ಕೊಪ್ಪಳ : ನೋವು, ಕಷ್ಟ, ಸುಖಗಳು ಎದೆ ತುಂಬಿ ಬಂದಾಗ ಕವಿತೆಗಳು ಹೊರಹೊಮ್ಮುತ್ತವೆ. ಕವಿಯು ಕವಿತೆಗಳೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾನೆ. ಕಾವ್ಯ ರಸಾತ್ಮಕವಾಗಿರಬೇಕು. ಕವಿತೆ ಹುಡುಕಾಟವಾಗಬೇಕೆ ವಿನಃ ಹುಡುಗಾಟವಾಗಬಾರದು ಎಂದು ಕುಕನೂರಿನ ಹಿರಿಯ ಸಾಹಿತಿಗಳಾದ ಡಾ. ಕೆ.ಬಿ. ಬ್ಯಾಳಿ ಹೇಳಿದರು.
ಅವರು ಕೊಪ್ಪಳ ತಾಲೂಕಿನ ಭಾಗ್ಯನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಕೊಪ್ಪಳ ಜಿಲ್ಲಾ ೬ನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿಮಾತನಾಡಿದರು.
ಭಾಲ್ಕಿ ತಾಲೂಕ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ. ಮುಕ್ತುಂಬಿ, ಪತ್ರಕರ್ತೆ ಸಾವಿತ್ರಿ ಮುಜುಂದಾರ, ಹಿರಿಯ ಸಾಹಿತಿಗಳಾದ ಶರಣಬಸವರಾಜ ಬಿಸರಹಳ್ಳಿ, ಸಮ್ಮೇಳನದ ಅಧ್ಯಕ್ಷರಾದ ಈಶ್ವರ ಹತ್ತಿ, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಮಾರುತೇಶ ಹಟ್ಟಿ, ಶರಣಗೌಡ ಯರದೊಡ್ಡಿ, ಸುರೇಶ ಕಂಬಳಿ, ಸರೋಜಾ ಬಾಕಳೆ, ಪರಮೇಶಗೌಡ ಪಾಟೀ, ಮಾಲಾ ಬಡಿಗೇರಾ, ಸೋಮನಾಥಯ್ಯ ಕೆ. ಹಣವಾಳ, ಕರಿಸಿದ್ದನಗೌಡ ಮಾಲಿಪಾಟೀಲ, ಪುಷ್ಪಲತಾ ಏಳುಬಾವಿ ಕವನಗಳನ್ನು ವಾಚಿಸಿದರು.
ವೈಷ್ಣವಿ ಹುಲಿಗಿ ಪ್ರಾರ್ಥಿಸಿದರು. ಮಕ್ಕಳ ಸಾಹಿತಿ ಅರುಣಾ ನರೇಂದ್ರ ನಿರೂಪಿಸಿದರು. ಮಂಜುಪ್ರಕಾಶ ಎನ್. ಪಾಟೀಲ ಸ್ವಾಗತಿಸಿದರು. ಮಂಜುನಾಥ ಚಿತ್ರಗಾರ ವಂದಿಸಿದರು.
0 comments:
Post a Comment