೨೦೧೪ ರ ಬೀದಿ ವ್ಯಾಪಾರಿಗಳ ರಕ್ಷಣೆ ಹಾಗೂ ಭದ್ರತೆ ಕಾಯ್ದೆಯಲ್ಲಿ ಬೀದಿ ವ್ಯಾಪಾರಿಗಳಿಂದ ಯಾವುದೇ ರೀತಿ ಜಕಾತಿ ವಸೂಲಿ ಮಾಡಬಾರದೆಂದಿದ್ದರೂ ಮತ್ತು ಸುಪ್ರಿಂ ಕೋರ್ಟ್ ಆದೇಶದಂತೆ ಬೀದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಬಾರದು. ಅವರಿಂದ ಯಾವುದೇ ರೀತಿಯ ಜಕಾತಿ ವಸೂಲಿ ಮಾಡಬಾರದೆಂದು ಆದೇಶವಿದ್ದರೂ ಗಂಗಾವತಿಯಲ್ಲಿ ಖಾಸಿಂಸಾಬ್ ತಂದೆ ಬಾಷಾಸಾಬ್ ಇವರು ವಾರದ ಸಂತೆ ಮತ್ತು ದಿನದ ಸಂತೆ ಜಕಾತಿ ವಸೂಲಿ ಮಾಡಲು ಹರಾಜಿನಲ್ಲಿ ಅಧಿಕಾರ ಪಡೆದಿದ್ದಾರೆ. ಇವರು ಪಡೆದ ಹರಾಜಿಗೂ ಬೀದಿ ವ್ಯಾಪಾರಿಗಳಿಗೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ಖಾಸಿಂಸಾಬ್ ಬೀದಿ ವ್ಯಾಪಾರಿಗಳಿಂದ ದೌರ್ಜನ್ಯ ಪೂರಕವಾಗಿ ಜಕಾತಿ ವಸೂಲಿ ಮಾಡುತ್ತಿರುವುದು ಕಾನೂನು ಬಾಹಿರವೆಂದು ಕಾರ್ಮಿಕ ಮುಖಂಡ ಭಾರಧ್ವಾಜ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಬೀದಿ ವ್ಯಾಪಾರಿಗಳ ರಕ್ಷಣೆ ಮತ್ತು ಭದ್ರತಾ ಕಾಯ್ದೆ ೨೦೧೪ ರಂತೆ ಗಂಗಾವತಿ ನಗರಸಭೆಯಲ್ಲಿ ಬೀದಿ ವ್ಯಾಪಾರಿಗಳ ರಕ್ಷಣಾ ಸಮಿತಿ ಅಸ್ತಿತ್ವಕ್ಕೆ ತರಲಾಯಿತು. ಇದರಲ್ಲಿ ನಗರಸಭೆ ಅಧ್ಯಕ್ಷರು, ಪೌರಾಯುಕ್ತರು, ನಗರ ಪೊಲೀಸ್ ಇನ್ಸ್‌ಪೆಕ್ಟರ್, ಲೀಡ್‌ಬ್ಯಾಂಕ್ ಮ್ಯಾನೇಜರ್, ತಾಲೂಕ ವೈದ್ಯಾಧಿಕಾರಿ ಜೊತೆಗೆ ಇನ್ನು ನಾಲ್ಕು ಜನ ಅಧಿಕಾರಿಗಳು ಇರುತ್ತಾರೆ. ಬೀದಿ ವ್ಯಾಪಾರಿಗಳ ಪರವಾಗಿ ಒಂಬತ್ತು ಜನ ಸದಸ್ಯರಿರುತ್ತಾರೆ. ೧೮ ಜನ ಸದಸ್ಯರ ಸಮಿತಿ ಬೀದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸದಂತೆ ಬೀದಿ ವ್ಯಾಪಾರಿಗಳಿಗೆ ಯಾವುದೇ ಕಿರುಕುಳ ಆಗದಂತೆ ನೋಡಿಕೊಳ್ಳುತ್ತದೆ. ನಗರಸಭೆಯಲ್ಲಿ ಬಹಿರಂಗ ಹರಾಜಿನಲ್ಲಿ ಜಕಾತಿ ಎತ್ತಲು ಅಧಿಕಾರ ಪಡೆದ ಖಾಸಿಂಸಾಬ್ ಬೀದಿ ವ್ಯಾಪಾರಿಗಳ ರಕ್ಷಣಾ ಸಮಿತಿಯ ಅನುಮತಿ ಪಡೆಯದೇ ಬೀದಿ ವ್ಯಾಪಾರಿಗಳಿಗೆ ದೌರ್ಜನ್ಯ ಮಾಡುವುದು ಕಾನೂನು ಬಾಹಿರವಾಗುತ್ತದೆ. ಕೂಡಲೇ ಜಕಾತಿ ಹರಾಜು ಪಡೆದವರು ಬೀದಿ ವ್ಯಾಪಾರಿಗಳ ಮೇಲೆ ದೌರ್ಜನ್ಯ ಮಾಡುವುದು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘ ಚಳುವಳಿ ಮುಖಾಂತರ ಉತ್ತರ ನೀಡಲಿದೆ ಎಂದು ಬೀದಿ ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘದ ಜಿಲ್ಲಾಧ್ಯಕ್ಷ ಖಾದರಭಾಷಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Home
»
Koppal News
»
koppal organisations
» ಬೀದಿ ವ್ಯಾಪಾರಿಗಳಿಂದ ದೌರ್ಜನ್ಯವಾಗಿ ಜಕಾತಿ ವಸೂಲಿ ಖಂಡನೆ ಭಾರಧ್ವಾಜ್.
Subscribe to:
Post Comments (Atom)
0 comments:
Post a Comment