ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧೀನದಲ್ಲಿ ಮೈಸೂರಿನ ತಿಲಕನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಅಂಧ ಮತ್ತು ಶ್ರವಣದೋಷ ಮಕ್ಕಳ ಶಾಲೆಯಿಂದ ೭ ಅಂಧ ಮಕ್ಕಳು ನಾಪತ್ತೆಯಾಗಿ ೪ ದಿನಗಳು ಕಳೆದಿದೆ.ಈ ಒಂದು ಪ್ರಕರಣಕ್ಕೆ ಅಧಿಕಾರಿಗಳ ನಿರ್ಲಕ್ಯವೇ ಕಾರಣವಾಗಿದೆ.ಅಂಧ ಮಕ್ಕಳ ಬಗ್ಗೆ ಬೆಜವಾಬ್ದಾರಿಯ ವರ್ತನೆಯನ್ನು ತೋರಿಸಿರುವ ಅಧಿಕಾರಿಗಳನ್ನು ಸರ್ಕಾರವು ಕೂಡಲೇ ಅಮಾನತ್ತುಗೊಳಿಸಬೇಕು.ಅಲ್ಲದೆ ಶೀಘ್ರವೇ ಒಂದು ತಂಡವನ್ನು ರಚಿಸಿ ನಾಪತ್ತೆಯಾದ ಮಕ್ಕಳನ್ನು ಪತ್ತೆ ಹಚ್ಚುವಂತೆ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ,ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಿಮನಿ,ಜಿಲ್ಲಾಧ್ಯಕ್ಷರಾದ ಚನ್ನಬಸಪ್ಪ ಬೆಲ್ಲದ,ಜಿಲ್ಲಾ ಉಪಾಧ್ಯಕ್ಷರಾದ ಹೆಚ್.ಆರ್.ಹಂಜಕ್ಕಿ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗಪ್ಪ ದೇವನಾಳ,ಕೊಪ್ಪಳ ತಾಲೂಕ ಅಧ್ಯಕ್ಷರಾದ ಅಂದಪ್ಪ ಬೋಳರೆಡ್ಡಿ,ಕಾರ್ಯದರ್ಶಿ ನಾಗಪ್ಪ ಕಾತರಕಿ ಸರ್ಕಾರವನ್ನ ಒತ್ತಾಯಿಸಿದ್ದಾರೆ.
Subscribe to:
Post Comments (Atom)
0 comments:
Post a Comment