PLEASE LOGIN TO KANNADANET.COM FOR REGULAR NEWS-UPDATES

  ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ವಿವಿಧ ಗ್ರಾಮ ಪಂಚಾಯಿತಿಗಳಿಗೆ ಚುನಾವಣಾಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಆದೇಶ ಹೊರಡಿಸಿದ್ದಾರೆ. 
  ಕೊಪ್ಪಳ ತಾಲೂಕಿನ ೩೯ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸಲು ೩೯   ಚುನಾವಣಾಧಿಕಾರಿಗಳು ಹಾಗೂ ೪೫ ಸಹಾಯಕ ಚುನಾವಣಾಧಿಕಾರಿಗಳು ಸೇರಿದಂತೆ ಒಟ್ಟು ೮೪  ಅಧಿಕಾರಿಗಳನ್ನು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾರ್ಯನಿರ್ವಹಿಸಲು ನೇಮಿಸಲಾಗಿದ್ದು, ನೇಮಕಗೊಂಡಿರುವ ಚುನಾವಣಾಧಿಕಾರಿಗಳ ವಿವರ ಇಂತಿದೆ.
  ಕವಲೂರು ಗ್ರಾಮ ಪಂಚಾಯಿತಿಗೆ ಆರ್. ಗುರುಬಸವರಾಜ, ವಿಷಯ ನಿರೀಕ್ಷಕ, ಡಿಡಿಪಿಐ ಕಛೇರಿ, ಕೊಪ್ಪಳ ಇವರನ್ನು ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಹಟ್ಟಿ-ಸತ್ಯನಾರಾಯಣ, ರೇಷ್ಮೆ ವಿಸ್ತರಣಾಧಿಕಾರಿ,  ಅಳವಂಡಿ-ಶಂಕ್ರಪ್ಪ, ಸಹಾಯಕ ಅಭಿಯಂತರ, ಜಿಲ್ಲಾ ಪಂಚಾಯತ್ ಉಪವಿಭಾಗ.  ಬೋಚನಹಳ್ಳಿ-ನಾಗಲಿಂಗಪ್ಪ ಖಂಡ್ರಿ, ಉಪನ್ಯಾಸಕರು, ಸರಕಾರಿ ಪ.ಪೂ. ಕಾಲೇಜು, ಭಾಗ್ಯನಗರ. ಬೆಟಗೇರಿ-ವೀರಣ್ಣ ಶೆಟ್ಟಿ, ಸಹಾಯಕ ಇಂಜಿನಿಯರ್, ಪಿಎಂಜಿಎಸ್‌ವೈ, ಕೊಪ್ಪಳ. ಮತ್ತೂರು-ಶರಣಪ್ಪ, ಕೋ-ಆರ್ಡಿನೇಟರ್, ಬಿಆರ್‌ಸಿ, ಕೊಪ್ಪಳ. ಕಾತರಕಿ-ಗುಡ್ಲಾನೂರು- ಬಸಯ್ಯ ಅಂಗಡಿ, ಕಾರ್ಮಿಕ ನಿರೀಕ್ಷಕರು, ಕೊಪ್ಪಳ, ಬಿಸರಳ್ಳಿ-ಭೀಮಪ್ಪ, ಸಹಾಯಕ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಪ್ಪಳ, ಹಿರೇಸಿಂದೋಗಿ- ಎಂ.ಎ. ಪ್ರಬಣ್ಣನವರ, ಸಹಾಯಕ ನಿರ್ದೆಶಕರು, ನಗರಾಬಿವೃದ್ದಿ ಪ್ರಾಧಿಕಾರ, ಕೊಪ್ಪಳ. ಕೋಳೂರು- ಕೀರ್ತಪ್ಪ ಗೋಟೂರು, ಸಹಾಯಕ ನಿರ್ದೆಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಕೊಪ್ಪಳ. ಹಲಗೇರಿ-ದೇವೇಂದ್ರಕುಮಾರ ದೊಡ್ಡಮನಿ, ಉಪನ್ಯಾಸಕರು, ಸರ್ಕಾರಿ ಪ.ಪೂ ಕಾಲೇಜು ಹೊಸಬಂಡಿಹರ್ಲಾಪುರ. ಓಜನಹಳ್ಳಿ-ಎ.ಕೆ. ತುಪ್ಪದ, ಉಪಪ್ರಾಚಾರ್ಯರು, ಸರಕಾರಿ ಬಾಲಕರ ಪ.ಪೂ. ಕಾಲೇಜು, ಕೊಪ್ಪಳ. ಮಾದಿನೂರು-ರಮೇಶ, ಸಹಾಯಕ ತೋಟಗಾರಿಕೆ ಅಧಿಕಾರಿ, ಕೊಪ್ಪಳ. ಕಿನ್ನಾಳ-ರಾಚಪ್ಪ ಕೇಸರಬಾವಿ, ಉಪನ್ಯಾಸಕರು, ಸರಕಾರಿ ಪ.ಪೂ ಕಾಲೇಜು, ಹಿರೇಸಿಂಧೋಗಿ. ಲೇಬಗೇರಿ-ಶಾಂತಪ್ಪ, ಕಿರಿಯ ಉಪನ್ಯಾಸಕರು, ಡಯಟ್ ಮುನಿರಾಬಾದ. ಇರಕಲ್ಲಗಡಾ-ಚಿದಾನಂದ, ತಾಲೂಕು ಸಮಾಜ ಕಲ್ಯಾಣ  ಅಧಿಕಾರಿಗಳು, ಕೊಪ್ಪಳ. ಚಿಕ್ಕಬೊಮ್ಮನಾಳ-ಕೊಟ್ರಪ್ಪ, ಉಪನ್ಯಾಸಕರು, ಸರಕಾರಿ ಬಾಲಕರ ಪ.ಪೂ. ಕಾಲೇಜು, ಕೊಪ್ಪಳ. ಹಾಸಗಲ್-ಪರಸಪ್ಪ ಭಜಂತ್ರಿ, ಶಿಕ್ಷಣಾಧಿಕಾರಿಗಳು, ಅಕ್ಷರ ದಾಸೋಹ, ಕೊಪ್ಪಳ. ತಾವರಗೇರಿ-ಅಸ್ಲಾಂಖಾನ್, ಸಹಶಿಕ್ಷಕ ಸರ್ಕಾರಿ ಪ್ರೌಢಶಾಲೆ, ಬಂಡಿಹರ್ಲಾಪುರ. ಇಂದರಗಿ-ಉದಯಕುಮಾರ, ಸಹಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಕೂಕನಪಳ್ಳಿ. ಬೂದಗುಂಪಿ-ರವೀಂದ್ರನಾಗನಾಥ್, ಸಹಾಯಕ ಅಭಿಯಂತರರು, ಮುನಿರಾಬಾದ್. ಬಂಡಿಹರ್ಲಾಪೂರ-ನಿರಂಜನಮೂರ್ತಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಮುನಿರಾಬಾದ್. ಶಿವಪೂರ-ವಿದ್ಯಾಧರ, ಉಪನ್ಯಾಸಕರು, ಸರ್ಕಾರಿ ಪ.ಪೂ. ಕಾಲೇಜು, ಭಾಗ್ಯನಗರ. ಹುಲಗಿ-ಎನ್. ಚೌಡಯ್ಯ, ಸಹಾಯಕ ಅಭಿಯಂತರರು,  ಮುನಿರಾಬಾದ್. ಮುನಿರಾಬಾದ ಯೋಜನಾ ಗ್ರಾಮ-ಉದಯಸಿಂಗ್ ವಿ.ಎಸ್, ಉಪನ್ಯಾಸಕರು, ಸರ್ಕಾರಿ ಪ.ಪೂ ಕಾಲೇಜ್, ಭಾಗ್ಯನಗರ. ಹೊಸಳ್ಳಿ-ವಿರುಪಾಕ್ಷಯ್ಯ, ಕಿರಿಯ ಉಪನ್ಯಾಸಕರು, ಡಯಟ್, ಮುನಿರಾಬಾದ. ಅಗಳಕೇರಿ-ಬಿ.ಎಲ್. ಬಸಾಪುರ್, ಸಹಾಯಕ ಅಭಿಯಂತರರು, ಮುನಿರಾಬಾದ್.  ಹಿಟ್ನಾಳ-ಬಸಪ್ಪ ಜಾನಕರ್, ಸಹಾಯಕ ಇಂಜಿನೀಯರ್, ತುಂಗಭದ್ರಾ ಯೋಜನಾ ವೃತ್ತ, ಮುನಿರಾಬಾದ್. ಗುಳದಳ್ಳಿ-ದುರ್ಗಾಪ್ರಸಾದ, ಸಹಾಯಕ ತೋಟಗಾರಿಕೆ ಅಧಿಕಾರಿ, ಕೊಪ್ಪಳ. ಗಿಣಿಗೇರಿ-ಪ್ರಭು ಮಾನೆ, ಯೋಜನಾ, ಅಂದಾಜು & ಮೌಲ್ಯಮಾಪನಾಧಿಕಾರಿ, ಜಿಲ್ಲಾ ಪಂಚಾಯತ್, ಕೊಪ್ಪಳ. ಹಿರೇಬಗನಾಳ-ಸತೀಶ್, ಸಹಾಯಕ ಅಭಿಯಂತರರು, ಕಾಡಾ ಟಿಬಿಪಿ, ಮುನಿರಾಬಾದ್. ಕುಣಿಕೇರಿ-ವೀರಭದ್ರಯ್ಯ, ಕಿರಿಯ ಉಪನ್ಯಾಸಕರು, ಡಯಟ್, ಮುನಿರಾಬಾದ.  ಗೊಂಡಬಾಳ-ರಾಮರೆಡ್ಡಿ, ಸಹಶಿಕ್ಷಕ ಸರ್ಕಾರಿ ಪ್ರೌಢಶಾಲೆ ಬೆಂಕಿನಗರ. ಕೊಪ್ಪಳ. ಬಹದ್ದೂರಬಂಡಿ-ಸಿದ್ದಲಿಂಗ ಸ್ವಾಮಿ, ಸಹಾಯಕ ನಿರ್ದೇಶಕರು, ಸಣ್ಣ ಉಳಿತಾಯ ಇಲಾಖೆ, ಕೊಪ್ಪಳ. ಹಾಲವರ್ತಿ-ಪಂಪಾಪತಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಮುನಿರಾಬಾದ. ಕಲಕೇರಿ-ಮಲ್ಲಪ್ಪ, ಉಪನ್ಯಾಸಕರು, ಸರಕಾರಿ ಬಾಲಕರ ಪ.ಪೂ. ಕಾಲೇಜು, ಕೊಪ್ಪಳ. ಬೇವಿನಹಳ್ಳಿ-ಮನೋಹರ, ಕಿರಿಯ ಉಪನ್ಯಾಸಕರು, ಡಯಟ್, ಮುನಿರಾಬಾದ. ವನಬಳ್ಳಾರಿ-ಭೀಮಪ್ಪ ಕಸಾಳೆ, ಮುಖ್ಯಗುರು, ಸರ್ಕಾರಿ ಪ್ರೌಢಶಾಲೆ, ಕೂಕನಪಳ್ಳಿ ಇವರನ್ನು ಚುನಾವಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

  ಗಂಗಾವತಿ ತಾಲೂಕು : ಗ್ರಾ.ಪಂ. ಚುನಾವಣಾಧಿಕಾರಿಗಳ ನೇಮಕ
 ಗಂಗಾವತಿ ತಾಲೂಕಿನ ೪೨ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸಲು ೪೨   ಚುನಾವಣಾಧಿಕಾರಿಗಳು ಹಾಗೂ ೪೭ ಸಹಾಯಕ ಚುನಾವಣಾಧಿಕಾರಿಗಳು ಸೇರಿದಂತೆ ಒಟ್ಟು ೮೯  ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ನೇಮಿಸಿ ಆದೇಶ ಹೊರಡಿಸಿದ್ದಾರೆ.
  ಗ್ರಾಮ ಪಂಚಾಯತಿಗಳಿಗೆ ಚುನಾವಣಾಧಿಕಾರಿಗಳಾಗಿ ನೇಮಕಗೊಂಡಿರುವವರ ವಿವರ ಇಂತಿದೆ.  ಆನೆಗೊಂದಿ ಗ್ರಾಮ ಪಂಚಾಯಿತಿಗೆ ಕೆ.ಎಸ್. ಸುರೇಶ, ಸರ್ಕಾರಿ ಪ್ರೌಢಶಾಲೆ, ಢಣಾಪುರ ಇವರನ್ನು ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಸಂಗಾಪೂರ- ಮುರಳಿಧರ, ಉಪನ್ಯಾಸಕರು, ಸ.ಪ.ಪೂ ಕಾಲೇಜು, ನವಲಿ. ಮಲ್ಲಾಪೂರ-ಅಶೋಕ ಸಿದ್ದಪ್ಪ ಗೌಡರ, ಸರಕಾರಿ ಪ್ರೌಢಶಾಲೆ, ಮುಕ್ಕುಂಪಿ.  ಚಿಕ್ಕಜಂತಕಲ್- ವಿಜಯಕುಮಾರ, ಸಹಾಯಕ ಇಂಜಿನಿಯರ್, ಗಂಗಾವತಿ. ಢಣಾಪೂರ-ನಿಂಗಪ್ಪ, ಕೃಷಿ ಅಧಿಕಾರಿ,   ಗಂಗಾವತಿ. ಉಳೇನೂರು- ಮನೋಹರ ಜಿ.ಎಸ್, ಸರಕಾರಿ ಉನ್ನತಿಕರಿಸಿದ ಪ್ರೌಢಶಾಲೆ, ಗುಂಡೂರು. ಬೆನ್ನೂರು- ಮಲ್ಲಪ್ಪ ಅಡ್ಡೇರು, ಸರಕಾರಿ ಉನ್ನತಿಕರಿಸಿದ ಪ್ರೌಢಶಾಲೆ, ಬರಗೂರು. ಬೂದಗುಂಪಾ-ಆರ್.ಟಿ.ನಾಯಕ್, ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ, ಗಂಗಾವತಿ. ಯರಡೋಣ-ನಾಗಪ್ಪ, ಸಹಾಯಕ ಅಭಿಯಂತರರು, ಕಾರಟಗಿ. ಶ್ರೀರಾಮನಗರ-ವಸಂತಪ್ಪ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕರು, ಗಂಗಾವತಿ, ಮರಳಿ-ಹುಂಬಣ್ಣ ರಾಠೋಡ, ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳು, ಸಂಗಾಪೂರ. ವಡ್ಡರಹಟ್ಟಿ-ಡಾ. ಎ. ಸತೀಶಕುಮಾರ, ಸಹಾಯಕ ನಿರ್ದೇಶಕರು, ಕೋಳಿ ಸಾಗಾಣಿಕೆ ಮತ್ತು ಸಂವರ್ಧನಾ ಕೇಂದ್ರ, ಗಂಗಾವತಿ. ಬಸಾಪಟ್ಟಣ-ಗವಿಸಿದ್ದಯ್ಯ, ಸರ್ಕಾರಿ ಪ್ರೌಢಶಾಲೆ, ಮೈಲಾಪುರ. ವೆಂಕಟಗಿರಿ-ಮಂಜುನಾಥ ಎ.ಆರ್, ಉಪನ್ಯಾಸಕರು, ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು, ಗಂಗಾವತಿ. ಆಗೋಲಿ-ಸುರೇಶಕುಮಾರ, ಕೃಷಿ ಅಧಿಕಾರಿ, ಬೀಜ ಪರೀಕ್ಷಾ ಪ್ರಯೋಗಾಲಯ, ವಡ್ಡರಹಟ್ಟಿ. ಚಿಕ್ಕಬೆಣಕಲ್-ಬಿ.ಹೆಚ್ ಮಂಜುನಾಥ, ವಡ್ಡರಹಟ್ಟಿ ಕ್ಯಾಂಪ್. ಚಿಕ್ಕಮಾದಿನಾಳ-ಸಂಜಯ ಬಿ. ಸಜ್ಜನರ ಉಪನ್ಯಾಸಕರು, ಸ.ಪ.ಪೂ ಕಾಲೇಜ್, ಕನಕಗಿರಿ. ಸುಳೇಕಲ್-ವೆಂಕಟೇಶ, ಪ್ರಾಂಶುಪಾಲರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಕನಕಗಿರಿ. ಹಿರೇಖೇಡ-ಎಚ್.ಎಸ್. ಚಂದ್ರಶೇಖರ, ಸರ್ಕಾರಿ ಪ್ರೌಢಶಾಲೆ, ಇಸ್ಲಾಂಪುರ.  ಕೆಸರಹಟ್ಟಿ-ಮಂಜುನಾಥ,  ಹೇರೂರು ಸರಕಾರಿ ಪ್ರೌಢಶಾಲೆ. ಹೇರೂರು-ಕೆ. ದಯಾನಂದಬಾಬು,   ಸರಕಾರಿ ಪ್ರೌಢಶಾಲೆ, ಬಸಾಪಟ್ಟಣ. ಹೊಸಕೇರಾ-ಚಂದ್ರಗೌಡ ಕೆ.ಎನ್, ಸರಕಾರಿ ಪ್ರೌಢಶಾಲೆ ಹಣವಾಳ. ಹಣವಾಳ-ನುಸರತ್ ಅಲಿ, ಸಹಾಯಕ ಅಭಿಯಂತರರು, ಲೋಕೊಪಯೋಗಿ ಇಲಾಖೆ, ಗಂಗಾವತಿ. ಗುಂಡೂರು-ವೈಜನಾಥ ಹಿರೇಮಠ, ಪ್ರಾಂಶುಪಾಲರು, ಸಿ.ಎನ್.ಆರ್ ಸರಕಾರಿ ಪ್ರಥಮ ದರ್ಜೆ ಕಾಲೇಜು, ಶ್ರೀರಾಮನಗರ. ಮರಲಾನಹಳ್ಳಿ-ಎನ್.ವಿಜಯಕುಮಾರ   ಸರಕಾರಿ ಪ್ರೌಢಶಾಲೆ, ಯರಡೋಣಾ. ಹುಳ್ಕಿಹಾಳ-ರಾಘವೇಂದ್ರ ಕಂಠಿ, ಸರಕಾರಿ ಪ್ರೌಢಶಾಲೆ, ಸೋಮನಾಳ. ಕಾರಟಗಿ- ಕೃಷ್ಣಮೂರ್ತಿ, ಎ.ಇ.ಇ, ಜಿ.ಪಂ. ಉಪ ವಿಭಾಗ, ಗಂಗಾವತಿ. ಚಳ್ಳೂರು-ಮಲ್ಲಿಕಾರ್ಜುನ ಎಸ್. ಗೊಣ್ಣಾಗರ, ಸರ್ಕಾರಿ ಪ್ರೌಢ ಶಾಲೆ, ಬೂದಗುಂಪಾ. ಚಿಕ್ಕಡಂಕನಕಲ್-ಚಂದ್ರಪ್ಪ ಹೆಚ್.ಕೆ, ಉಪಪ್ರಾಂಶುಪಾಲರು, ಸರ್ಕಾರಿ ಪದವಿ ಪೂರ್ವ ಕಾಲೇಜು ಕನಕಗಿರಿ. ಕನಕಗಿರಿ-ಜಂಬಣ್ಣ ಎಸ್. ಐಲಿ, ಸಹಾಯಕ ಕೃಷಿ ನಿರ್ದೇಶಕರು, ಗಂಗಾವತಿ. ಗೌರಿಪುರ-ಎ.ಚಂದ್ರಶೇಖರ, ಸರ್ಕಾರಿ ಪ್ರೌಢಶಾಲೆ, ಹುಲಿಹೈದರ. ಹುಲಿಹೈದರ-ಮಹಾಂತೇಶ ಎನ್. ಸರ್ಕಾರಿ ಪ್ರೌಢಶಾಲೆ, ಮುಸಲಾಪುರ. ಕರಡೋಣ-ನಾಗರಾಜ ಹೆಚ್.ಎಂ, ಸಹಾಯಕ ಪ್ರಾಧ್ಯಾಪಕರು, ಸಿ.ಎನ್.ಆರ್. ಸ.ಪ್ರ ಕಾಲೇಜ್, ಶ್ರೀರಾಮನಗರ.  ನವಲಿ-ಶ್ರೀನಿವಾಸ.ಎ, ಸ.ಕಾ.ನಿ ಅಭಿಯಂತರರ ಕಛೇರಿ,  ಕಾರಟಗಿ. ಬೇವಿನಾಳ- ಕುಮಾರ ಸುಂಕಮ್ಮನವರ, ಉಪನ್ಯಾಸಕರು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಕಾರಟಗಿ.  ಮುಸಲಾಪೂರ-ಲಕ್ಷ್ಮಪ್ಪ ಚಂದಪ್ಪ,  ಸ.ಪ್ರೌ ಶಾಲೆ, ವೆಂಕಟಗಿರಿ.  ಬರಗೂರು-ರೋಷಣ್ಣ, ಸರ್ಕಾರಿ ಉನ್ನತಿಕರಿಸಿದ ಪ್ರೌಢಶಾಲೆ, ಮರಳಿ.  ಸಣಾಪೂರ-ರಾಮಪ್ಪ, ಉಪಪ್ರಾಂಶುಪಾಲರು, ಎಂ.ಎನ್.ಎಂ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು, ಗಂಗಾವತಿ. ಜಂಗಮರ ಕಲ್ಗುಡಿ-ಬಸವೇಶ್ವರ, ಪತ್ರಾಂಕಿತ ವ್ಯವಸ್ಥಾಪಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಗಂಗಾವತಿ. ಮೈಲಾಪೂರ-ಮೆಹಬೂಬ ಹುಸೇನಲಿ, ಉಪನ್ಯಾಸಕರು, ಸ.ಪ.ಪೂ ಕಾಲೇಜು, ಕಾರಟಗಿ. ಜೀರಾಳ-ಶ್ರೀನಿವಾಸ ತಡಕನಹಳ್ಳಿ, ಸರ್ಕಾರಿ ಪ್ರೌಢಶಾಲೆ, ಉಡಮಕಲ್. ಬಸರಿಹಾಳ-ಡಾ.ಡಿ.ಕೆ. ಮಾಳೆ, ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜು, ಕನಕಗಿರಿ ಇವರನ್ನು ಚುನಾವಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Advertisement

0 comments:

Post a Comment

 
Top