ಹೊಸಪೇಟೆ: ಗ್ರಾಮದಲ್ಲಿ ಸಿಗುವ ಕಚ್ಚಾ ವಸ್ತುಗಳಿಂದ ವಿವಿಧ ಸಾಮಾನು ತಯಾರಿಸಿ ಆರ್ಥಿಕವಾಗಿ ಸಬಲರಾಗಬೇಕೆಂದು ಸಮಾಜ ಸೇವಕ ದೀಪಕ್ ಕುಮಾರ್ ಸಿಂಗ್ ಹೇಳಿದರು.
ಹೊಸೂರು ಗ್ರಾಮದಲ್ಲಿ ಭಾನುವಾರ ಹೊಸೂರು ಗ್ರಾಮಾಭಿವೃದ್ಧಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮದ ಹೊರಗೆ ರಸ್ತೆ ಪಕ್ಕ ಬಯಲು ಶೌಚಾಲಯ ಮಾಡಿಕೊಳ್ಳುವುದು ಆನಾರೋಗ್ಯ ಕ್ರಿಯೆ ಇದನ್ನು ದಯವಿಟ್ಟು ನಿಲ್ಲಿಸಬೇಕೆಂದು ಶುಚಿತ್ವ ಕಾಪಾಡಿಕೊಳ್ಳಬೇಕೆಂದರು. ಸಮಾರಂಭದ ಅಧ್ಯಕ್ಷತೆವಹಿಸಿದ್ದ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗುಜ್ಜಲ ಶಿವರಾಮ್ ಮಾತನಾಡಿ, ಸಂಘಗಳು ಬಹಳ ಮುಖ್ಯ. ಇದರಿಂದ ಗ್ರಾಮಗಳಿಗೆ ಬೇಕಾದ ಸೌಲಭ್ಯ ಪಡೆಯಬಹುದಾಗಿದೆ. ಇದೊಂದು ಉತ್ತಮ ವೇದಿಕೆಯಾಗಿದ್ದು, ಯುವಜನರು ಇದರಲ್ಲಿ ಪಾಲ್ಗೊಳ್ಳಬೇಕೆಂದರು. ಈ ಸಮಾರಂಭದಲ್ಲಿ ಗ್ರಾಮದ ನಿವೃತ್ತ ಶಿಕ್ಷಕರಾದ ಬಸವರಾಜ ಮತ್ತು ಎಲ್. ವಿಠೋಬ್ ನಾಯ್ಕ ಇವರನ್ನು ಸನ್ಮಾನಿಸಲಾಯಿತು.ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಂದೀಪ್ ಸಿಂಗ್, ಪಂತರ್ ಜಯಂತ್, ಗುಜ್ಜಲ್ ಚಂದ್ರಶೇಖರ್, ಗ್ರಾಮಪಂಚಾಯತಿ ಅಧ್ಯಕ್ಷ- ಸದಸ್ಯರು ಮತ್ತು ಗ್ರಾಮದ ಮುಖಂಡರು ಹಾಜರಿದ್ದರು. ಶ್ವೇತಾ ಮತ್ತು ನೇತ್ರ ಪ್ರಾರ್ಥಿಸಿದರು. ಕೃಷ್ಣನಾಯಕ ಸ್ವಾಗತಿಸಿದರು. ಹನುಮಂತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಮಂಜುನಾಥ ನಿರೂಪಿಸಿದರು. ಈ ಸಮಾರಂಭದಲ್ಲಿ ಹೊಸೂರು ಗ್ರಾಮಾಭಿವೃದ್ಧಿ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಪ್ರಕಟಿಸಲಾಯಿತು. ಅಧ್ಯಕ್ಷ ಕೃಷ್ಣ ನಾಯ್ಕ ಎಸ್., ಗೌರವ ಅಧ್ಯಕ್ಷ ಹನುಮಂತಪ್ಪ ಎ., ಉಪಾಧ್ಯಕ್ಷ ಶ್ರೀನಿವಾಸ, ಕಾರ್ಯದರ್ಶಿ ಕೆ. ಕೊಟ್ರೇಶ್, ಖಜಾಂಚಿ ಎಸ್.ಮಂಜು ಆಯ್ಕೆಯಾದರು.
0 comments:
Post a Comment