PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಜೂ.೨೬ - ಕೊಪ್ಪಳ ಜಿಲ್ಲೆಯ ಹುಲಿಗಿ ಗ್ರಾಮ ಪಂಚಾಯಿತಿ ವತಿಯಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರೋಜಗಾರ್ ದಿನಾಚರಣೆಯನ್ನು ಗುರುವಾರದಂದು ಕೆರೆಹಳ್ಳಿ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಆಚರಿಸಲಾಯಿತು.
     ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಪ್ರತಿ ದಿನಕ್ಕೆ ೨೦೪ ರೂ.ಗಳ ಕೂಲಿ ನೀಡುತ್ತಿದ್ದು, ಕಾಮಗಾರಿಯಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಕೂಲಿಕಾರರೂ ತಾವು ಕೆಲಸ ನಿರ್ವಹಿಸಿದಷ್ಟೇ ಕೂಲಿ ನೀಡುವ ನಿಯಮ ನರೇಗಾದಲ್ಲಿದೆ. ಎಲ್ಲಾ ಕಾಯಕ ಬಂಧುಗಳು ಯಾವುದೇ ರೀತಿ ತಾರತಮ್ಯ ಮಾಡದೇ ಕೂಲಿಕಾರರ ಸರಿಯಾದ ಹಾಜರಾತಿ ನೀಡಬೇಕು. ಕೂಲಿ ನಿರ್ವಹಿಸಿದ ೧೫ ದಿನಗಳೊಳಗಾಗಿ  ಬ್ಯಾಂಕ್ ಖಾತೆಗೆ ಕೂಲಿ ಹಣ ಜಮಾ ಮಾಡಲಾಗುತ್ತದೆ. ಪ್ರಸಕ್ತ ವರ್ಷದಲ್ಲಿ ಕೂಲಿ ನಿರ್ವಹಿಸುವ ಎಲ್ಲಾ ಕೂಲಿಕಾರರು ಆಧಾರ ಕಾರ್ಡ್ ಹೊಂದುವುದು ಕಡ್ಡಾಯವಾಗಿದ್ದು, ಅದರಂತೆ ಗ್ರಾಮ ಪಂಚಾಯಿತಿ ವತಿಯಿಂದ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಪಾವತಿಸಲಾಗುವುದು. ಕೂಲಿಕಾರ್ಮಿಕರಲ್ಲಿ ಸಂಘಟನಾ ಮನೋಭಾವನೆ ಮತ್ತು ಸಮಾನತೆಯನ್ನು ಕಾಪಾಡಿಕೊಳ್ಳಲು ರೋಜಗಾರ ದಿನಾಚರಣೆ ಸಹಕಾರಿಯಾಗಿದೆ ಎಂದು ಅವರು ತಿಳಿಸಿದರು.
     ಸಮಾರಂಭದಲ್ಲಿ ರೋಜಗಾರ್ ದಿನಾಚರಣೆ ಸಂದರ್ಭದಲ್ಲಿ ಕೂಲಿಕಾರರ ಸಮಸ್ಯೆಗಳ ಇತ್ಯರ್ಥಪಡಿಸಲು, ಹೊಸದಾಗಿ ಜಾಬ್ ಕಾರ್ಡ್ ವಿತರಣೆ, ನಮೂನೆ-೦೬ ಸ್ವೀಕರಣೆ ಇತ್ಯಾದಿ ವಿಷಯಗಳ ಕುರಿತು ಕಾರ್ಮಿಕರಲ್ಲಿ ಅರಿವು ಮೂಡಿಸಲಾಯಿತು.  ದಿನಾಚರಣೆಯಲ್ಲಿ ತಾಲೂಕಾ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಹಾಯಕರಾದ ಶರಣಯ್ಯಸ್ವಾಮಿ, ಎ.ಎನ್.ಲೀಲಾವತಿ, ಕರ ವಸೂಲಿಗಾರ ಜಿಲಾನ್ ಸೇರಿದಂತೆ ಕಾರ್ಮಿಕರು ಉಪಸ್ಥಿತರಿದ್ದರು.   

Advertisement

0 comments:

Post a Comment

 
Top