PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ: ನಗರದ ಗವಿಸಿದ್ದೇಶ್ವರ ಸಂಗೀತ ವಿದ್ಯಾಪೀಠವು ದಿನಾಂಕ: ೦೫-೦೫-೨೦೧೫ ರಂದು ಗುರುಪೌರ್ಣಮಿಯ ನಿಮಿತ್ಯ ಗೌರವಾರ್ಪಣೆ ಹಾಗೂ ಸಂಗೀತ ಕಾರ್ಯಕ್ರಮವನ್ನು ಭಾಗ್ಯನಗರದ ಜಗದ್ಗುರು ಶಂಕರಾಚಾರ್ಯ ಮಠದಲ್ಲಿ ಏರ್ಪಡಿಸಿತ್ತು ಶ್ರೀಮಠದ ಪರಮ ಪೂಜ್ಯ ಶಿವಪ್ರಕಾಶ ಆನಂದಸ್ವಾಮಿಗಳು ವಹಿಸಿದ್ದರು, ಅಧ್ಯಕ್ಷತೆಯನ್ನು ಶ್ರೀದೇವೇಂದ್ರಪ್ಪ ಬಡಿಗೇರ್ ವಹಿಸಿ ಗವಿಮಠದ ಸಂಗೀತ ವಿದ್ಯಾಪೀಠ ನಮ್ಮ ಭಾಗಕ್ಕೆ ಉತ್ತಮ ಸಂಗೀತ ಸೇವೆ ನೀಡುತ್ತಿದೆ ಎಂದರು ಮುಖ್ಯಅತಿಥಿಗಳಾಗಿ ಶ್ರೀ ದಾನಪ್ಪ ಜಿ.ಕೆ. ಅವರ ಮಾತನಾಡಿ ಸಂಗೀತ ಪರಮ ಶ್ರೇಷ್ಠ ಕಲೆಯಾಗಿದೆ. ಮನುಷ್ಯ ಜೀವನದಲ್ಲಿ ಕಲೆ, ಸಂಗೀತ, ಸಾಹಿತ್ಯಗಳಂಥವುಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ತೊಂದರೆಗಳು ಕಡಿಮೆಯಾಗುತ್ತವೆ ಎಂದರು. ಇದೇ ಸಂದರ್ಭದಲ್ಲಿ ನಗರದ ಹಿರಿಯ ಕಲಾವಿದರಾದ ಶ್ರೀ ಹುಚ್ಚಯ್ಯಸ್ವಾಮಿ ಕಲ್ಮಠ ಹಾರ‍್ಮೋನೀಯಂ ವಾದಕರನ್ನು ಗೌರವಿಸಲಾಯಿತು. ಗುರುವಂದನೆಗಾಗಿ ಹೊಸಪೇಟೆಯ ಶ್ರೀಮತಿ ಪುಷ್ಟಾವತಿಯವರ ಹಿಂದೂಸ್ತಾನಿ ಗಾಯನದಲ್ಲಿ ರಾಗ, ಜೋಗ್ ಹಾಗೂ ಸುಗಮ ಸಂಗೀತ ಪ್ರಸ್ತುತ ಪಡಿಸಿದರು. ಗಂಗಾವತಿಯ ಶ್ರೀ ರಾಘವೇಂದ್ರ ತಬಲಾ ನೀಡಿದರು. ಕಾರ್ಯಕ್ರಮವನ್ನು ಕು|| ಸಂಕಲ್ಪ ಅವರಾದಿ ಹಾಗೂ ಕು|| ವರ್ಶಿಣಿ ಸಂಕ್ಲಾಪುರ ನಿರೂಪಿಸಿದರು. ಆರಂಭದಲ್ಲಿ ವಿದ್ಯಾಪೀಠ ವಿದ್ಯಾರ್ಥಿಗಳು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು, ಭಾಗ್ಯನಗರದ ಅನೇಕ ಕಲಾ ಶೂತ್ರಗಳು ಮನಾನಂದಗೊಂಡರೆಂದು ವಿದ್ಯಾಪೀಠದ ಪ್ರಾಚಾರ್ಯರಾದ ಶ್ರೀ ವಿರೇಶ ಹಿಟ್ನಾಳರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

0 comments:

Post a Comment

 
Top