PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಜು.೨೮ : ಪ್ರತಿಯೊಬ್ಬ ಕಲಾವಿದರಿಗೆ ಕಲಾಭಿಮಾನಿಗಳ ನೀಡುವ ಪ್ರೋತ್ಸಾಹವೇ ಅತ್ಯಂತ ಬಹುದೊಡ್ಡ ಗೌರವ ಹಾಗೂ ಕಾಣಿಕೆಯಾಗಿದೆ. ಅದೇ ರೀತಿ ಇಂದು ಬಹಳಷ್ಟು ಕಲಾವಿದರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು ಕಲಾವಿದರಿಗೆ ಕಲಾಪ್ರೇಕ್ಷಕರ ನೈತಿಕ ಹಾಗೂ ಆರ್ಥಿಕ ಬೆಂಬಲ ಅತ್ಯವಶ್ಯವಾಗಿದೆ ಎಂದು ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣನವರ ಹೇಳಿದರು.
ಅವರು ರವಿವಾರ ಸಂಜೆ ನಗರದ ಸಾಹಿತ್ಯಭವನದಲ್ಲಿ ಗಾನಭಾರತಿ ಹಿನ್ನೆಲೆಗಾಯನ ಸಂಗೀತ ಶಾಲೆ ದಶಮಾನೋತ್ಸವ ಅಂಗವಾಗಿ ಎಂ.ಕೆ. ಮೇಲೋಡಿಸ್ ಆರ್ಕೇಸ್ಟ್ರಾ ಪ್ರಾಯಜೋಕತ್ವದಲ್ಲಿ ಜೂನಿಯರ್ ಸಲ್ಮಾನ್‌ಖಾನ್ ಹಾಗೂ ಜೂನಿಯರ್
ದಶಮಾನೋತ್ಸವ ಕಾರ್ಯಕ್ರಮದ ಜ್ಯೋತಿ ಬೆಳೆಗಿಸಿದ ಕಾಂಗ್ರೆಸ್ ಮುಖಂಡ ಸೈಯದ್ ಪೌಂಡೇಶನ್ ಸಂಸ್ಥಾಪಕ ಕೆ.ಎಂ. ಸಯ್ಯದ್ ಮಾತನಾಡಿ, ಇಂದಿನ ದಿನಗಳಲ್ಲಿ ಸಂಗೀತ ಶಾಲೆಗಳನ್ನು ನಡೆಸುವುದು ತುಂಬಾ ಕಷ್ಟದಾಯಕವಾದ ಪರಿಸ್ಥಿತಿ ನಿರ್ಮಾಣ ಅಂತದರಲ್ಲಿ ಈ ಶಾಲೆ ದಶಮಾನ ಪೊರೈಸಿರುವುದು ಅತ್ಯಂತ ಸಂತೋಷದಾಯಕ ಇಂತಹ ಸಂಗೀತ ಶಾಲೆಗಳನ್ನು ಇನ್ನೂ ಉನ್ನತಿಕರಿಸಿ ಬೆಳೆಸುವ ಆಶಾದಾಯಕ ನಮ್ಮೇಲ್ಲರದಾಗಬೇಕೆಂದರು. ಕಂಚಿನ ಕಂಠಸಿರಿ ದೈವದತ್ತ ಕೊಡುಗೆ ಎಂದು ಅದು ಸಾಧನೆಯಿಂದ ಮಾತ್ರ ಪಡೆಸಲು ಸಾಧ್ಯವೆಂದು ಮರ್ಮಿಕವಾಗಿ ನುಡಿದರು.
ಮುಖ್ಯ ಅತಿಥಿ ಬಿಜೆಪಿ ಮುಖಂಡ ಸಿದ್ಧಲಿಂಗಯ್ಯಸ್ವಾಮಿ ಹಿರೇಮಠ ಮಾತನಾಡಿ, ಸಂಗೀತಕ್ಕೆ ತಲೆ ಬಾಗದವರಿಲ್ಲ ಗಾನ, ಸಂಗೀತದಿಂದ ಮನಸ್ಸಿಗೆ ನೆಮ್ಮದಿ ದೊರಕಲಿದೆ. ಇದು ಜೀವಕ್ಕೆ ಆರೋಗ್ಯಕರ  ಹಾಗೂ ಆರೋಗ್ಯಕರ ವಾತಾವರಣ ಸೃಷ್ಠಿಸುತ್ತದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಷ್ಟಗಿಯ ವಜೀರಸಾಬ ಗೋನಾಳ ಗುತ್ತೆದಾರರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಣ್ಣ ಹದ್ದಿನ್, ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ವಲಿಸ್ತಾಫ್, ಟ್ರಾಕ್ಟರ್ ಮಾಲಿಕರ ಸಂಘದ ಅಧ್ಯಕ್ಷ ದಕ್ಷಿಣ ಮೂರ್ತಿ ಹಿರೇಮಠ,  ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಗಾಳೆಪ್ಪ ಪೂಜಾರ, ಮಾಜಿ ನಗರಸಭೆ ಸದಸ್ಯೆ ಸುಮಾ ಶಾಸ್ತ್ರೀ ಹಿರೇಮಠ, ಕಾರ್ಯಕ್ರಮದ ಪ್ರಾಯೋಜಕ ಎಂ.ಕೆ. ಮೇಲೋಡಿಸ್ ಆರ್ಕೇಸ್ಟ್ರಾದ ಮಾಲಿಕ ಹಾಗೂ ಗಾಯಕ ಮಾಜಿದ್‌ಖಾನ ಸೇರಿದಂತೆ ಇತರರು ಉಪಸ್ಥಿತರಿದ್ದರು. ನಂತರ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ಜೂನಿಯರ್ ಸಲ್ಮಾನ್‌ಖಾನ್ ಹಾಗೂ ಜೂನಿಯರ್ ಉಪೇಂದ್ರ ತಮ್ಮ ಸುಮಧುರ ಗಾನ ಹಾಗೂ ನಟನೆಯಿಂದ ನೆರೆದ ಪ್ರೇಕ್ಷಕರನ್ನು ರಂಜಿಸಿದರು.

ಉಪೇಂದ್ರ ರವರ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲಾವಿದರ ಸೇವೆ ಅನನ್ಯವಾದದ್ದು ಅದನ್ನು ಕಲಾಪ್ರೋತ್ಸಾಹಿಸಿ ಪೋಷಿಸಿ ಬೆಳೆಸಬೇಕಿದೆ ಅದೇ ರೀತಿ ಜನಪ್ರತಿನಿಧಿಗಳ ಹಾಗೂ ಸರಕಾರದ ಸಹಕಾರವು ಅತ್ಯಗತ್ಯವಾಗಿದೆ ಎಂದರು.

Advertisement

0 comments:

Post a Comment

 
Top