PLEASE LOGIN TO KANNADANET.COM FOR REGULAR NEWS-UPDATES

 ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ೨೦೧೫-೧೬ ನೇ ಸಾಲಿಗೆ ನಮ್ಮೂರ ಶಾಲೆ ನಮ್ಮ ಯುವಜನರು, ಯೋಜನೆ ಅಡಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ಮತ್ತು ಯುವಜನರ ಸಬಲಿಕರಣಗೊಳಿಸುವ ಗಮನಾರ್ಹ ಸಾಧನೆಯನ್ನು ಮಾಡುವ ಯುವಕ/ಯುವತಿ ಸಂಘ/ ಯುವ ಗುಂಪಿಗೆ ೦೧ ಲಕ್ಷ ರೂ. ಪ್ರೋತ್ಸಾಹ ಧನ ನೀಡುವ ಯೋಜನೆಗೆ ಅರ್ಜಿ ಆಹ್ವಾನಿಸಿದೆ.
   ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಲ್ಲಿ ನೊಂದಣಿಯಾಗಿರುವ ಪ್ರತಿ ತಾಲೂಕಿನ ಯುವಕ/ಯುವತಿ ಸಂಘಗಳು ಮಾತ್ರ ಪ್ರಸ್ತಾವನೆಗಳನ್ನು ಸಲ್ಲಿಸಬಹುದಾಗಿದೆ.  ಈ ಯೋಜನೆ ಅಡಿಯಲ್ಲಿ ಜೂನ್-೨೦೧೫ ರಿಂದ ಜುಲೈ-೨೦೧೬ ರ ಅವಧಿಯಲ್ಲಿ ಶಾಲಾ ಸರ್ವಾಂಗೀಣ ಅಭಿವೃದ್ದಿ, ಶಾಲಾ ಮಕ್ಕಳ ಕಲಿಕಾ ಸಾಮರ್ಥ್ಯ, ಶಾಲಾ ಆವರಣ ಶುಚ್ಚಿತ್ವ, ಅಗತ್ಯ ಸೌಲಭ್ಯಗಳ ಪೂರೈಕೆ ಮತ್ತು ಶಾಲೆ ಸುತ್ತಲಿನ ಪರಿಸರ ಅಭಿವೃದ್ದಿ, ಕಾರ್ಯಕ್ರಮಗಳಲ್ಲಿ ಪರಿಣಾಮಕಾರಿಯಾಗಿ ಮತ್ತು ಯಶಸ್ವಿಯಾಗಿ ತೊಡಗಿಸಿಕೊಂಡಿರುವ ಯುವಕ ಸಂಘಗಳ ಕಾರ್ಯಕ್ರಮಗಳ ವಿವರಗಳೊಂದಿಗೆ ಪ್ರಸ್ತಾವನೆಯನ್ನು ಸಲ್ಲಿಸಬಹುದು. ಪ್ರಸ್ತಾವನೆಗಳನ್ನು ನಮ್ಮೂರ ಶಾಲೆ ನಮ್ಮ ಯುವಜನರು ಕಾರ್ಯಕ್ರಮಗಳಲ್ಲಿ ಅಡಿಯಲ್ಲಿ ಕೈಗೊಳ್ಳಬಹುದಾದ ವಿಭಾಗ-೦೧ ಮತ್ತು ವಿಭಾಗ-೦೨ ರಲ್ಲಿ ನಿಗದಿ ಪಡಿಸಿರುವ ಯೋಜನೆಗಳಲ್ಲಿ ಪ್ರತಿಯೊಂದು ವಿಭಾಗದಿಂದ  ಕನಿಷ್ಟ ಎರಡು  ಕಾರ್ಯಕ್ರಮಗಳನ್ನು ಆಯ್ಕೆ ಮಾಡಿ ಎರಡು ವಿಭಾಗದಿಂದ ನಾಲ್ಕೂ ಕಾರ್ಯಕ್ರಮಗಳನ್ನು ಆಯ್ಕೆ ಮಾಡಿ ಸಲ್ಲಿಸಬಹುದು.  ನಿಗದಿತ ಅರ್ಜಿಯನ್ನು ಸಂಬಂದಪಟ್ಟ ತಾಲ್ಲೂಕಿನ ಸಹಾಯಕ ಯುವಜನ ಸೇವಾ ಕ್ರೀಡಾಧಿಕಾರಿ ಅಥವಾ  ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಇವರಿಂದ ಪಡೆಯಬಹುದು.  ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ :೦೮೫೩೯-೨೦೧೪೦೦ ರಲ್ಲಿ ಸಂಪರ್ಕಿಸಬಹುದು. ಧನಸಹಾಯ ಕೋರಿಬಂದ ಪ್ರಸ್ತಾವನೆಗಳನ್ನು ಆಯಾ ತಾಲ್ಲೂಕಿನ ತಾಲ್ಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಅಧ್ಯಕ್ಷತೆಯ ಸಮಿತಿಯಲ್ಲಿ ತಾಲ್ಲೂಕಿಗೆ ಒಂದರಂತೆ ಉತ್ತಮವಾದ ಸಂಘವನ್ನು ಆಯ್ಕೆ ಮಾಡಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಚರ್ಚಿಸಿ ತೀರ್ಮಾನಿಸಿ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರು ಇವರಿಗೆ ಸಲ್ಲಿಸಲಾಗುವುದು. ಈ ಪ್ರಕ್ರಿಯ ೧೫ನೇ ಮೇ-೨೦೧೫ ರ ಒಳಗೆ ತಾಲ್ಲೂಕ ಪಂಚಾಯತ್‌ನ ಸಭೆಯ ಶಿಫಾರಸ್ಸಿನೊಂದಿಗೆ ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಇವರಿಗೆ ಕಳುಹಿಸುವಂತೆ  ತಿಳಿಸಿದೆ.

Advertisement

0 comments:

Post a Comment

 
Top