PLEASE LOGIN TO KANNADANET.COM FOR REGULAR NEWS-UPDATES


ಇತ್ತೀಚಿನ  ದಿನಗಳಲ್ಲಿ ಬಸವತತ್ವ  ಮಾತನಾಡುವದಕ್ಕಿಂತ ಆಚರಣೆಗೆ  ತರಬೇಕಾಗಿದೆ ಎಂದು ತಾಳಿ ಕೋಟೆ ಬಸವ ಸಮಿತಿ  ಅಧ್ಯಕ್ಷ  ಪ್ರಕಾಶ ಕಶೆಟ್ಟಿ ಹೇಳಿದರು.   ನಗರದ  ಮಹೇಶ್ವರ  ಕಲ್ಯಾಣ ಮಂಟಪದಲ್ಲಿ ದಿನಾಂಕ ೦೪-೦೫-೨೦೧೫ ರಂದು ಸಂಜೆ ೬:೩೦ ಕ್ಕೆ ನಡೆದ  ೫೬ನೇ  ಶರಣ ಹುಣ್ಣಿಮೆ  ಮತ್ತು ವಚನ ತವನಿಧಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ   ಅತಿಥಿ ಉಪನ್ಯಾಸಕರಾಗಿ ಮಾತನಾಡಿದ ಅವರು ಕೆಲವರ ವಚನಗಳನ್ನು  ಭಾಷಣಕ್ಕೆ  ಮಾತ್ರ  ಸಿಮಿತಗೊಳಿಸಿದ್ದಾರೆ.  ಇನ್ನೂ ಕೆಲವರು  ತಮಗೆ  ಬೇಕಾದ ಹಾಗೆ ವಚನಗಳನ್ನು  ವಿಶ್ಲೇಷಿಸುತ್ತಿದ್ದಾರೆ.  ವಚನಗಳನ್ನು  ಅವುಗಳ  ಮೂಲ ಆಶಯದೊಂದಿಗೆ  ನಾವು ಅಧ್ಯಯನ ಮಾಡಬೇಕೆಂದು  ಹೇಳಿದರು.   ಪ್ರಕಾಶ  ಕಶೆಟ್ಟಿಯವರ  ಸಂಪಾದಿತ ವಚನ ತವನಿಧಿ ಪುಸ್ತಕದ  ಪರಿಚಯ ಮಾಡಿದ  ಶಿವಕುಮಾರ  ಕುಕನೂರು  ೧೫  ವಚನ ಸಂಪುಟಗಳ ವಚನಗಳಲ್ಲಿ  ೨೦೦೦ ವಚನಗಳನ್ನು  ವಿಷಯವಾರು ಸಂಪಾದಿಸಿದ  ಈ ಗ್ರಂಥವು  ಅಮೂಲ್ಯ ಕೃತಿಯಾಗಿದೆ  ಎಂದು ಹೇಳಿದರು.  ಡಾ. ಬಿ.ಜಿ. ಸಸಿಮಠ ಮಾತನಾಡಿ ಬಸವ ಧರ್ಮದ  ಜಾಗೃತಿ ದಿನೇ ದಿನೇ ಹೆಚ್ಚಾಗುತ್ತಿದ್ದು  ಎಲ್ಲ  ಕಾಯಕಗಳ ಜನರು  ಒಂದಡೆ ಸೇರಿ ನಾವೆಲ್ಲರೂ ಒಂದಾಗುವ ಸಮಯ  ಹತ್ತಿರವಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅಡಿವಿಶಗೌಡರ, ಕಳಕಪ್ಪ  ವಿವೇಕಿ, ರೇವಣ್ಣಪ್ಪ ಬೂತಣ್ಣವರ್, ಮಂಜುನಾಥ ಹಾದಿಮನಿ, ಪಂಪಾಪತಿ ಹೊನ್ನಳ್ಳಿ, ಬಿ.ಎಸ್. ಶಾಂತಪ್ಪನವರ, ರಾಘವೇಂದ್ರಾಚಾರ, ಸಿದ್ದೇಶ ಕಾಟ್ರಳ್ಳಿ, ಅಮೃತರಾಜ ವಕೀಲರು, ಜ್ಯೋತಿಮಟ್ಟಿ, ಮಹಾದೇವಿ ಜೋಳದ, ಬಸವ ತನುಜ, ರಾಜೇಶ್ವರಿ ರೊಟ್ಟಿ ಇನ್ನೂ ಅನೇಕರು ಭಾಗವಹಿಸಿದ್ದರು.   
ಬಸವ ಸಮಿತಿಯ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ  ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ  ವಿಶ್ವಗುರು  ಬಸವೇಶ್ವರ  ಟ್ರಸ್ಟ್ ಅಧ್ಯಕ್ಷ ಬಸವರಾಜಪ್ಪ ಇಂಜಿನಿಯರ್, ಲಿಂಗಾಯತ ಪ್ರಗತಿ ಶೀಲದ  ಅಧ್ಯಕ್ಷ ದಾನಪ್ಪ  ಶೆಟ್ಟರ್,  ಅಕ್ಕಮಹಾದೇವಿ ಮಹಿಳಾಮಂಡಳ ಅಧ್ಯಕ್ಷ ಕೊಮಲಾ ಕುದರಿಮೋತಿ ಉಪಸ್ಥಿತರಿದ್ದರು.  ಸುಮಂಗಲಾ ಅಕ್ಕಿ ವಚನ ಪ್ರಾರ್ಥನೆ ಮಾಡಿದರು.  ಗವಿಸಿದ್ಧಪ್ಪ ಪಲ್ಲೇದ ಸ್ವಾಗತಿಸಿದರು.  ಹನುಮೇಶ ಕಲ್ಮಂಗಿ ನಿರೂಪಿಸಿದರು.  ರಾಜೇಶ  ಸಸಿಮಠ ವಂದಿಸಿದರು.  

Advertisement

0 comments:

Post a Comment

 
Top