ಹೊಸಪೇಟೆ: ಕಡುಬಡವರು ಹಸಿವಿನಿಂದ ನರಳಬಾರದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಪಿಎಲ್ ಕಾರ್ಡುದಾರರಿಗೆ ಉಚಿತ ಅಕ್ಕಿ ನೀಡುವ ಯೋಜನೆ ಜಾರಿಗೆ ತಂದಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಹೇಳಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಬಿಪಿಎಲ್ ಕಾರ್ಡುದಾರರಿಗೆ ಉಚಿತ ಅಕ್ಕಿ ನೀಡುವ ಯೋಜನೆಗೆ ಚಾಲನೆ ನೀಡಿದ ಅವರು, ಇಂದು ವಿಶ್ವಕಾರ್ಮಿಕರ ದಿನಾಚರಣೆಯಂದೇ ಈ ಯೋಜನೆಯನ್ನು ಜಾರಿಗೊಳಿಸುತ್ತಿರುವುದು ಕಾರ್ಮಿಕ ಸಚಿವನಾದ ನನಗೆ ಸಂತಸದ ವಿಷಯವಾಗಿದೆ ಎಂದರು. ೯೯ಲಕ್ಷ ಕುಟುಂಬಗಳಿಗೆ ಒಂದುರೂಪಾಯಿ ಕೆ.ಜೆ.ಅಕ್ಕಿ ವಿತರಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಈಗ ೧ಕೋಟಿ ೪ಲಕ್ಷ ಕುಟುಂಬಗಳಿಗೆ ಉಚಿತ ಅಕ್ಕಿ ವಿತರಿಸುವ ಯೋಜನೆಯ ಮೂಲಕ ಹೊಸ ಇತಿಹಾಸ ಸೃಷ್ಠಿಸಿದ್ದಾರೆಂದರು.
ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಉಚಿತ ಅಕ್ಕಿ ವಿತರಣೆ ಸಮಾರಂಭ ನಡೆಯುತ್ತಿದೆ. ಅಕ್ಕಿಯ ಜೊತೆಗೆ ಒಂದು ಲೀಟರ್ ತಾಳೆಎಣ್ಣೆ, ಒಂದು ಕೆ.ಜಿ. ಉಪ್ಪು ವಿತರಿಸಲಾಗುತ್ತಿದೆ ಎಂದರು. ಎಪಿಎಲ್ ಕಾರ್ಡುದಾರರಿಗೆ ಕೂಡಾ ೧೫ಕೆ.ಜಿ.ಅಕ್ಕಿ, ಗೋಧಿ ಕಡಿಮೆಧರದಲ್ಲಿ ವಿತರಿಸಲಾಗುವುದು ಎಂದರು.
ಎಸ್‌ಸಿ ಎಸ್‌ಟಿ ವರ್ಗಗಳಿಗೆ ಕುಟೀರ ಜ್ಯೋತಿ, ಭಾಗ್ಯಜ್ಯೋತಿ ವಿದ್ಯುತ್ ಬಿಲ್ ರದ್ಧು ಮಾಡಲಾಗುವುದು ಎಂದರು.
0 comments:
Post a Comment