PLEASE LOGIN TO KANNADANET.COM FOR REGULAR NEWS-UPDATES

ಭಾರತದ ಮಾಜಿ ರಾಷ್ಟ್ರಪತಿ ಭಾರತ ರತ್ನ ಡಾ// ಎ.ಪಿ.ಜೆ. ಅಬ್ದುಲ್ ಕಲಾಂ ನಿಧನಕ್ಕೆ ಕೊಪ್ಪಳ ಜಿಲ್ಲೆಯ ಅಳವಂಡಿ ಕಟ್ಟಿಮನಿ  ಹಿರೇಮಠ ಸಂಸ್ಥಾನ ಮಠ ತೀವ್ರ ಶೋಕ ವ್ಯಕ್ತಪಡಿಸಿ ದಿವಂಗತರ ರಾಷ್ಟ್ರ ಸೇವೆಯನ್ನು ಸ್ಮರಿಸಿದೆ.
           ಅಳವಂಡಿ ಶ್ರೀ ಸಿದ್ಧೇಶ್ವರ ಸಂಸ್ಥಾನ ಕಟ್ಟಮನಿ ಹಿರೇಮಠದ ಷ.ಬ್ರ. ಶ್ರೀ ಸಿದ್ಧಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ಸಭೆ ಸೇರಿ ದಿವಂಗತ ಡಾ// ಅಬ್ದುಲ್ ಕಲಾಂ ಅವರು ಒಬ್ಬ ಶ್ರೇಷ್ಠ ವಿಜ್ಞಾನಿಯಾಗಿ, ಭಾರತದ ರಾಷ್ಟ್ರಪತಿಯಾಗಿ, ನಿಜವಾದ ಒಬ್ಬ ದೇಶಪ್ರೇಮಿಯಾಗಿ, ಸರ್ವ ಜನಾಂಗದ ಆದರಣೀಯ ವ್ಯಕ್ತಿಯಾಗಿ ಪ್ರಾಮಾಣಿಕ  ಜೀವನ ಸಾಗಿಸಿದ ನಿಜ ನಿಸ್ವಾರ್ಥ ಸಂತನಾಗಿ ದೇಶಕ್ಕೆ ಹಲವು ರೀತಿಯ ಕೊಡುಗೆ ನೀಡಿ ದೇಶದ ರಕ್ಷಣಾ ವ್ಯವಸ್ಥೆ ಬಲಗೊಳಿಸಿದ ಒಂದು ಶಕ್ತಿಯಾಗಿದ್ದ ಅವರ ಅಗಲಿಕೆ ದೇಶಕ್ಕೆ ತೀವ್ರತರವಾದ ನಷ್ಟ ಉಂಟಾಗಿದೆ ಎಂದು ಬಹುವಾಗಿ ಸ್ಮರಿಸಿ ಶ್ರದ್ಧಾಂಜಲಿ ಅರ್ಪಿಸಿದರು.
             ದೇಶದ ಸ್ವಾತಂತ್ರ್ಯ ಪೂರ್ವ ಚಳುವಳಿ ಮತ್ತು ನಂತರದ ಹೈದರಾಬಾದ್ ವಿಮೋಚನಾ ಚಳುವಳಿಯಲ್ಲಿ ಅಳವಂಡಿ ಕಟ್ಟಿಮನಿ ಹಿರೇಮಠ ಸಂಸ್ಥಾನ ತನ್ನದೇಯಾದ ಧಾರ್ಮಿಕ ಹಾಗೂ ರಾಜಕೀಯ ಪ್ರಜ್ಞೆ ಮತ್ತು ಹೋರಾಟಗಳೊಂದಿಗೆ ದೇಶದ ಎಲ್ಲಾ ಪ್ರಧಾನ ಮಂತ್ರಿಗಳು ಹಾಗೂ ರಾಷ್ಟ್ರಪತಿಗಳೊಂದಿಗೆ ನಿಕಟ ಹಾಗೂ ಆತ್ಮೀಯ ಸಂಬಂಧ ಹೊಂದಿ ಪ್ರಗತಿಪರವಾದ ಚಿಂತನ ಶೀಲತೆ ರೂಢಿಸಿಕೊಂಡು ಬಂದಂತೆ ಶ್ರೀ ಅಳವಂಡಿ ಶಿವಮೂರ್ತಿಸ್ವಾಮಿಗಳು ಲೋಕಸಭೆಗೆ ಎರಡು ಬಾರಿ ಆಯ್ಕೆಯಾದಾಗ ಮಾಡಿದ ಸೇವೆಗಳಿಗೆ ದೇಶದ ನಾಯಕರು ನೀಡಿದ ಸಹಕಾರ ಮರೆಯುವಂತಿಲ್ಲ.
             ಪಂಡಿತ ಜವಹರ ಲಾಲ್ ನೆಹರು, ಇಂದಿರಾಗಾಂಧಿ, ಮೊರಾರ್ಜಿ ದೇಸಾಯಿ, ರಾಜೀವ್ ಗಾಂಧಿ ಅಂತಹ ಪ್ರಧಾನ ಮಂತ್ರಿಗಳು, ಹಾಗೂ ಡಾ// ಎಸ್. ರಾಧಾಕೃಷ್ಣನ್, ಡಾ// ಬಾಬು ರಾಜೇಂದ್ರ ಪ್ರಸಾದ, ವ್ಹಿ. ವ್ಹಿ. ಗಿರಿ, ಆರ್ ವೆಂಕಟ ರಾಮನ್, ಡಾ// ಶಂಕರ ದಯಾಳ್ ಶರ್ಮ ಅಂತಹ ರಾಷ್ಟ್ರಪತಿಗಳೊಂದಿಗೆ ನಿಕಟ ಸಂಪರ್ಕದಲ್ಲಿ  ಇದ್ದಂತೆ. ಭಾರತಕ್ಕೆ ಸ್ವಾತಂತ್ರ್ಯ ದೊರೆತು ೫೦ನೇ ವರ್ಷಾಚರಣೆ ಸಂದರ್ಭದಲ್ಲಿ ಪ್ರಥಮ ಲೋಕಸಭೆಗೆ ಚುನಾಯಿತ ಸದಸ್ಯರಲ್ಲಿ ಜೀವಿತ ವ್ಯಕ್ತಿಗಳಾಗಿದ್ದವರಿಗೆ ಗೌರವಿಸುವಲ್ಲಿ ಅಳವಂಡಿ ಶಿವಮೂರ್ತಿಸ್ವಾಮಿಗಳವರೂ ಒಬ್ಬರಾಗಿದ್ದು. ಡಾ// ಅಬ್ದುಲ್ ಕಲಾಂ
               ದೇಶದಲ್ಲಿ ಇಂದು ತಾಂಡವಾಡುತ್ತಿರುವ ಭಯೋತ್ಪಾದನೆ, ಅತ್ಯಾಚಾರ, ಅನ್ಯಾಯಗಳಂಥಹ ವಿದ್ವಾಂಸಕ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವವರಿಗೆ ಡಾ// ಕಲಾಂ ಅವರು ದೇಶಕ್ಕೆ ನೀಡಿದ ಕೊಡುಗೆಗಳು ಇಂಥಹ ವ್ಯಕ್ತಿಗಳ ಮನ ಹಾಗೂ ಮಾರ್ಗ ಪರಿವರ್ತನೆಗೆ ಸ್ಪೂರ್ತಿಯಾಗಲೆಂದಾಶಿಸಿ ಡಾ// ಕಲಾಂ ಅವರಿಗೆ ಶ್ರೀ ಎಸ್.ಬಿ.ಎಸ್. ಕಾಲೇಜು ಕಾರ್ಯದರ್ಶಿ ಡಾ// ಸಿದ್ಧಲಿಂಗಸ್ವಾಮಿ ಹಾಗೂ ಪ್ರಾಚಾರ್ಯರು, ಸಿಬ್ಬಂದಿ ವರ್ಗ, ಶ್ರೀ ಮಠದ ಸದ್‌ಭಕ್ತ iಹಾಮಂಡಳಿ ತಮ್ಮ ಶೋಕ ವ್ಯಕ್ತ ಪಡಿಸಿ ಭಗವಂತ ಡಾ// ಕಲಾಂ ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಪ್ರಾರ್ಥಿಸಿ ಅವರ ಆದರ್ಶಗಳು ಸತ್‌ಪ್ರಜೆಗಳಿಗೆ ಉತ್ತಮ ಕೆಲಸ ನಿರ್ವಹಿಸಲು ಸ್ಪೂರ್ತಿ ನೀಡಲೆಂದಾಶಿಸಿದರು.
ಅವರೆ ಅಂದು ರಾಷ್ಟ್ರಪತಿಗಳಾಗಿ ಗೌರವಿಸಿದ್ದನ್ನು ಸ್ಮರಣೆಗೆ ತಂದು ಕೂಂಡರೆ ರೋಮಾಂಚನವಾಗುತ್ತದೆ. ಸಹೃದಯಿಯಾಗಿದ್ದ ಡಾ// ಕಲಾಂ ಅವರ ಅಗಲಿಕೆ ದೇಶಕ್ಕೆ ದೂಡ್ಡ ನಷ್ಟವೆಂದು ರಾಯಚೂರ ಜಿಲ್ಲಾ ಪರಿಷತ್ ಮಾಜಿ ವಿರೋಧ ಪಕ್ಷದ ನಾಯಕ ಮುಂಡರಗಿಯಲ್ಲಿರುವ ಶ್ರೀ ಎಸ್.ಬಿ.ಎಸ್. ಆಯುರ್ವೇದ  ಮಹಾವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಗುರುಮೂರ್ತಿಸ್ವಾಮಿಗಳು ಅಳವಂಡಿ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

0 comments:

Post a Comment

 
Top