ಕೊಪ್ಪಳ ನಗರದ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಸ್ಥಾಪಿಸಿರುವ ಮತ ಎಣಿಕೆ ಕೇಂದ್ರದಲ್ಲಿನ ಸಿದ್ಧತೆ ಬಗ್ಗೆ ಗುರುವಾರದಂದು ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೊಪ್ಪಳ ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿಗಳಿಗೆ ನಡೆದ ಚುನಾವಣೆಗೆ ಸಂಬಂಧಿಸಿದಂತೆ ಮತಗಳ ಎಣಿಕೆ ಕಾರ್ಯ ಜೂ. ೦೫ ರಂದು ಬೆಳಿಗ್ಗೆ ೮ ಗಂಟೆಯಿಂದ ಆಯಾ ತಾಲೂಕುಗಳಲ್ಲಿ ಪ್ರಾರಂಭವಾಗಲಿದ್ದು, ಸಂಜೆ ೦೬ ಗಂಟೆಯ ವೇಳೆಗೆ ಎಣಿಕೆ ಕಾರ್ಯ ಪೂರ್ಣಗೊಳ್ಳುವ ವಿಶ್ವಾಸವಿದೆ. ಮತ ಎಣಿಕೆ ಸುಗಮವಾಗಿ ನಡೆಯಲು ಅನುಕೂಲವಾಗುವಂತೆ ಕೊಪ್ಪಳ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಈ ಸಂದರ್ಭದಲ್ಲಿ ಹೇಳಿದರು. ಕೊಪ್ಪಳ ತಹಸಿಲ್ದಾರ್ ಪುಟ್ಟರಾಮಯ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಿಬ್ಬಂದಿ : ಗ್ರಾಮ ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ಮತ ಎಣಿಕೆಗೆ ಆಯಾ ತಾಲೂಕುಗಳಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಕೊಪ್ಪಳ ತಾಲೂಕಿಗೆ ಸಂಬಂಧಿಸಿದ ಗ್ರಾಮ ಪಂಚಾಯತಿಗಳ ಮತ ಎಣಿಕಾ ಕಾರ್ಯ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ ನಡೆಯಲಿದೆ. ಇಲ್ಲಿ ಈಗಾಗಲೆ ಮತ ಎಣಿಕೆಗಾಗಿ ೨೫ ಕೊಠಡಿಗಳನ್ನು ಸಿದ್ಧಪಡಿಸಲಾಗಿದ್ದು, ೧೨೩ ಟೇಬಲ್‌ಗಳನ್ನು ಜೋಡಿಸಲಾಗಿದೆ. ಪ್ರತಿ ಟೇಬಲ್‌ಗೆ ಒಬ್ಬರು ಮೇಲ್ವಿಚಾರಕರು ಮತ್ತು ಇಬ್ಬರು ಎಣಿಕೆ ಸಹಾಯಕರು ಸೇರಿದಂತೆ ಒಟ್ಟು ೩೬೯ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಗಂಗಾವತಿ ತಾಲೂಕಿಗೆ ಸಂಬಂಧಿಸಿದ ಗ್ರಾ.ಪಂ. ಗಳ ಮತ ಎಣಿಕೆ ಗಂಗಾವತಿ ನಗರದ ಜನತಾ ಸೇವಾ ಶಿಕ್ಷಣ ಸಂಸ್ಥೆ (ಜೆ.ಎಸ್.ಎಸ್.) ನಲ್ಲಿ ನಡೆಯಲಿದ್ದು, ಮತ ಎಣಿಕೆಗೆ ಇಲ್ಲಿ ೩೭ ಕೊಠಡಿಗಳಲ್ಲಿ ೧೨೦ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟು ೩೬೦ ಸಿಬ್ಬಂದಿಗಳನ್ನು ಮತ ಎಣಿಕಾ ಕಾರ್ಯಕ್ಕೆ ನೇಮಕ ಮಾಡಲಾಗಿದೆ. ಕುಷ್ಟಗಿ ತಾಲೂಕಿಗೆ ಸಂಬಂಧಿಸಿದಂತೆ ಮತಗಳ ಎಣಿಕಾ ಕಾರ್ಯ ಕುಷ್ಟಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ. ಇಲ್ಲಿ ಮತಗಳ ಎಣಿಕೆಗೆ ೧೭ ಕೊಠಡಿಗಳಲ್ಲಿ ೧೨೧ ಟೇಬಲ್‌ಗಳ ವ್ಯವಸ್ಥೆಗೊಳಿಸಿದ್ದು, ೩೬೩ ಸಿಬ್ಬಂದಿಗಳು ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಯಲಬುರ್ಗಾ ತಾಲೂಕಿಗೆ ಸಂಬಂಧಿಸಿದಂತೆ ಕುಕನೂರಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಲಿದ್ದು, ೧೨ ಕೊಠಡಿಗಳಲ್ಲಿ ೧೨೦ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಒಟ್ಟು ೩೬೦ ಸಿಬ್ಬಂದಿಗಳು ಮತ ಎಣಿಕೆ ಕಾರ್ಯ ನಿರ್ವಹಿಸಲಿದ್ದಾರೆ. ಎಣಿಕಾ ಕೇಂದ್ರದ ಕಾರ್ಯಚಟುವಟಿಕೆಗಳ ವಿಡಿಯೋ ಚಿತ್ರೀಕರಣಕ್ಕಾಗಿ ಪ್ರತಿ ಎಣಿಕಾ ಕೇಂದ್ರಕ್ಕೆ ಒಬ್ಬರು ವಿಡಿಯೋಗ್ರಾಫರ್ ಅನ್ನು ನೇಮಿಸಲಾಗಿದೆ.
ಬಂದೋಬಸ್ತ್ : ಮತ ಎಣಿಕೆ ಕಾರ್ಯ ಸುಗಮ ಮತ್ತು ಶಾಂತಿಯುತವಾಗಿ ನಡೆಯಲು ಅನುಕೂಲವಾಗುವಂತೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದೆ. ಮತ ಪೆಟ್ಟಿಗೆ ಇರಿಸಲಾಗಿರುವ ಪ್ರತಿ ಭದ್ರತಾ ಕೋಣೆಗಳಿಗೆ ನಾಲ್ಕು ಜನ ಗಾರ್ಡ್‌ಗಳನ್ನು ೦೨ ಶಿಫ್ಟ್‌ನಂತೆ ನಿಯೋಜಿಸಲಾಗಿದೆ. ಇದರ ಜೊತೆಗೆ ದಿನದ ೨೪ ಗಂಟೆಗಳ ಕಾಲ ಸರದಿ ಪ್ರಕಾರ ೦೧-ಸಿಪಿಐ, ೦೧-ಪಿಎಸ್‌ಐ, ೦೧-ಎಎಸ್‌ಐ, ೦೨-ಹೆಡ್ ಕಾನ್ಸ್‌ಟೇಬಲ್, ೦೬- ಪೊಲೀಸ್ ಕಾನ್ಸ್‌ಟೇಬಲ್‌ಗಳು ಮತ ಎಣಿಕೆ ಮುಗಿಯುವವರೆಗೂ ಕಾರ್ಯ ನಿರ್ವಹಿಸಲಿದ್ದಾರೆ. ಮತ ಎಣಿಕೆ ಕಾರ್ಯ ನಡೆಯುವ ಕಟ್ಟಡದ ಸುತ್ತಲೂ ಸಿವಿಲ್/ಡಿಎಆರ್/ಕೆಎಸ್‌ಆರ್‌ಪಿ ತುಕಡಿಗಳನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿದೆ. ಪ್ರತಿಯೊಂದು ಮತ ಎಣಿಕೆ ಕೊಠಡಿಗೆ ೦೧-ಹೆಡ್ ಕಾನ್ಸ್‌ಟೇಬಲ್, ೦೧- ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ನಿಯೋಜಿಸಲಾಗಿದ್ದು, ಇವರ ಮೇಲುಸ್ತುವಾರಿಗಾಗಿ ಎಎಸ್‌ಐ/ಪಿಎಸ್‌ಐ/ಪಿಐ ಗಳು ಇರುತ್ತಾರೆ. ಜಿಲ್ಲೆಯಲ್ಲಿ ನಡೆಯುವ ಮತ ಎಣಿಕೆ ಕಾರ್ಯದ ಬಂದೋಬಸ್ತ್‌ಗಾಗಿ ಒಟ್ಟು ೦೨-ಡಿವೈಎಸ್‌ಪಿ, ೦೮-ಪಿಐ, ೧೮-ಪಿಎಸ್‌ಐ, ೩೬-ಎಎಸ್‌ಐ, ೧೦೩-ಹೆಚ್‌ಸಿ, ೨೧೧-ಪಿಸಿ, ೨೦೦-ಹೋಂಗಾರ್ಡ್ಸ್, ೧೧-ಡಿಎಆರ್ ಮತ್ತು ೦೨-ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.
ಕೊಪ್ಪಳ ತಾಲೂಕಿಗೆ ೦೩-ಪಿಐ, ೦೮-ಪಿಎಸ್‌ಐ, ೧೫-ಎಎಸ್‌ಐ, ೩೮-ಹೆಚ್‌ಸಿ, ೮೦-ಪಿಸಿ, ೫೦-ಹೋಂಗಾರ್ಡ್ಸ್, ೦೩- ಡಿಎಆರ್ ತುಕಡಿ, ೦೧- ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ. ಅದೇ ರೀತಿ ಯಲಬುರ್ಗಾ ತಾಲೂಕಿಗೆ ೦೨-ಪಿಐ, ೦೪-ಪಿಎಸ್‌ಐ, ೦೭-ಎಎಸ್‌ಐ, ೧೭-ಹೆಚ್‌ಸಿ, ೪೮-ಪಿಸಿ, ೫೦-ಹೋಂಗಾರ್ಡ್ಸ್, ೦೩- ಡಿಎಆರ್ ತುಕಡಿ ನಿಯೋಜಿಸಲಾಗಿದೆ. ಕೊಪ್ಪಳ ಮತ್ತು ಯಲಬುರ್ಗಾ ತಾಲೂಕಿಗೆ ಒಬ್ಬರು ಡಿವೈಎಸ್‌ಪಿ ಕಾರ್ಯ ನಿರ್ವಹಿಸಲಿದ್ದಾರೆ. ಗಂಗಾವತಿ ತಾಲೂಕಿಗೆ ೦೧-ಪಿಐ, ೦೩-ಪಿಎಸ್‌ಐ, ೦೬-ಎಎಸ್‌ಐ, ೩೦-ಹೆಚ್‌ಸಿ, ೩೦-ಪಿಸಿ, ೫೦-ಹೋಂಗಾರ್ಡ್ಸ್, ೦೩- ಡಿಎಆರ್ ತುಕಡಿ, ೦೧- ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ. ಕುಷ್ಟಗಿ ತಾಲೂಕಿಗೆ ೦೨-ಪಿಐ, ೦೩-ಪಿಎಸ್‌ಐ, ೦೮-ಎಎಸ್‌ಐ, ೧೮-ಹೆಚ್‌ಸಿ, ೫೩-ಪಿಸಿ, ೫೦-ಹೋಂಗಾರ್ಡ್ಸ್, ೦೨- ಡಿಎಆರ್ ತುಕಡಿ ನಿಯೋಜಿಸಲಾಗಿದೆ. ಗಂಗಾವತಿ ಮತ್ತು ಕುಷ್ಟಗಿ ತಾಲೂಕಿಗೆ ಒಬ್ಬರು ಡಿವೈಎಸ್‌ಪಿ ಕಾರ್ಯ ನಿರ್ವಹಿಸಲಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಪೂರ್ಣಗೊಂಡಿದ್ದು, ಅದೇ ರೀತಿ ಮತ ಎಣಿಕೆ ಕಾರ್ಯವನ್ನು ಸುಗಮ ಮತ್ತು ಶಾಂತಿಯುತವಾಗಿ ಜರುಗಲು ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಮನವಿ ಮಾಡಿಕೊಂಡಿದ್ದಾರೆ.
0 comments:
Post a Comment