ಪ್ರಸಕ್ತ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಾರಂಭವಾದ ಮೇ. ೧೫ ರಿಂದ ೨೨ ರವರೆಗೆ ಒಟ್ಟಾರೆ ೧೦೫೪೦ ನಾಮಪತ್ರಗಳು ಸಲ್ಲಿಕೆಯಾಗಿದ್ದು, ಮೂರು ಗ್ರಾಮ ಪಂಚಾಯತಿಗಳ ಒಟ್ಟು ೧೪ ಸದಸ್ಯ ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
ಕೊಪ್ಪಳ ತಾಲೂಕಿನ ೩೮ ಗ್ರಾಮ ಪಂಚಾಯತಿಗಳ ೭೩೬ ಸ್ಥಾನಗಳಿಗೆ ಸದಸ್ಯರನ್ನು ಆಯ್ಕೆ ಮಾಡಬೇಕಾಗಿದೆ. ಈವರೆಗೆ ಪರಿಶಿಷ್ಟ ಜಾತಿಯ ೬೨೨, ಪರಿಶಿಷ್ಟ ಪಂಗಡದ ೨೬೪, ಹಿಂದುಳಿದ ಅ ವರ್ಗದ ೪೭೨, ಹಿಂದುಳಿದ ಬ ವರ್ಗದ ೯೯ ಹಾಗೂ ಸಾಮಾನ್ಯ ವರ್ಗದ ೧೭೯೩ ಸೇರಿದಂತೆ ೩೨೫೦ ನಾಮಪತ್ರಗಳು ಸಲ್ಲಿಕೆಯಾಗಿವೆ. ಆದರೆ ಕೊಪ್ಪಳ ತಾಲೂಕು ತಾವರಗೇರಿ ಗ್ರಾಮ ಪಂಚಾಯತಿಯ ಕೂಕನಪಳ್ಳಿ-೧, ಕೂಕನಪಳ್ಳಿ-೨ ಕ್ಷೇತ್ರಕ್ಕೆ ಸಂಬಂಧಿಸಿದ ಒಟ್ಟು ೦೭ ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
ಗಂಗಾವತಿ ತಾಲೂಕಿನ ೪೦ ಗ್ರಾಮ ಪಂಚಾಯತಿಗಳ ೭೫೦ ಸ್ಥಾನಗಳಿಗೆ ಸದಸ್ಯರನ್ನು ಆಯ್ಕೆ ಮಾಡಬೇಕಾಗಿದೆ. ಈವರೆಗೆ ಪರಿಶಿಷ್ಟ ಜಾತಿಯ ೫೯೨, ಪರಿಶಿಷ್ಟ ಪಂಗಡದ ೪೪೫, ಹಿಂದುಳಿದ ಅ ವರ್ಗದ ೨೫೮, ಹಿಂದುಳಿದ ಬ ವರ್ಗದ ೬೦ ಹಾಗೂ ಸಾಮಾನ್ಯ ವರ್ಗದ ೧೫೯೨ ಸೇರಿದಂತೆ ೨೯೪೭ ನಾಮಪತ್ರಗಳು ಸಲ್ಲಿಕೆಯಾಗಿವೆ.
ಕುಷ್ಟಗಿ ತಾಲೂಕಿನ ೩೫ ಗ್ರಾಮ ಪಂಚಾಯತಿಗಳ ೬೦೭ ಸ್ಥಾನಗಳಿಗೆ ಸದಸ್ಯರನ್ನು ಆಯ್ಕೆ ಮಾಡಬೇಕಾಗಿದೆ. ಈವರೆಗೆ ಪರಿಶಿಷ್ಟ ಜಾತಿಯ ೩೫೯, ಪರಿಶಿಷ್ಟ ಪಂಗಡದ ೩೧೨, ಹಿಂದುಳಿದ ಅ ವರ್ಗದ ೨೯೮, ಹಿಂದುಳಿದ ಬ ವರ್ಗದ ೬೬ ಹಾಗೂ ಸಾಮಾನ್ಯ ವರ್ಗದ ೧೧೯೫ ಸೇರಿದಂತೆ ೨೨೩೦ ನಾಮಪತ್ರಗಳು ಸಲ್ಲಿಕೆಯಾಗಿವೆ. ಆದರೆ ಕುಷ್ಟಗಿ ತಾಲೂಕು ಹಾಬಲಕಟ್ಟಿ ಗ್ರಾಮ ಪಂಚಾಯತಿಯ ವಾರಿಕಲ್ ಮತ್ತು ಚಿಕ್ಕಗೊಣ್ಣಾಗರ ಕ್ಷೇತ್ರಕ್ಕೆ ಸಂಬಂಧಿಸಿದ ತಲಾ ೦೧ ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
ಯಲಬುರ್ಗಾ ತಾಲೂಕಿನ ೩೫ ಗ್ರಾಮ ಪಂಚಾಯತಿಗಳ ೫೮೪ ಸ್ಥಾನಗಳಿಗೆ ಸದಸ್ಯರನ್ನು ಆಯ್ಕೆ ಮಾಡಬೇಕಾಗಿದೆ. ಈವರೆಗೆ ಪರಿಶಿಷ್ಟ ಜಾತಿಯ ೪೨೨, ಪರಿಶಿಷ್ಟ ಪಂಗಡದ ೨೨೫, ಹಿಂದುಳಿದ ಅ ವರ್ಗದ ೨೪೩, ಹಿಂದುಳಿದ ಬ ವರ್ಗದ ೭೮ ಹಾಗೂ ಸಾಮಾನ್ಯ ವರ್ಗದ ೧೧೪೫ ಸೇರಿದಂತೆ ೨೧೧೩ ನಾಮಪತ್ರಗಳು ಸಲ್ಲಿಕೆಯಾಗಿವೆ. ಆದರೆ ಯಲಬುರ್ಗಾ ತಾಲೂಕು ಮಾಟಲದಿನ್ನಿ ಗ್ರಾಮ ಪಂಚಾಯತಿಯ ಯಡ್ಡೋಣಿ-೧ ಮತ್ತು ಯಡ್ಡೋಣಿ-೨ ಕ್ಷೇತ್ರಕ್ಕೆ ಸಂಬಂಧಿಸಿದ ಒಟ್ಟು ೦೫ ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಉಮೇದುವಾರಿಕೆ ಹಿಂಪಡೆಯಲು ಮೇ. ೨೫ ಕೊನೆಯ ದಿನಾಂಕವಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment