PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-01- ಇದು ಬರೀ ಶಾಲೆ ಅಲ್ಲೋ ಧ್ಯಾನಮಂದಿರ.! ಕಣ್ಣಿಗೆ ತಂಪೆನಿಸುವಷ್ಟು ಸಮೃದ್ಧ ಹಸಿರು ಒಳಗೆ  ಕಾಲಿಟ್ಟರೆ ಸಾಕು ಪ್ರಶಾಂತವಾದ ವಾತಾವಾರಣ ಮನಕ್ಕೆ ಮುದ ನೀಡುತ್ತದೆ. ಒಂದು ಕ್ಷಣ ಯಾವುದೋ 'ಧ್ಯಾನಮಂದಿರ'ಕ್ಕೆ ಬಂದೆವೇನೊ ಎಂಬ ಭಾವನೆ ಮೂಡುತ್ತದೆ! ಹೌದು, ಇದು ಕೊಪ್ಪಳ ತಾಲೂಕಿನ 'ಉಪಲಾಪುರ'ವೆಂಬ ಪುಟ್ಟ ಹಳ್ಳಿಯ ಕಿರಿಯ ಪ್ರಾಥಮಿಕ ಶಾಲೆಯ ಪರಿಸರದ ಸೊಬಗು! ಹಸಿರಿನೊಳ್ ಶಾಲೆ ಕೊಪ್ಪಳ ಹೇಳಿ-ಕೇಳಿ ಬಯಲುಸೀಮೆ ಪ್ರದೇಶ ಇಲ್ಲಿ ಮಳೆ ಕೂಡ ಅಷ್ಟಕಷ್ಟೆ. ಹೀಗಾಗಿ ಅಂತರ್ಜಲ ಪಾತಾಳಕ್ಕಿಳಿದಿದೆ. ಕುಡಿಯುವ ನೀರಿಗಾಗಿ ಪರದಾಡುವಂತ ಪರಿಸ್ಥಿತಿ ಈ ಭಾಗದಲ್ಲಿದೆ. ಆದರೆ ಶಾಲೆಯ ಹಸಿರಿನ ಸಮೃದ್ಧಿಗೆ ಯಾವುದೇ ತೊಂದರೆಯಾಗದಂತೆ ಇಲ್ಲಿನ ಶಿಕ್ಷಕರು,ಗ್ರಾಮಸ್ಥರು ನೋಡಿಕೊಂಡಿದ್ದಾರೆ. ನೀರಿನ ಕೊರತೆಯಾದಾಗ ಟ್ಯಾಂಕರ ಮೂಲಕ ಗಿಡಗಳಿಗೆ ನೀರೂಣಿಸಿದ್ದಾರೆ. ಹೀಗಾಗಿ ಶಾಲೆಯಲ್ಲಿ ಎಲ್ಲಿ ನೋಡಿದರಲ್ಲಿ ಹಸಿರೊ ಹಸಿರು!. ತೆಂಗು,ಬೇವು,ಮಾವು,ಸೀತಾಫಲ,ಬಾಳೆ,ನೀಲಗಿರಿ,ಸಿಲ್ವರ್,ಬದಾಮಿ, ಗುಲ್ಮೊಹರ್, ಅರಳಿ,ನುಗ್ಗೆ,ಮುಂತಾದ ೧೨೦ ಕ್ಕೂ ಹೆಚ್ಚು ಗಿಡಗಳು ಬೃಹದ್ಧಾಕಾರವಾಗಿ ಬೆಳೆದುನಿಂತು ಶಾಲೆಗೆ ಹಸಿರಿನ 'ಹಂದರ'ಕಟ್ಟಿವೆ. ಅಲ್ಲದೆ ಶಾಲೆಯಲ್ಲಿ ಕಿರು ಕೈ ತೋಟವನ್ನು ಕೂಡಾ ಮಾಡಿದ್ದಾರೆ.ಟಮಾಟೊ,ಹೀರೇಕಾಹಿ, ಕೊತಂಬರಿ, ಕರಿಬೇವು, ಪಾಲಕ್ಕ,ಹುಣಸಿಕ್ಕ ಬೆಳೆದು ಬಿಸಿಊಟಕ್ಕೆ ಬಳಸುತ್ತಾರೆ.ಮಕ್ಕಳಲ್ಲಿ ಸ್ವಯಂ ಶಿಸ್ತು ಬೆಳೆದಿದ್ದು, ಶಿಕ್ಷಕರು ಬರುವ ಮೊದಲೇ ಶಾಲೆಗೆ ಆಗಮಿಸಿ ಗಿಡಗಳಿಗೆ,ಕೈ ತೋಟಕ್ಕೆ ನೀರುಣಿಸುತ್ತಾರೆ. ಅಲ್ಲದೆ ಪಕ್ಷಿಗಳಿಗೆ ನೀರು ಕುಡಿಯಲು,ಕಾಳು ತಿನ್ನಲು ಗಿಡಗಳಿಗೆ ತೂಗುಬುಟ್ಟಿಗಳನ್ನು ಕಟ್ಟಿ ಪಕ್ಷಿಪ್ರೇಮ ಮೆರೆದಿದ್ದಾರೆ. ಹೀಗಾಗಿ ನೂರಾರು ಪಕ್ಷಿಗಳು ತಮ್ಮ ಸಂತತಿಯನ್ನ ಬೆಳೆಸುತ್ತಿವೆ.
 ನಿಸರ್ಗದಲ್ಲಿಯೇ ಕಲಿಕೆ ನಿಸರ್ಗದೊಂದಗಿನ ಕಲಿಕೆ ಮಗುವಿನಲ್ಲಿ ಸೃಜನಶೀಲತೆಯನ್ನ ಹೆಚ್ಚಿಸುತ್ತದೆ.ಪರಿಸರ,ಪ್ರಾಣಿ-ಪಕ್ಷಿಗಳೆಂದರೆ ಮಕ್ಕಳಿಗೆ ಬೆರಗು!.ಇಲ್ಲಿನ ಶಿಕ್ಷಕರು ಗಿಡಮರಗಳ ಕೆಳಗೆ ಹಲವು ಚಟುವಟಿಕೆಗಳ ಮೂಲಕ ಪಾಠ ಬೋಧಿಸುತ್ತಾರೆ.ಶಾಲಾ ಕೊಠಡಿಗಳ ಹೊರಭಾಗದಲ್ಲಿ ರಾಜ್ಯ,ರಾಷ್ಟ್ರಕ್ಕೆ ಸಂಬಂಧಿಸಿದ ಮಾಹಿತಿಗಳನ್ನ,ಚಿತ್ರಗಳನ್ನ ಬರೆಯಲಾಗಿದೆ.ಹಾಗೆಯೇ ಕಾಂಪೌಂಡ ತುಂಬಾ,ಕನ್ನಡ,ಗಣಿತ,ಇಂಗ್ಲೀಷ,ಪರಿಸರ ಅಧ್ಯಯನಕ್ಕೆ ಸಂಬಂಧಪಟ್ಟ ಮಾಹಿತಿಯನ್ನ ಬರೆಯಲಾಗಿದೆ. ಮಕ್ಕಳು ಇವನ್ನು ನೋಡುತ್ತಾ,ಆಡುತ್ತಾ ಕಲಿಯುತ್ತಾರೆ.ಇದರಿಂದ ಶಾಲೆಯ ಅಂದ ಚೆಂದ ಹೆಚ್ಚಿದೆ;ಇದೆಲ್ಲವನ್ನು ಈ ಶಾಲೆಯ ಶಿಕ್ಷಕರಾದ ಮಹೇಶ ಕುರ್ತುಕೋಟಿಯವರೆ ಬರೆದಿದ್ದಾರೆ.ಅಲ್ಲದೆ ಕಸದಿಂದ ರಸವೆನ್ನುವಂತೆ ಅನೇಕ ನಿರುಪಯುಕ್ತ ವಸ್ತುಗಳನ್ನ ಬಳಸಿಕೊಂಡು ವಿಜ್ಞಾನ,ಗಣಿತಕ್ಕ ಸಂಬಂಧಪಟ್ಟ 'ಪ್ರಾಯೋಗಿಕ ಮಾದರಿ'ಗಳನ್ನ
ಮತ್ತೋರ್ವ ಶಿಕ್ಷಕರಾದ ಬಾಳಪ್ಪ ಕಾಳೆ ತಯಾರಿಸಿದ್ದಾರೆ.ಇದರಿಂದ ಮಕ್ಕಳಿಗೆ ವಿಷ
'ಜಾಗತಿಕ ತಾಪಮಾನ ಹೆಚ್ಚಾಗ್ತಿದೆ. ಗಿಡ ನೆಡುವುದೊಂದೆ ಇದಕ್ಕೆ ಪರಿಹಾರ',ಅಂತಾ ಉದ್ದುದ್ದಾ ಭಾಷಣ ಬಿಗಿಯೋ ಮಂದಿನೇ ಹೆಚ್ಚಾಗಿರುವ ಈ ಕಾಲದಲ್ಲಿ ಯಾವುದೇ ಪ್ರಚಾರಬಯಸದೆ. ಕುಗ್ರಾಮದಲ್ಲಿದ್ದುಕೊಂಡು ಪರಿಸರ ರಕ್ಷಣೆಯಲ್ಲಿ ತಮ್ಮನ್ನ-ತಾವು ತೊಡಗಿಸಿಕೊಂಡಿರುವ ಇಂಥ ಶಿಕ್ಷಕರಿಗೊಂದು ದೊಡ್ಡ ಸಲಾಂ!.



ಯಗಳನ್ನ ಅರ್ಥೈಸಿಕೊಳ್ಳಲು ಸುಲಭವಾಗಿದೆ.ಮಕ್ಕಳಿಗೆ,ದೈಹಿಕ,ಮಾನಸಿಕ,ಬೌದ್ಧಿಕ,ಬೆಳವಣಿಗೆಗಾಗಿ,ಯೋಗ,ಕಾವಾಯತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನೆಡೆಯುತ್ತವೆ.ಗ್ರಾಮದಲ್ಲಿ ಸ್ವಚ್ಛತೆಗಾಗಿ,ಶೌಚಾಲಯ ಕಟ್ಟಿಸಿಕೊಳ್ಳಲು ಮಕ್ಕಳಿಂದ ಜಾಗೃತಿ ಮೂಡಿಸಿದ್ದಾರೆ. ಸುತ್ತ-ಮುತ್ತ ಹಳ್ಳಿಯೊಳಗ ಇಂಥ ಸಾಲಿ ಇಲ್ರೀ!. ಈ ಹಿಂದೆ ಇಲ್ಲಿ ಶಿಕ್ಷಕರಾಗಿದ್ದ ರಾಮಣ್ಣ ಕಳ್ಳಿಮನಿ ,ಈಗಿನ ಗುರುಗಳು ಬ್ಹಾಳ ಶ್ರಮವಹಿಸಿ ನಮ್ಮ ಮಕ್ಕಳಿಗೆ ಒಳ್ಳೆ ವಿದ್ಯಾ ಕಲಿಸ್ಯಾರ,ಚೊಲ ಪರಿಸರ ನಿರ್ಮಿಸ್ಯಾರ್ರೀ, ಅಂತ ಹೇಳ್ತಾರೆ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ನಿರುಪಾದೆಪ್ಪ ಚಳ್ಳಾರಿ. ಗ್ರಾಮಸ್ಥರ ಸಹಾಯ-ಸಹಕಾರ,ಶಿಕ್ಷಕರ,ಮಕ್ಕಳ ಶ್ರಮದ ಫಲವಾಗಿ ಈ ಶಾಲೆಗೆ ೨೦೧೪-೨೦೧೫ ನೇ ಸಾಲಿನಲ್ಲಿ  'ಜಿಲ್ಲೆಯ ಅತ್ಯುತ್ತಮ ಪರಿಸರ ಮಿತ್ರ ಶಾಲೆ'ಪ್ರಶಸ್ತಿ ಪಡೆದುಕೊಂಡಿದೆ. ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ,ಶಿಕ್ಷಕರಿಗೆ ಈ ಶಾಲೆಯೊಂದು ಶೈಕ್ಷಣಿಕ ಅಧ್ಯಯನಕೇಂದ್ರವಾಗಿ ಮಾರ್ಪಟ್ಟಿದೆ.೫೫ ಮಕ್ಕಳು ದಾಖಲಾಗಿದ್ದು,ಅಷ್ಟೇ ಹಾಜರಾತಿ ಇರುತ್ತದೆ.

Advertisement

0 comments:

Post a Comment

 
Top