೨೦೧೪-೧೫ನೇ ಸಾಲಿನಲ್ಲಿ ಪಿ.ಯೂ.ಸಿ ವಿಜ್ಞಾನ, ವಾಣಿಜ್ಯ, ಕಲಾ ಹಾಗೂ ಐ.ಟಿ.ಐ ಪರೀಕ್ಷೆಯಲ್ಲಿ ಶೇಕಡಾ ೯೦% ಹಾಗೂ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ್ ಅಡಿಯಲ್ಲಿ ಬರುವ ಶ್ರೀಮತಿ ಶಾರದಮ್ಮ ವಿ ಕೊತಬಾಳ ಪದವಿ ಮಹಾವಿದ್ಯಾಲಯದಲ್ಲಿ ೨೦೧೫-೧೬ನೇ ಸಾಲಿನಲ್ಲಿ ಬಿ.ಸಿ.ಎ, ಬಿ.ಬಿ.ಎಂ ಹಾಗೂ ಬಿ.ಕಾಂ ಆಯಾ ವಿಭಾಗಗಳಲ್ಲಿ ಅಭ್ಯಾಸ ಮಾಡಲಿಚ್ಚಿಸುವ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕ ಪಡೆಯದೇ ಉಚಿತ ಪ್ರವೇಶವನ್ನು ನೀಡಲಾಗುವುದು. ಬಿ.ಬಿ.ಎಂ ಹಾಗೂ ಬಿ.ಸಿಎ ಪ್ರವೇಶಕ್ಕೆ ಶೇಕಡಾ ೮೫ ಹಾಗೂ ಅದಕ್ಕಿಂತ ಹೆಚ್ಚು ಅಂಕ ಪಡೆದಿರಬೇಕು. ಬಿ.ಕಾಂ ಪ್ರವೇಶಕ್ಕೆ ಶೇಕಡಾ ೯೦ ಹಾಗೂ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕಾಗುತ್ತದೆ. ಕೊಪ್ಪಳ ಮತ್ತು ಸುತ್ತಮುತ್ತಲಿನ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆಯಬೇಕೆಂದು ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ್ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
Home
»
koppal district information
»
Koppal News
»
school college koppal district
» ಶ್ರೀಮತಿ ಶಾರದಮ್ಮ ವಿ ಕೊತಬಾಳ ಪದವಿ ಕಾಲೇಜಿಗೆ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ
Subscribe to:
Post Comments (Atom)
0 comments:
Post a Comment