PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ- ಜಿಲ್ಲಾ ಪಂಚಾಯತಿ ಕೊಪ್ಪಳ ತಾಲೂಕ ಪಂಚಾಯತಿ ಕೊಪ್ಪಳ ಇವರ ಸಹಯೋಗದಲ್ಲಿ ದಿನಾಂಕ ೨೩-೪-೨೦೧೫ ರಿಂದ ೨೭-೦೪-೨೦೧೫ ರವರೆಗೆ ಆಯ್ದ ಗ್ರಾಮಗಳಾದ ಕವಲೂರ, ಬನ್ನಿಕೊಪ್ಪ, ಅಳವಂಡಿ, ಹಂದ್ರಾಳ, ಹೈದರನಗರ ಗ್ರಾಮಗಳಲ್ಲಿ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಗವಿಮಠ ಕೊಪ್ಪಳ ಇವರ ಆಧ್ಯಾತ್ಮ ಪ್ರವಚನ ಹಾಗೂ ಪಾದಯಾತ್ರೆ ಕಾರ್ಯಕ್ರಮದ ಅಂಗವಾಗಿ ನೀರು ನೈರ್ಮಲ್ಯ, ಸ್ವಚ್ಛತೆ, ಪರಿಸರ, ಶೌಚಾಲಯ, ಜೈವಿಕ ಗೊಬ್ಬರ ತಯಾರಿಕೆ ಇನ್ನೂ ಅನೇಕ ವಿಷಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಚೇತನ ಸಾಂಸ್ಕೃತಿ ಕಲಾಸಂಸ್ಥೆ (ರಿ) ಕೊಪ್ಪಳ ಸಾ|| ಓಜನಹಳ್ಳಿ ಕಲಾ ತಂಡದವರಿಂದ ಜಾನಪದ ಹಾಡುಗಳ ಮುಖಾಂತರ ಬೀದಿ ನಾಟಕ ಪ್ರದರ್ಶನವನ್ನು ಒಳ್ಳೆ ಅಭಿನಯ ಮುಖಾಂತರ ಜನರಿಗೆ ಮನವರಿಕೆಯಾಗುವಂತೆ ಪ್ರದರ್ಶನ ನೀಡಲಾಯಿತು. ಕಲಾ ತಂಡದ ನಾಯಕ ಶಿವಮೂರ್ತಿ ಮೇಟಿ ನಿರ್ದೆಶನದಲ್ಲಿ ಕಲಾವಿದರಾಗಿ ನೀಲಪ್ಪ ಮೋಟಿ, ಬಾಲರಾಜ ಮೋಟಿ, ಬಾಬುಸಾಬ ಸಿಂಧೋಗಿ, ಕರೀಮ್‌ಸಾಬ ನದಾಪ್, ಅಂಬುಜಾ ಸಿಂಧನೂರ, ಪ್ರಕಾಶ ಹೊಸಕೇರಾ ಮಹ್ಮದಸಾಬ ನದಾಫ್ ಭಾಗವಹಿಸಿದ್ದರು. ಈ ಒಂದು ಕಾರ್ಯಕ್ರಮಕ್ಕೆ ಗ್ರಾ.ಪಂ. ಅಧ್ಯಕ್ಷರು, ಸರ್ವ ಸದಸ್ಯರು, ಸಿಬ್ಬಂದಿ ವರ್ಗದವರು, ಯುವಕರು, ಮಹಿಳಾ ಗುಂಪಿನನವರು, ಗ್ರಾಮದ ಸಮಸ್ತ ನಾಗರಿಕರು ಭಾಗವಹಿಸಿ ಕಾರ್ಯಕ್ರಮ ಒಳ್ಳೆಯ ಯಶಸ್ವಿಯಾಗಿ ಜರುಗಿಸಲಾಯಿತು   ಶಿವಮೂರ್ತಿ ಮೇಟಿ ತಿಳಿಸಿದ್ದಾರೆ.

Advertisement

0 comments:

Post a Comment

 
Top