PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ಜಿಲ್ಲೆಯಲ್ಲಿ ೧೪೮ ಗ್ರಾಮ ಪಂಚಾಯತಿಗಳಲ್ಲಿ  ಸಾರ್ವತ್ರಿಕ ಚುನಾವಣೆ ನಡೆಸಲಾಗುತ್ತಿದ್ದು, ಜೂ. ೦೨ ರಂದು ಮತದಾನ ನಡೆಯಲಿದೆ.  ಈ ಬಾರಿಯ ಚುನಾವಣೆಯಲ್ಲಿ ೭,೧೪,೬೩೩ ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ.  ಇದಕ್ಕಾಗಿ ಒಟ್ಟು ೧೦೦೩ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ತಿಳಿಸಿದ್ದಾರೆ.
ಮತದಾರರು : ಜಿಲ್ಲೆಯಲ್ಲಿ ೩೬೦೩೨೩ ಪುರುಷ ಮತದಾರರು ಹಾಗೂ ೩೫೪೩೧೦ ಮಹಿಳಾ ಮತದಾರರು ಸೇರಿದಂತೆ ಒಟ್ಟು ೭೧೪೬೩೩ ಮತದಾರರು ಮತದಾನದ ಹಕ್ಕು ಚಲಾಯಿಸಲಿದ್ದಾರೆ.  ಕೊಪ್ಪಳ ತಾಲೂಕಿನಲ್ಲಿ ಪುರುಷ ಮತದಾರರು ೧೦೦೦೦೫ ಹಾಗೂ ಮಹಿಳಾ ಮತದಾರರು- ೯೭೬೩೪ ಸೇರಿದಂತೆ ಒಟ್ಟು ೧೯೭೬೩೯ ಮತದಾರರಿದ್ದಾರೆ.  ಅದೇ ರೀತಿ ಗಂಗಾವತಿಯಲ್ಲಿ ಪುರುಷ- ೯೬೩೦೬, ಮಹಿಳೆ- ೯೮೨೦೧, ಒಟ್ಟು ೧೯೪೫೦೭ ಮತದಾರರಿದ್ದಾರೆ.  ಕುಷ್ಟಗಿ ತಾಲೂಕಿನಲ್ಲಿ ಪುರುಷ- ೮೩೫೨೫, ಮಹಿಳೆ- ೮೦೮೫೫, ಒಟ್ಟು- ೧೬೪೩೮೦ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.  ಯಲಬುರ್ಗಾ ತಾಲೂಕಿನಲ್ಲಿ ಪುರುಷ- ೮೦೪೮೭, ಮಹಿಳೆ- ೭೭೬೨೦ ಒಟ್ಟು ೧೫೮೧೦೭ ಮತದಾರರು ಮತ ಚಲಾಯಿಸಲಿದ್ದಾರೆ.
ಚುನಾವಣೆಗೆ ೪೦೫ ವಾಹನಗಳ ಬಳಕೆ : ಈ ಬಾರಿಯ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಯನ್ನು ಸುಗಮವಾಗಿ ಮತ್ತು ಯಶಸ್ವಿಯಾಗಿ ನಡೆಸಲು ಅನುಕೂಲವಾಗುವಂತೆ ೧೧೪-ಬಸ್, ೯೩-ಕ್ರೂಸರ್, ೧೯೨-ಜೀಪ್ ಹಾಗೂ ೦೬-ಮ್ಯಾಕ್ಸಿಕ್ಯಾಬ್ ಸೇರಿದಂತೆ ಒಟ್ಟು ೪೦೫ ವಾಹನಗಳನ್ನು ಬಳಸಲಾಗುತ್ತಿದೆ.  ಕೊಪ್ಪಳ ತಾಲೂಕಿನಲ್ಲಿ ೩೨-ಬಸ್, ೧೯-ಕ್ರೂಸರ್, ೬೪-ಜೀಪ್ ಸೇರಿದಂತೆ ಒಟ್ಟು ೧೧೫ ವಾಹನಗಳು.  ಗಂಗಾವತಿ ತಾಲೂಕಿನಲ್ಲಿ ೨೭-ಬಸ್, ೩೨-ಕ್ರೂಸರ್, ೭೨-ಜೀಪ್ ಸೇರಿದಂತೆ ಒಟ್ಟು ೧೩೧ ವಾಹನಗಳು.  ಕುಷ್ಟಗಿ ತಾಲೂಕಿನಲ್ಲಿ ೩೦-ಬಸ್, ೧೯-ಕ್ರೂಸರ್, ೩೧-ಜೀಪ್ ಸೇರಿದಂತೆ ಒಟ್ಟು ೮೦ ವಾಹನಗಳು.  ಯಲಬುರ್ಗಾ ತಾಲೂಕಿನಲ್ಲಿ ೨೫-ಬಸ್, ೨೩-ಕ್ರೂಸರ್, ೨೫-ಜೀಪ್ ಹಾಗೂ ೦೬-ಮ್ಯಾಕ್ಸಿಕ್ಯಾಬ್ ಸೇರಿದಂತೆ ಒಟ್ಟು ೭೯ ವಾಹನಗಳನ್ನು ಬಳಸಲಾಗುತ್ತಿದೆ.
೭೨೦೩ ಅಭ್ಯರ್ಥಿಗಳು ಕಣದಲ್ಲಿ : ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕೊಪ್ಪಳ ತಾಲೂಕಿನಲ್ಲಿ ೨೧೮೧ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು ಈ ಪೈಕಿ ಪ.ಜಾತಿ-೪೪೩, ಪ.ಪಂಗಡ-೧೯೭, ಹಿಂದುಳಿದ ಅ ವರ್ಗ- ೩೨೪, ಹಿಂದುಳಿದ ಬ ವರ್ಗ-೭೧ ಮತ್ತು ಸಾಮಾನ್ಯ ವರ್ಗದ ೧೧೪೬ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.  ಗಂಗಾವತಿ ತಾಲೂಕಿನಲ್ಲಿ ೧೮೨೧ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು ಈ ಪೈಕಿ ಪ.ಜಾತಿ-೩೮೮, ಪ.ಪಂಗಡ-೩೦೬, ಹಿಂದುಳಿದ ಅ ವರ್ಗ- ೧೫೫, ಹಿಂದುಳಿದ ಬ ವರ್ಗ-೩೩ ಮತ್ತು ಸಾಮಾನ್ಯ ವರ್ಗದ ೯೩೯ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.  ಕುಷ್ಟಗಿ ತಾಲೂಕಿನಲ್ಲಿ ೧೫೬೯ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು ಈ ಪೈಕಿ ಪ.ಜಾತಿ-೨೪೬, ಪ.ಪಂಗಡ-೨೨೯, ಹಿಂದುಳಿದ ಅ ವರ್ಗ- ೨೨೮, ಹಿಂದುಳಿದ ಬ ವರ್ಗ-೫೩ ಮತ್ತು ಸಾಮಾನ್ಯ ವರ್ಗದ ೧೫೬೯ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.  ಯಲಬುರ್ಗಾ ತಾಲೂಕಿನಲ್ಲಿ ೧೬೩೨ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು ಈ ಪೈಕಿ ಪ.ಜಾತಿ-೩೪೫, ಪ.ಪಂಗಡ-೧೮೧, ಹಿಂದುಳಿದ ಅ ವರ್ಗ- ೧೯೯, ಹಿಂದುಳಿದ ಬ ವರ್ಗ-೫೧ ಮತ್ತು ಸಾಮಾನ್ಯ ವರ್ಗದ ೧೬೩೨ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.  
೧೭೧ ಅವಿರೋಧ ಆಯ್ಕೆ : ಜಿಲ್ಲೆಯಲ್ಲಿ ಈ ಬಾರಿಯ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು ೧೭೧ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಕೊಪ್ಪಳ ತಾಲೂಕಿನಲ್ಲಿ ೨೩, ಗಂಗಾವತಿ- ೭೩, ಕುಷ್ಟಗಿ-೫೪ ಮತ್ತು ಯಲಬುರ್ಗಾ ತಾಲೂಕಿನಲ್ಲಿ ೨೧ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.  ಇದರಿಂದಾಗಿ ಕೊಪ್ಪಳ ತಾಲೂಕಿನ ೭೩೬ ಸದಸ್ಯ ಸ್ಥಾನಗಳ ಪೈಕಿ ೭೦೬ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.  ಗಂಗಾವತಿ ತಾಲೂಕಿನಲ್ಲಿ ೭೫೦ ಸದಸ್ಯ ಸ್ಥಾನಗಳ ಪೈಕಿ ೬೭೭ ಸ್ಥಾನಗಳಿಗೆ.  ಕುಷ್ಟಗಿ ತಾಲೂಕಿನಲ್ಲಿ ೬೦೭ ಸದಸ್ಯ ಸ್ಥಾನಗಳ ಪೈಕಿ ೫೫೧ ಸ್ಥಾನಗಳಿಗೆ ಹಾಗೂ ಯಲಬುರ್ಗಾ ತಾಲೂಕಿನಲ್ಲಿ ೫೮೪ ಸ್ಥಾನಗಳ ಪೈಕಿ ೫೫೨ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಮತಗಟ್ಟೆಗಳು : ಗ್ರಾಮ ಪಂಚಾಯತಿ ಚುನಾವಣೆ ಸಂಬಂಧ ಮತದಾನ ಪ್ರಕ್ರಿಯೆ ಸುಗಮವಾಗಿ ಸಾಗಲು ಜಿಲ್ಲೆಯಲ್ಲಿ ೧೦೦೩  ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.  ಆ ಪೈಕಿ ೧೮೩ ಮತಗಟ್ಟೆಗಳನ್ನು ಸೂಕ್ಷ್ಮ, ೭೩ ಮತಗಟ್ಟೆಗಳನ್ನು ಅತಿಸೂಕ್ಷ್ಮ ಹಾಗೂ ೭೪೭ ಮತಗಟ್ಟೆಗಳನ್ನು ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ.  ಕೊಪ್ಪಳ ತಾಲೂಕಿನಲ್ಲಿ ೨೬೯ ಮತಗಟ್ಟೆಗಳಿದ್ದು, ಆ ಪೈಕಿ ಸೂಕ್ಷ್ಮ- ೫೪, ಅತಿಸೂಕ್ಷ್ಮ- ೨೭ ಹಾಗೂ ಸಾಮಾನ್ಯ- ೧೮೮ ಮತಗಟ್ಟೆಗಳಿವೆ.  ಗಂಗಾವತಿ ತಾಲೂಕಿನಲ್ಲಿ ೨೭೯ ಮತಗಟ್ಟೆಗಳಿದ್ದು, ಆ ಪೈಕಿ ಸೂಕ್ಷ್ಮ- ೫೮, ಅತಿಸೂಕ್ಷ್ಮ- ೨೪ ಹಾಗೂ ಸಾಮಾನ್ಯ- ೧೯೭ ಮತಗಟ್ಟೆಗಳನ್ನು ಗುರುತಿಸಲಾಗಿದೆ.  ಯಲಬುರ್ಗಾ ತಾಲೂಕಿನಲ್ಲಿ ೨೨೧ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಆ ಪೈಕಿ ಸೂಕ್ಷ್ಮ- ೨೬, ಸಾಮಾನ್ಯ- ೧೯೫ ಮತ್ತು ಕುಷ್ಟಗಿ ತಾಲೂಕಿನ ಒಟ್ಟು ೨೩೪ ಮತಗಟ್ಟೆಗಳ ಪೈಕಿ ಸೂಕ್ಷ್ಮ- ೪೫, ಅತಿ ಸೂಕ್ಷ್ಮ- ೨೨ ಹಾಗೂ ಸಾಮಾನ್ಯ- ೧೬೭ ಮತಗಟ್ಟೆಗಳೆಂದು ಗುರುತಿಸಲಾಗಿದೆ.
ಚುನಾವಣಾ ಸಿಬ್ಬಂದಿ : ಜಿಲ್ಲೆಯಲ್ಲಿ ಒಟ್ಟು ೧೦೦೩ ಮತಗಟ್ಟೆಗಳಿರುವುದರಿಂದ ಪ್ರತಿ ಮತಗಟ್ಟೆಗೆ ತಲಾ ಒಬ್ಬರಂತೆ ಪ್ರಿಸೈಡಿಂಗ್ ಆಫೀಸರ್, ಮೊದಲನೆ ಪೋಲಿಂಗ್ ಆಫೀಸರ್, ಎರಡನೆ ಪೋಲಿಂಗ್ ಆಫೀಸರ್, ಮೂರನೆ ಪೋಲಿಂಗ್ ಆಫೀಸರ್ ಹಾಗೂ ಒಬ್ಬರು ಗ್ರೂಪ್ ’ಡಿ’ ದರ್ಜೆಯ ನೌಕರರು ಸೇರಿ ಒಟ್ಟು ೫೦೧೫ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.  ಕೊಪ್ಪಳ ತಾಲೂಕಿನಲ್ಲಿ ೨೬೯ ಮಟಗಟ್ಟೆಗಳಿದ್ದು, ಪ್ರತಿ ಮತಗಟ್ಟೆಗಳಿಗೆ ತಲಾ ಒಬ್ಬರಂತೆ ಪ್ರಿಸೈಡಿಂಗ್ ಆಫೀಸರ್, ಮೊದಲನೆ ಪೋಲಿಂಗ್ ಆಫೀಸರ್, ಎರಡನೆ ಪೋಲಿಂಗ್ ಆಫೀಸರ್, ಮೂರನೆ ಪೋಲಿಂಗ್ ಆಫೀಸರ್ ಹಾಗೂ ಗ್ರೂಪ್ ’ಡಿ’ ದರ್ಜೆಯ ನೌಕರರು ಸೇರಿ ಒಟ್ಟು ೧೩೪೫ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.  ಗಂಗಾವತಿ ತಾಲೂಕಿನಲ್ಲಿ ೨೭೯ ಮತಗಟ್ಟೆಗಳಿದ್ದು, ೧೩೯೫ ಸಿಬ್ಬಂದಿಗಳು, ಯಲಬುರ್ಗಾ ತಾಲೂಕಿನಲ್ಲಿ ೨೨೧ ಮತಗಟ್ಟೆಗಳಿದ್ದು ೧೧೦೫ ಸಿಬ್ಬಂದಿಗಳು ಹಾಗೂ ಕುಷ್ಟಗಿ ತಾಲೂಕಿನಲ್ಲಿ ೨೩೪ ಮತಗಟ್ಟೆಗಳಿದ್ದು ಒಟ್ಟು ೧೧೭೦ ಸಿಬ್ಬಂದಿಗಳು ನಿಯೋಜನೆಗೊಂಡಿದ್ದಾರೆ.
ಈ ಬಾರಿ ಕಡ್ಡಾಯ ಮತದಾನ : ಸಾರ್ವಜನಿಕರಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ನಂಬಿಕೆ ಬಲಪಡಿಸಿ, ಚುನಾವಣೆ ಪ್ರಕ್ರಿಯೆಯಲ್ಲಿ ಎಲ್ಲ ಮತದಾರರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ, ಸರ್ಕಾರ ಕರ್ನಾಟಕ ಪಂಚಾಯತಿ ರಾಜ್ ಅಧಿನಿಯಮಕ್ಕೆ ತಿದ್ದುಪಡಿ ಮಾಡಿದ್ದು, ಇದರ ಅನ್ವಯ ಗ್ರಾಮ ಪಂಚಾಯತಿ ಮತದಾರರ ಪಟ್ಟಿಯಲ್ಲಿ ತನ್ನ ಹೆಸರು ಇರುವ ಪ್ರತಿಯೊಬ್ಬ ವ್ಯಕ್ತಿಯು ಈ ಬಾರಿ ನಡೆಯುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮತದಾನ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.  ಈ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ಸಹ ಸರ್ಕಾರ ವ್ಯಾಪಕ ಕ್ರಮ ಕೈಗೊಂಡಿದೆ.
  ಗ್ರಾಮ ಪಂಚಾಯತಿ ಚುನಾವಣೆ ಯಶಸ್ವಿಗೊಳಿಸಲು ಮದ್ಯ ಮಾರಾಟ ನಿಷೇಧ, ಸಂತೆ-ಜಾತ್ರೆಗಳ ಮುಂದೂಡಿಕೆಯಂತಹ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಎಲ್ಲ ಸಾರ್ವಜನಿಕರು, ಅಧಿಕಾರಿಗಳು, ಸಿಬ್ಬಂದಿಗಳು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು.  ಜೂ. ೦೨ ರಂದು ಬೆಳಿಗ್ಗೆ ೦೭ ಗಂಟೆಯಿಂದ ಸಂಜೆ ೦೫ ಗಂಟೆಯವರೆಗೆ ಮತದಾನ ನಡೆಯಲಿದ್ದು, ಎಲ್ಲ ಮತದಾರರು ತಪ್ಪದೆ ತಮ್ಮ ಮತ ಚಲಾವಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಮನವಿ ಮಾಡಿದ್ದಾರೆ.

Advertisement

0 comments:

Post a Comment

 
Top