PLEASE LOGIN TO KANNADANET.COM FOR REGULAR NEWS-UPDATES

ಬಳ್ಳಾರಿ, ಜು. ೨೧:ಜನಪ್ರಿಯ ಚಿತ್ರ ನಟ ರವಿಕಿರಣ್, ಹೆಸರಾಂತ ಪತ್ರಕರ್ತರಾದ ಜೋಗಿ (ಗಿರೀಶ್ ರಾವ್ ಹತ್ವಾರ್), ಉದಯ ಮರಕಿಣಿ ಹಾಗೂ ಕೆ ವಿ ಎನ್ ಸ್ವಾಮಿ ಅವರು ಜು. ೨೨ ರಂದು ಬುಧವಾರ ಬಳ್ಳಾರಿಗೆ ಆಗಮಿಸುವರು.
   ನಗರದ ಸಂಸ್ಕೃತಿ ಪ್ರಕಾಶನ ಪ್ರಕಟಿಸಿರುವ ಅಮೆರಿಕಾದಲ್ಲಿರುವ ಪತ್ರಕರ್ತ ಅನಿಲ್ ಭಾರದ್ವಾಜ್ ಅವರ ಸ್ಟೇಟ್ಸ್ ಎಕ್ಸ್‌ಪ್ರೆಸ್ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಗಣ್ಯರು ನಗರಕ್ಕೆ ಆಗಮಿಸುತ್ತಿದ್ದಾರೆ,
   ಮಹಾತ್ಮ ಕುದ್ಮುಲ್ ರಂಗರಾವ್ ಸ್ಮಾರಕ ಸೇವಾ ಸಂಸ್ಥೆಯ ಸಹಯೋಗದಲ್ಲಿ ನಗರದ ಬಿಡಿಎಎ ಫುಟ್ಬಾಲ್ ಸಭಾಂಗಣದಲ್ಲಿ ಬೆಳಿಗ್ಗೆ ೧೦-೩೦ ಗಂಟೆಗೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕೃತಿಯನ್ನು ಖ್ಯಾತ ಬರಹಗಾರ ಜೋಗಿ ಅವರು ಲೋಕಾರ್ಪಣೆಗೊಳಿಸುವರು. ಹಿರಿಯ ಪತ್ರಕರ್ತ ಉದಯ ಮರಕಿಣಿ ಕೃತಿ ಪರಿಚಯಿಸಲಿದ್ದಾರೆ.
   ಚಿತ್ರನಟ ರವಿಕಿರಣ್ ಕಾರ್ಯಕ್ರಮ ಉದ್ಘಾಟಿಸುವರು. ಸುವರ್ಣ ನ್ಯೂಸ್ ಕಾರ್ಯಕಾರಿ ಸಂಪಾದಕ ಕೆ. ವಿ. ಎನ್. ಸ್ವಾಮಿ ಅವರು ಅಧ್ಯಕ್ಷತೆ ವಹಿಸುವರು.
   ಸಮಾರಂಭದಲ್ಲಿ ವಿಎಸ್‌ಕೆ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ಜೆ. ಸೋಮಶೇಖರ್, ಎಸ್ ಎಸ್ ಎ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಫ್ರೊ. ಎ ಹೇಮಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್, ಕೇಂದ್ರ ಕಾರಾಗೃಹ ಅಧೀಕ್ಷಕ ಡಾ. ರಂಗನಾಥ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿರಿರುವರು.
   ಕಾರ್ಯಕ್ರಮಕ್ಕೆ ಸಾಹಿತ್ಯ ಪ್ರೇಮಿಗಳು, ಆಸಕ್ತರು ಆಗಮಿಸಿ ಯಶಸ್ವಿಗೊಳಿಸಲು ಕೃತಿಕಾರ ಅನಿಲ್ ಭಾರದ್ವಾಜ್, ಪತ್ರಕರ್ತ, ಸಂಸ್ಕೃತಿ ಪ್ರಕಾನದ ಸಿ, ಮಂಜುನಾಥ್ ಕೋರಿದ್ದಾರೆ.
   ಸಂವಾದ: ಸಮಾರಂಭದಲ್ಲಿ ಮುಖ್ಯ ಅತಿಥಿಗಳೊಂದಿಗೆ ಪತ್ರ್ರಿಕೋದ್ಯಮ ವಿದ್ಯಾರ್ಥಿಗಳು, ಸಭಿಕರು ಸಂವಾದ ನಡೆಸಲು ಅವಕಾಶವಿದೆ ಎಂದು ತಿಳಿಸಿದೆ..

Advertisement

0 comments:

Post a Comment

 
Top