೨೦೧೫-೧೬ ನೇ ಸಾಲಿನ ಖಾಸಗಿ ಪೂರ್ವ ಪ್ರಾಥಮಿಕ ಶಾಲೆ, ಪ್ರಾಥಮಿಕ ಆಲೆ, ಮತ್ತು ಪ್ರೌಢ ಶಾಲೆಗಳಿಗೆ ವಿದ್ಯಾರ್ಥಿಗಳ ಪ್ರವೇಶವನ್ನು ಪಾರದದರ್ಶಿಕತೆ ಹಾಗು ೧೯೮೩ ಮತ್ತು ೨೦೦೯ ರ ಆರ್.ಟಿ.ಇ ಕಾಯ್ದೆಯನ್ವಯ ಖಾಸಗಿ ಶಾಲೆಗಳು ಶಾಲೆಯಲ್ಲಿ ಲಭ್ಯವಿರುವ ಖಾಲಿ ಸ್ಥಾನಗಳ ಬಗ್ಗೆ ಹಾಗೂ ಶುಲ್ಕದ ವಿವರಗಳನ್ನು ೪*೬ ಪ್ಲೆಕ್ಷ್‌ಗಳಲ್ಲಿ ಸಂಪೂರ್ಣ ಮಾಹಿತಿ ಫಲಕವನ್ನು ಹಾಕಬೇಕೆಂದು ೨೮/೦೨/೨೦೧೫ ರಂದು ಆಯುಕ್ತರು ಆದೇಶ ಹೊರಡಿಸಿದ್ದರೂ ಜಿಲ್ಲಾ ಕೇಂದ್ರದ ಕೊಪ್ಪಳ ತಾಲ್ಲೂಕಿನಲ್ಲಿ ಮಾತ್ರಾ ವಿಫಲವಾಗುತ್ತಿದ್ದು ದುರ್ದೈವದ ಸಂಗತಿಯಾಗಿರುತ್ತದೆ. ಸಂಭಂದಿಸಿದ ಅದಿಕಾರಿಗಳೂ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಮೌನ ವಹಿಸಿ ಖಾಸಗಿ ಶಾಲೆಗಳ ಸಹ ಭಾಗಿತ್ವ ಪಡೆದಂತಾಗಿದೆ. ಇದಕ್ಕೆ ಪೂರಕವಾಗಿ ಖಾಸಗಿ ಶಾಲೆಗಳ ಒಕ್ಕೂಟ ತಾಲ್ಲೂಕಿನಲ್ಲಿ ಸಂಪೂರ್ಣ ವಿವರಗಳುಳ್ಳ ಫಲಕವನ್ನು ಅಳವಡಿಸದೇ ಇಲಾಖೆಯನ್ನೇ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದು ಖಾಸಗಿ ಶಾಲೆಗಳ ಒಕ್ಕೂಟವಾದ ಕುಸ್ಮಾ ಸಂಘವು ಯಾವುದೇ ರೀತಿ ರಾಜ್ಯ ಹೈಕೋರ್ಟನಲ್ಲಿ ದಾವೆ ಹೂಡದೇ ಇದ್ದರು ಹೈಕೋರ್ಟ ಹೆಸರು ಹೇಳಿ ಅಧಿಕಾರಿಗಳು ಹಾಗೂ ಪೋಷಕರ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದು ಈ ಬಗ್ಗೆ ಅಧಿಕಾರಿಗಳು ಕೂಡಲೇ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳತಕ್ಕದ್ದು. ಸರಕಾರದ ಯಾವುದೇ ಅನುದಾನಗಳನ್ನು ಪಡೆಯುವುದಿಲ್ಲ ಎಂದು ತಿಳಿಸಿರುವ ಈ ಖಾಸಗಿ ಶಾಲೆಗಳ ಒಕ್ಕೂಟ ವಿದ್ಯಾರ್ಥಿಗಳು ಹಾಗೂ ಪೋಷಕರ ಹಗಲು ದರೋಡೆಗೆ ನಿಂತಂತಾಗಿದೆ. ಶಾಲೆ ಪ್ರಾರಂಭಕ್ಕೂ ಮುನ್ನವೇ ಸರಕಾರದ ಆದೇಶ ಸುತ್ತೋಲೆಗಳನ್ನು ಪಾಲಿಸುವುದಾಗಿಯೂ ಪಾರದರ್ಶಕ ರೀತಿಯ ಆಡಳಿತ ನೀಡುವುದಾಗಿಯು ಒಪ್ಪಿ ಅನುಮತಿ ಪಡೆದಿರುವ ಶಾಲಾ ಆಡಳಿತ ಮಂಡಳಿಗಳು ಈಗ ಅದೇ ಇಲಾಖೆಯ ಆದೇಶವನ್ನು ಪಾಲಿಸದೇ ಸೆಡ್ಡು ಹೊಡೆದು ನಿಂತಿರುವುದು ಇಲಾಖೆಯಲ್ಲಿರುವ ಅಧಿಕಾರಿಗಳ ವೈಫಲ್ಯವನ್ನು ಎತ್ತಿ ತೋರಿಸಿದಂತಾಗಿದೆ. ಸಂಭಂದಿಸಿದ ಅಧಿಕಾರಿಗಳು ಈ ಬಗ್ಗೆ ಕೂಡಲೆ ಆಯುಕ್ತರ ಆದೇಶವನ್ನು ಪಾಲಿಸುವಂತೆ ಸೂಕ್ತ ಕ್ರಮ ಕೈಗೊಳ್ಳತಕ್ಕದ್ದು ಇಲ್ಲದೇ ಹೊದ ಪಕ್ಷದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಸಮಿತಿಯು ಪಾಲಕರು ಹಾಗೂ ನಗರದ ಪ್ರಗತಿ ಪರ ಚಿಂತಕರು ಶಿಕ್ಷಣ ಪ್ರೇಮಿಗಳು, ಮತ್ತು ಸಾಹಿತಿಗಳೊಂದಿಗೆ ಸೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಂದೆ ಬೃಹತ್ ಮಟ್ಟದ ಪತಿಭಟೆನೆಯನ್ನು ನಡೆಸಲಾಗುವುದು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಜಿಲ್ಲಾ ಸಮಿತಿ ಅಮರೇಶ ಕಡಗದ ಜಿಲ್ಲಾ ಅಧ್ಯಕ್ಷರು, ಬಾಳಪ್ಪ ಹುಲಿಹೈದರ ಜಿಲ್ಲಾ ಕಾರ್ಯದರ್ಶಿ ,ಶಿವಕುಮಾರ್ ಉಮೇಶ ರಾಠೋಡ್ ರಮೇಶ್ ನಾಯಕ್ ವಿಷ್ಣು , ಸಿದ್ದರಾಮೇಶ , ರಂಗನಾಥ, ವಿರೇಶ್, ಫಕೀರಪ್ಪ, ಹನುಮಂತ, ಆನಂದ, ಇತರರು
ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ಉಪನಿರ್ದೆಶಕರಲ್ಲಿ ಒತ್ತಾಯುಸಿದ್ದಾರೆ
0 comments:
Post a Comment