PLEASE LOGIN TO KANNADANET.COM FOR REGULAR NEWS-UPDATES

 ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡದ ಪುಸ್ತಕಗಳ ಸೂಚಿಯೊಂದನ್ನು ಸಿದ್ಧಪಡಿಸುತ್ತಿದ್ದು, ೨೦೧೪ ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಪಡಿಸಿದ ಪುಸ್ತಕಗಳ ತಲಾ ಒಂದು ಪ್ರತಿಯೊಂದಿಗೆ ಲೇಖಕರಿಂದ ಅರ್ಜಿ ಆಹ್ವಾನಿಸಲಾಗಿದೆ. 
  ಕನ್ನಡ ಪುಸ್ತಕ ಪ್ರಾಧಿಕಾರವು ಹಮ್ಮಿಕೊಂಡಿರುವ ಹಲವು ಯೋಜನೆಗಳಲ್ಲಿ ಕನ್ನಡ ಪುಸ್ತಕಗಳ ಸೂಚಿಯೂ ಒಂದಾಗಿದೆ. ಪ್ರಾಧಿಕಾರವು ನೇಮಿಸುವ ತಜ್ಞರು ಆಯ್ಕೆ ಮಾಡಿದ ಪುಸ್ತಕಗಳನ್ನು ಪಟ್ಟಿ ಮಾಡಿ, ಸೂಕ್ತ ಸಂಕ್ಷಿಪ್ತ ಟಿಪ್ಪಣಿಯನ್ನು  ಪುಸ್ತಕದ ಮುಖಪುಟದೊಡನೆ ಪ್ರಾಧಿಕಾರದ ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು. ಇದು ಪುಸ್ತಕ ಸೂಚಿಯ ಉದ್ದೇಶವಾಗಿದೆ. ಇದೊಂದು ದಾಖಲಾತಿ ಮಾತ್ರವಾಗಿರದೆ, ಹಲವು ಸಂಘ, ಸಂಸ್ಥೆಗಳಿಗೆ ಪುಸ್ತಕಗಳ ಆಯ್ಕೆ, ಖರೀದಿ, ಪುರಸ್ಕಾರಗಳಿಗೆ ಶಿಫಾರಸ್ಸು ಮುಂತಾದವುಗಳಿಗೂ ಉಪಯೋಗವಾಗಲಿದೆ. ಪುನರ್ ಮುದ್ರಣಗೊಂಡ ಪುಸ್ತಕಗಳನ್ನು ಪ್ರತ್ಯೇಕ ಪಟ್ಟಿಯಲ್ಲಿ ಸೇರಿಸುವ ಕಾರಣದಿಂದ ಪುಸ್ತಕ ಸೂಚಿಯಲ್ಲಿ ಅವಕಾಶವಿರುವುದಿಲ್ಲ.
ಅರ್ಜಿ ನಮೂನೆಯನ್ನು ಪ್ರಾಧಿಕಾರದ ವೆಬ್‌ಸೈಟ್ www.kannadapustakapradhikara.com ನಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ಪಡೆಯಬಹುದಾಗಿದೆ. ಲೇಖಕರು ಅಥವಾ ಪ್ರಕಾಶಕರು ಪುಸ್ತಕ ಮತ್ತು ಅರ್ಜಿಯನ್ನು ಜೂ.೧೫ ರೊಳಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-೫೬೦ ೦೦೨ ಇವರಿಗೆ ಸಲ್ಲಿಸಬಹುದಾಗಿದೆ. ಆನಂತರ ಬಂದ ಪುಸ್ತಕಗಳನ್ನು ಸ್ವೀಕರಿಸುವುದಿಲ್ಲ ಹಾಗೂ ಸಲ್ಲಿಸಲಾಗುವ ಪುಸ್ತಕಗಳನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ .

Advertisement

0 comments:

Post a Comment

 
Top