PLEASE LOGIN TO KANNADANET.COM FOR REGULAR NEWS-UPDATES

ಭಾರತದ ಮಾಜಿ ರಾಷ್ಟ್ರಪತಿಗಳು, 'ಭಾರತದ ಕ್ಷಿಪಣಿ ಪಿತಾಮಹ' ಹಾಗೂ ಜನಸಾಮಾನ್ಯರ ರಾಷ್ಟ್ರಪತಿ ಎಂದೇ ಖ್ಯಾತರಾಗಿದ್ದಂತಹ ಅವುಲ್ ಫಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂರವರು ನಮ್ಮನ್ನು (ದಿ:೨೭/೭/೨೦೧೫) ಅಗಲಿರುವುದು ದೇಶಕ್ಕೆ, ಯುವಜನತೆಗೆ ತುಂಬಲಾರದ ನಷ್ಷವಾಗಿದೆ.

    ಇವರು ಅಕ್ಟೋಬರ್ ೧೫, ೧೯೩೧ರಲ್ಲಿ ತಮಿಳುನಾಡಿನ ರಾಮೇಶ್ವರಂನ ಧನುಷ್ಕೋಟಿಯಲ್ಲಿ ಜೈನುಲಾಬ್ದಿನ್ ಮರಾಕಯಾರ್ ಮತ್ತು ಅಸಿಯಮ್ಮಾ ಜೈನುಲಾಬ್ದಿನ್‌ರವರ ಮಗನಾಗಿ ಜನಿಸಿದರು. ಬಾಲ್ಯವು ಕಡು ಬಡತನದಲ್ಲಿ ಸಾಗಿತ್ತು. ಶಾಲೆಯ ಹೊರತು ಬಿಡುವಿನ ವೇಳೆಯಲ್ಲಿ ದಿನಪತ್ರಿಕೆಗಳನ್ನು ಮಾರಿ ಬಂದ ಹಣದಲ್ಲಿಯೇ ಜೀವನ ಸಾಗಿಸುತ್ತಿದ್ದರು. ಭೌತಶಾಸ್ತ್ರದ ವಿಷಯದಲ್ಲಿ ಆಸಕ್ತಿ ಇರದ ಕಾರಣ ವೈಮಾನಿಕ ಇಂಜಿನಿಯರ್ ಪದವಿಯನ್ನು ಮುಂದುವರೆಸಿದರು. ಪಿ.ಎಚ್.ಡಿ., ಎಂ.ಟೆಕ್., ಪದವಿಗಳನ್ನು ಪೂರೈಸಿದರು. ಇವರು ಓರ್ವ ವಿಜ್ಞಾನಿ ಮಾತ್ರ ಆಗಿರದೆ ವೀಣಾ ವಾದಕರು, ತಮಿಳು ಕವಿಗಳಾಗಿದ್ದರು. ಬ್ರಹ್ಮಚಾರಿಯಾಗಿದ್ದು, ಪ್ರತಿದಿನ ಕುರಾನ್ ಮತ್ತು ಭಗವದ್ಗೀತೆ ಓದುತ್ತಿದ್ದರು.

    ಇವರು ಶಿಕ್ಷಣ ತಜ್ಞ, ಬರಹಗಾರರು, ಸಂಶೋಧನಾ ಪ್ರಾಧ್ಯಾಪಕರಾಗಿ, ವೈಮಾನಿಕ ಇಂಜಿನಿಯರ್ರಾಗಿ, ಡಿ.ಆರ್.ಡಿ.ಓ. ಹಾಗೂ ಐ.ಐ.ಎಸ್.ಟಿ.ಯ ಮೊದಲ ಮುಖ್ಯೋಪಾಧ್ಯಯರಾಗಿ, ರಾಷ್ಟ್ರಪತಿಗಳಾಗಿ ಉತ್ತಮ ಆಡಳಿತಗಾರರಾಗಿ, ಪ್ರಸ್ತುತ ಸಂದರ್ಶಕ ಪ್ರಾಧ್ಯಾಪಕರಾಗಿ (ಐಐಎಂ.ನಲಿ) ದೇಶಕ್ಕೆ ಸೇವೆ ಸಲ್ಲಿಸಿ, ಭಾರತದ ಅಣುಬಾಂಬು ಹಾಗೂ ಕ್ಷಿಪಣಿಗಳ ಜನಕ (ಮಿಸೈಲ್ ಮ್ಯಾನ್ ಆಫ್ ಇಂಡಿಯಾ)ರೆಂದೇ ಪ್ರಸಿದ್ಧರಾಗಿದ್ದಾರೆ. ಡಾ. ಸೋಮ್‌ರಾಜು ಜೊತೆಗೂಡಿ 'ರಾಜು ಕಲಾಂ ಸ್ಟೆಂಟ್'ನಿರ್ಮಿಸಿದರು. ಇದು ಹೃದಯ ರೋಗಿಗಳಿಗೆ ಬಹು ಉಪಯೋಗಿಯೆನ್ನಿಸಿದೆ. ತಮ್ಮ ಕಾರ್ಯವೈಖರಿಯಿಂದ ಜಗತ್ತಿನ ದೊಡ್ಡಣ್ಣನ್ನೇ ಬೆಚ್ಚಿ ಬಿಳಿಸಿದ್ದು ಎನ್ನುವುದು ಈಗ ಇತಿಹಾಸ.
   
    ಸದಾ ಚಿಲುವೆಯ, ಚೈತನ್ಯ ಮತ್ತು ತನ್ನ ಸ್ಫೂರ್ತಿಯುತ ಮಾತುಗಳಿಂದ ಯುವಜನತೆಯಲ್ಲಿ ಕನಸುಗಳನ್ನು ಬಿತ್ತಿದ ಕನಸುಗಾರ, ದೊಡ್ಡ ದೊಡ್ಡ ಕನಸುಗಳನ್ನು ಕಾಣಿರಿ, ನಿಮ್ಮಿಂದ ಸಾಧ್ಯವಾಗದ್ದು ಯಾವುದು ಇಲ್ಲ, ಶಿಖರದೆತ್ತರದ ಆಶಯವನ್ನು ಬೆಳಸಿಕೊಳ್ಳಿ, ಕೆಲಸವನ್ನು ಪ್ರೀತಿಸಿ-ಕಂಪನಿಯನಲ್ಲ, ಕೆಲವರನ್ನು ಸೋಲಿಸುವುದು ಸುಲಭ, ಆದರೆ ಗೆಲ್ಲುವುದು ಕಠಿಣ, ಇನ್ನು ಹಲವಾರು  ವೈಯಕ್ತಿಕ ಸಂವಾದ ಮತ್ತು ಭಾಷಣಗಳಿಂದ ಯುವ ಜನಾಂಗಕ್ಕೆ ಸದಾ ಸ್ಫೂರ್ತಿಯನ್ನು ತುಂಬಿ ಮುನ್ನಡೆಸುತ್ತಿದ್ದಂತಹ ಮಹಾನ್ ಗುರು ಇವರು. ಯುವ ಜನತೆಯಿಂದಲೇ ಭಾರತದ ಕೀರ್ತಿ ಪತಾಕೆ ೨೦೨೦ರೊಳಗಾಗಿ ವಿಶ್ವದ ನಂ.೧ನೇ ರಾಷ್ಟ್ರವನ್ನಾಗಿಸುತ್ತದೆ ಎಂದು ಭವಿಷ್ಯ ನುಡಿದಿದ್ದರು.

ಇವರ ಪುಸ್ತಕಗಳು:
    ಡೆವೆಲಪ್ಮಂಟ್ಸ್ ಇನ್ ಫ್ಲುಯಿಡ್ ಮೆಖಾನಿಕ್ಸ್ ಅಂಡ್ ಸ್ಪೇಸ್ ಟೆಕ್ನಾಲಜಿ
    ವಿಂಗ್ಸ್ ಆಫ್ ಫೈಯರ್ (ಆತ್ಮಕಥೆ)- ಅಗ್ನಿಯ ರೆಕ್ಕೆಗಳು (ಕನ್ನಡ ಅನುವಾದ)
    ಇಂಡಿಯಾ ೨೦೨೦            * ಇಗ್ನೈಟೆಡ್ ಮೈಂಡ್ಸ್
    ಎನ್ವಿಶನಿಂಗ್ ಅನ್ ಎಂಪವರ್ಡ್ ನೇಷನ್        * ಡರ್ನಿಂಗ್ ಪಾಯಿಂಟ್ಸ್
    ಮೈ ಜರ್ನಿ        *  ದಿ ಲೈಫ್ ಟ್ರೀ        * ಚಿಲ್ಡ್ರ್ರನ್ ಆಫ್ ಲೈಫ್
    ಇವರ ಬಗ್ಗೆ ಇತರರು ಬರೆದ ಪುಸ್ತಕ ಕಲಾಂ ಮೇಷ್ಟ್ರು.

ಪ್ರಶಸ್ತಿಗಳು:

    ಡಾಕ್ಟರ್ ಆಫ್ ಸೈನ್ಸ್, ಡಾಕ್ಟರ್ ಆಫ್ ಲಾ, ಐಇಇಇ ಗೌರವ ಸದಸ್ಯತ್ವ, ಡಾಕ್ಟರ್ ಆಫ್ ಇಂಜಿನಿಯರ್, ಗೌರವ ಡಾಕ್ಟರ್‍ಟ್, ವೂವೇರ್ ಮೇಡಲ್,  ಕರ್ಮಾನ್ ವಿಂಗ್ಸ್ ಅವಾರ್ಡ್, ಕಿಂಗ್ಸ್ ಚಾಲ್ಸ್ ಮೇಡಲ್, ಗೌರವ ಡಾಕ್ಟರ್ ಸೈನ್, ರಾಮಾನುಜನ್ ಪ್ರಶಸ್ತಿ, ವೀರ್ ಸಾವರ್ಕರ್ ಪ್ರಶಸ್ತಿ, ಇಂದಿರಾ ಗಾಂಧಿ ನ್ಯಾಷಿನಲ್ ಇಂಟಲಿಜೆಟ್ ಪ್ರಶಸ್ತಿ, ಭಾರತ ಸರ್ಕಾರವು ೧೯೯೭ರಲ್ಲಿ ಭಾರತರತ್ನ ಪ್ರಶಸ್ತಿ, ಡಿ. ಫೇಲೋ, ಪದ್ಮ ವಿಭೂಷನ, ಪದ್ಮ ಭೂಷಣ ಇನ್ನು ಹಲವಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ವಿವಿಧ ವಿಶ್ವಿವಿದ್ಯಾಲಯಗಳಿಂದ ಸುಮಾರು ೩೦ ಗೌರವ ಡಾಕ್ಟರ್ ಪಡೆದಿರುವುದು ಇವರ ಹೆಗ್ಗಳಿಕೆ.

Advertisement

0 comments:

Post a Comment

 
Top