ಕರ್ನಾಟಕ ರಾಜ್ಯ ಸರಕಾರ ಮತ್ತು ಎಲ್ಲಾ ಎಸಾಂ ವಿದ್ಯುತ್ ಕಂಪನಿಗಳು ಕೋಟ್ಯಾಂತರ ರೂಫಾಯಿ ಟೆಂಡರ್ ಕರೆದು ಸ್ಥಳೀಯ ಗುತ್ತಿಗೆದಾರರಿಗೆ ವಿದ್ಯುತ್ ಕಾಮಗಾರಿ ಕೆಲಸ ಇಲ್ಲದೇ ಇರುವುದರಿಂದ ದಿನಾಂಕ ೧೫-೦೬-೨೦೧೫ ರಿಂದ ಎಲ್ಲಾ ವಿದ್ಯತ್ ಲೈನ್ ಕಾಮಗಾರಿ ನಿಲ್ಲಿಸಿ ಅನಿರ್ಧಿಷ್ಟಾವಧಿಯವರೆಗೆ ಮುಷ್ಕರ ಹಮಿಕೊಳ್ಳಲಾಗಿದೆ. ರಾಜ್ಯ ಸರ್ಕಾರದ ಗಮನಕ್ಕೆ ತರುವ ಸಲುವಾಗಿ ದಿನಾಂಕ ೨೫-೦೬-೨೦೧೫ ರಂದು ಕೊಪ್ಪಳ ಜಿಲ್ಲಾ ವಿದ್ಯುತ್ ಗುತ್ತಗೆದಾರರ ಸರ್ವ ಸದಸ್ಯರು ಕೊಪ್ಪಳ ನಗರ ಪ್ರದೇಶದಿಂದ ಮೆರವಣಿಗೆ ಮೂಲಕ ಕೊಪ್ಪ ಜಿಲ್ಲಾದಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ದರಿಸಿದ್ದೆವೆ.
ಬೇಡಿಕೆಗಳು:೧. ಕೋಟ್ಯಾಂತರ ರೂಫಾಯಿ ಪ್ಯಾಕೇಜ ಟೆಂಡರ್ ಕರೆಯುವದರಿಂದ ಸ್ಥಳೀಯ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ.
೨. ವಿದ್ಯತ್ ಗುತ್ತಿಗೆ ಕಾಮಗಾರಿಯನ್ನು ಸಿವಿಲ್ ಕಾಮಗಾರಿಯಿಂದ ಬೇರ್ಪಡಿಸುವುದು.
೩. ತುರ್ತು ಕೆಲಸಕ್ಕೆ ಎಸ್.ಆರ್. ದರದ ಮೇಲೆ ಶೇ. ೫೦% ಹೆಚ್ಚಾಗಿ ನೀಡಿ ಒಂದು ವಾರದಲ್ಲಿ ಹಣ ಪಾವತಿಸತಕ್ಕದ್ದು.
೪. ಇ & ಐ ಗಂಗಾ ಕಲ್ಯಾಣ ಕುಡಿಯುವ ನೀರಿನ ಕಾಮಗಾರಿ ೫ ಲಕ್ಷದ ಒಳಗಿನ ಕೆಲಸವನ್ನು ಸ್ಥಳೀಯ ವಿದ್ಯುತ್ ಗುತ್ತಿಗೆದಾರರಿಗೆ ಟೆಂಡರ ಕರೆಯದೇ ನೀಡುವ ಬಗ್ಗೆ.
೫. ಲೇಬರ್ ಅವಾರ್ಡ ಕೆಲಸ ನಿರ್ವಹಿಸುವ ವಿದ್ಯುತ್ ಗುತ್ತಿಗೆದಾರರಿಗೆ ಕೆಲಸ ಮುಗಿದ ನಂತರ ಒಂದು ತಿಂಗಳ ಬಿಲ್ ಹಣವನ್ನು ಪಾವತಿಸತಕ್ಕದ್ದು.
೬. ಯಾವುದೇ ವಿದ್ಯತ್ ಅಪಘಾತವಾದಲ್ಲಿ ವಿದ್ಯುತ್ ಕಂಪನಿವತಿಯಿಂದ ಪರಿಹಾರ ನೀಡುವುವದು.
೭. ಎಸ್ಕಾಂ ಕಂಪನಿಗಳು ವಿದ್ಯತ್ ಗುತ್ತಿಗೆಗದಾರರಿಗೆ ಮತ್ತು ಗ್ರಾಹಕರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ.
೮. ಟೆಂಡರ್ ಕರೆಯದೇ ಸ್ಟೇಷನ್ ಪಾಳಿ ಕೆಲಸ ನೀಡುವ ಬಗ್ಗೆ
೯. ಇನ್ನೂ ಹಲವಾರು ಸಮಸ್ಯೆಗಳ ಗ್ರಾಹಕರು ಹಾಗೂ ವಿದ್ಯತ್ ಗುತ್ತಿಗೆದಾರರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ.
ರಾಜ್ಯ ಸಮಿತಿ ರಾಜ್ಯಾಧ್ಯಕ್ಷ ಪ್ರಕಾಶ ಅಂಗಡಿ, ಹೋರಾಟ ಸಮಿತಿ ಅಧ್ಯಕ್ಷ ನಾಗರಾಜ ನೇತೃತ್ವದಲ್ಲಿ ಜಿಲ್ಲಾ ಸಮಿತಿ ಪಾದಾದಿಕಾರಿಗಳಾದ ಸಿ.ಸಿ. ಮೆಂಬರ್ ಬಸಪ್ಪ, ಹಾಲಸಮುದ್ರಾ ಕಾರಟಗಿ, ಮಹಾಬಳೇಶ್ವರ ಕೊಪ್ಪಳ, ಗಂಗಾವತಿ, ಉಪಾಧ್ಯಕ್ಷ ಎಂ,ಡಿ ಸರ್ರಫ್‌ರಾಜ ಕುಷ್ಟಗಿ, ಕಾರ್ಯದರ್ಶಿ ಎಂ.ಡಿ. ಮೌಲಾಸಾಬ ಬನ್ನಿಕೊಪ್ಪ, ಕೊಪ್ಪಳ, ತಾಲೂಕಾ ಅಧ್ಯಕ್ಷ ನಾರಾಯಣ ಹುಲಗಿ, ಕುಷ್ಟಗಿ ತಾಲೂಕಾ ಅಧ್ಯಕ್ಷ ಶರಣಪ್ಪ, ಹೋರಾಟ ಸಮಿತಿ ಕನಕಪ್ಪ ಚನ್ನದಾಸರ ಕೊಪ್ಪಳ, ಗಂಗಾವತಿ ತಾಲುಕಾ ಅಧ್ಯಕ್ಷ ಮಂಜುನಾಥ ಆನೆಗುಂದಿ ಹಾಗೂ ಖಜಾಂಚಿ ಅನಿಲಕುಮಾರ ದೇಸಾಯಿ ಗಂಗಾವತಿ, ತಿಳಿಸಿದ್ದಾರೆ.
0 comments:
Post a Comment