿವಬಾಬು, ರೂಪ್ಲಾ ನಾಯಕ್, ಗ್ರಾಮ ಪಂಚಾಯತಿಯ ಸದಸ್ಯರು ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top