PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಜು.೨೫  ಕೊಪ್ಪಳ ಜಿಲ್ಲೆಯ ಗಿಣಗೇರಾದಲ್ಲಿ ೩೫ ರಿಂದ ೪೦ ವರ್ಷದೊಳಗಿನ ಅನಾಮಧೇಯ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಗುರುತು ಪತ್ತೆಗೆ ಸಹಕರಿಸುವಂತೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಎ.ಎಸ್.ಐ ರಾಮಪ್ಪ ಮನವಿ ಮಾಡಿದ್ದಾರೆ.  ಗಿಣಿಗೇರಾ ಗ್ರಾಮದ ಮೇನ್‌ರೋಡ್ ಪಕ್ಕದ ಕಾಯಿಗಡ್ಡಿ ಅಂಗಡಿಯ ಮುಂದೆ ಜು. ೨೪ ರಂದು ಅನಾಮಧೇಯ ಮೃತ ದೇಹ ಪತ್ತೆಯಾಗಿದೆ.  ಈ ಅಪರಿಚಿತ ಮೃತನ ವಯಸ್ಸು ಸುಮಾರು ೩೫ ರಿಂದ ೪೦ ವರ್ಷಗಳಿದ್ದು, ಮೃತನ ಸಾವಿನಲ್ಲಿ ಸಂಶಯವಿದೆ. ಈ ಕುರಿತು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
     ಮೃತ ವ್ಯಕ್ತಿಯ ಚಹರೆ ಇಂತಿದೆ.  ಮೃತ ವ್ಯಕ್ತಿಯು ಅಂಗವಿಕಲನಾಗಿದ್ದು, ಎಡಕಾಲಿನ ಪಾದ ಹೊರಳಿದೆ.  ಎತ್ತರ: ೫ ಫೀಟ್ ೬ ಇಂಚು, ಮಧ್ಯಮ ಮೈಕಟ್ಟು, ಕೆಂಪು ಮೈಬಣ್ಣ, ಕಪ್ಪು-ಬಿಳಿ ತಲೆಕೂದಲು, ಕಪ್ಪು-ಬಿಳಿ ಬಣ್ಣದ ಗಡ್ಡ ಹೊಂದಿದ್ದು, ಒಂದು ಕಂದು ಬಣ್ಣದ ಅಂಡರವೇಯರ್ ಧರಿಸಿರುತ್ತಾನೆ. ಈ ಚಹರೆಯುಳ್ಳ ಮೃತ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಕೊಪ್ಪಳ, ಕೊಪ್ಪಳ ಕಂಟ್ರೋಲ್ ರೂಂ, ನಂ: ೦೮೫೩೯-೨೩೦೧೦೦ ಮತ್ತು ೨೩೦೨೨೨, ಕೊಪ್ಪಳ ನಗರ ಪೊಲೀಸ್ ಠಾಣೆ ಪಿಎಸ್‌ಐ, ಮೊ.ಸಂ: ೯೪೮೦೮೦೩೭೪೬ ಮತ್ತು ನಗರ ಪೊಲೀಸ್ ಠಾಣೆ ಕೊಪ್ಪಳ ದೂರವಾಣಿ ಸಂಖ್ಯೆ : ೦೮೫೩೯-೨೨೧೩೩೩ ಕ್ಕೆ ತಿಳಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ. 

Advertisement

0 comments:

Post a Comment

 
Top