PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ-ಮೇ-೦೧, ಅಗಳಕೇರಾ ಗ್ರಾಮದಲ್ಲಿ ೨೦೧೩-೧೪, ೨೦೧೪-೧೫ ರ ಹೆಚ್‌ಕೆಡಿಬಿ ಯೋಜನೆ ಅನುದಾನದಡಿಯಲ್ಲಿ ಅಂದಾಜು ಮೊತ್ತ ರೂ.೭ ಲಕ್ಷದ ಶುದ್ದ ಕುಡಿಯುವ ನೀರಿನ ಘಟಕದ ಉದ್ಘಾಟನೆ ಹಾಗೂ ರೂ.೨೦ ಲಕ್ಷದ ಸಿಸಿ ರಸ್ತೆ, ಚರಂಡಿ ಮತ್ತು ಪೈಪ್‌ಲೈನ್ ಕಾಮಗಾರಿಗಳ ಭೂಮಿ ಪೂಜೆ ನೆರವೆರಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು. ಗ್ರಾಮೀಣ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ವಿಶೇಷವಾಗಿ ಬಡವರ ದೀನದಲಿತರ ಹಿಂದುಳಿದ ವರ್ಗಗಗಳ ಜನರ ಆರೋಗ್ಯ ಸುಧಾರಣೆಗಾಗಿ ಪ್ರತಿ  ಗ್ರಾಮಗಳಲ್ಲಿ ಶುದ್ದ ಕುಡಿಯವ ನೀರಿನ ಘಟಕಗಳನ್ನು ಪ್ರಾರಂಭ ಮಾಡಿ ಅಶುದ್ದ ನೀರಿನಿಂದ  ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ದೂರಮಾಡಲು ಪ್ರತಿ ಗ್ರಾಮಕ್ಕೆ ಶುದ್ದ ಕುಡಿಯವ ನೀರಿನ ಘಟಕ  ಅತ್ಯವಶ್ಯಕ ಗ್ರಾಮಗಳ ಸರ್ವೋತೋಮುಖ ಅಭಿವೃದ್ದಿಗೆ ಗುಣಮಟ್ಟದ ಸಿಸಿ ರಸ್ತೆ, ಚರಂಡಿ ವ್ಯವಸ್ಥೆ, ಶೌಚಾಲಯಗಳ ನಿರ್ಮಾಣ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ ಮಾಡಿ ನುರಿತ ವೈದ್ಯರನ್ನು ನೇಮಕ ಮಾಡಲಾಗುವುದು. ಪ್ರತಿ ಗ್ರಾಮಗಳ ಜನರು ಅಭಿವೃದ್ದಿ ಕಾರ್ಯಗಳ ನಿರ್ಮಾಣಕ್ಕೆ ಸಹಕಾರ ನೀಡಿ ಗ್ರಾಮಗಳ ಅಭಿವೃದ್ದಿಗೆ ಶ್ರಮಿಸಬೇಕೆಂದು ಕರೆ ನೀಡಿದರು. 

ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಟಿ.ಜನಾರ್ಧನ ಹುಲಿಗಿ, ತಾ.ಪಂ.ಸದಸ್ಯ ಸುಶೀಲಮ್ಮ ವಡ್ಡರ್, ಗಂಗಮ್ಮ ವಡ್ಡರ, ಶಿವಲಿಂಗಪ್ಪ ತಿಪ್ಪವ್ವನವರ, ದೇವಣ್ಣ ಮೇಕಾಳೆ, ಸದಾಶಿವಯ್ಯ ಭೂಸನೂರಮಠ, ಮಲ್ಲಿಕಾರ್ಜುನ ಕಿನ್ನಾಳ, ಲಿಂಗರಾಜ ಚಳಿಗೇರಿ, ವೀರಭದ್ರಯ್ಯ ಭೂಸನೂರಮಠ, ದೇವರಾಜ ಗಡಾದ  ಇನ್ನೂ ಅನೇಕ ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top