ಕೊಪ್ಪಳ, ಏ.: ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ೬ನೇ ತರಗತಿ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಸಂಬಂಧಿಸಿದ ಶಾಲೆಗಳಲ್ಲಿ ಪ್ರಕಟಿಸಲಾಗಿದ್ದು, ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಸತಿ ಶಾಲೆ ಆಯ್ಕೆ ಮಾಡಿಕೊಳ್ಳಲು ಏ.೨೮ ಮತ್ತು ೨೯ ರಂದು ಕೊಪ್ಪಳ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್ಲಿ ಎರಡು ದಿನಗಳ ಕೌನ್ಸೆಲಿಂಗ್ ಏರ್ಪಡಿಸಲಾಗಿದೆ.
ವಿವಿಧ ಪ್ರವರ್ಗವಾರು ಕಟ್‌ಆಫ್ ಅಂಕಗಳು ಈ ಕೆಳಗಿನಂತಿವೆ: ಪರಿಶಿಷ್ಟ ಜಾತಿಯ ಬಾಲಕರಿಗೆ ೮೧, ಬಾಲಕಿಯರಿಗೆ ೬೪ ಕಟ್‌ಆಫ್ ಅಂಕಗಳನ್ನು ನಿಗದಿಪಡಿಸಲಾಗಿದ್ದು, ಪರಿಶಿಷ್ಟ ವರ್ಗದ ಬಾಲಕರಿಗೆ ೯೧, ಬಾಲಕಿಯರಿಗೆ ೭೧, ಸಾಮಾನ್ಯ ವರ್ಗದ ಬಾಲಕರಿಗೆ ೯೦, ಬಾಲಕಿಯರಿಗೆ ೯೧ ಕಟ್‌ಆಫ್ ಅಂಕಗಳನ್ನು ನಿಗದಿಪಡಿಸಿ, ಏ.೨೮ ರಂದು ಸಂದರ್ಶನ ಏರ್ಪಡಿಸಲಾಗಿದೆ.
ಪ್ರವರ್ಗ-೧ ರ ಬಾಲಕರಿಗೆ ೯೦ ಹಾಗೂ ಬಾಲಕಿಯರಿಗೆ ೮೪ ಕಟ್‌ಆಫ್ ಅಂಕಗಳನ್ನು ನಿಗದಿಪಡಿಸಲಾಗಿದೆ. ಪ್ರವರ್ಗ-೨ಎ ನ ಬಾಲಕರಿಗೆ ೯೩ ಹಾಗೂ ಬಾಲಕಿಯರಿಗೆ ೮೯, ಪ್ರವರ್ಗ-೨ಬಿ ಬಾಲಕರಿಗೆ ೮೯ ಮತ್ತು ಬಾಲಕಿಯರಿಗೆ ೮೫, ಪ್ರವರ್ಗ ೩ಎ ಬಾಲಕರಿಗೆ ೯೦, ಬಾಲಕಿಯರಿಗೆ ೮೨ ಹಾಗೂ ಪ್ರವರ್ಗ-೩ಬಿ ಬಾಲಕರಿಗೆ ೯೪, ಬಾಲಕಿಯರಿಗೆ ೯೨ ಕಟ್‌ಆಫ್ ಅಂಕಗಳನ್ನು ನಿಗದಿಪಡಿಸಲಾಗಿದ್ದು, ಏ.೨೯ ರಂದು ಸಂದರ್ಶನ ಏರ್ಪಡಿಸಲಾಗಿದೆ.
ಕೌನ್ಸೆಲಿಂಗ್‌ಗೆ ಹಾಜರಾಗಲು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಈಗಾಗಲೇ ಸಂದರ್ಶನ ಪತ್ರ ಕಳುಹಿಸಲಾಗಿದ್ದು, ಸಂದರ್ಶನ ಪತ್ರ ತಲುಪದೇ ಇರುವ ವಿದ್ಯಾರ್ಥಿಗಳು ಮೇಲ್ಕಂಡ ಕಟ್‌ಆಫ್ ಅಂಕಗಳನ್ನು ಹೊಂದಿದ್ದಲ್ಲಿ ಈ ಮೇಲೆ ತಿಳಿಸಿದ ಸಂದರ್ಶನ ದಿನಾಂಕಗಳಂದು ಅಗತ್ಯ ದಾಖಲಾತಿಗಳಾದ ಪ್ರವೇಶ ಪರೀಕ್ಷಾ ಗುರುತಿನ ಚೀಟಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಅಂಗವಿಕಲ ಪ್ರಮಾಣ ಪತ್ರ, ವಿಶೇಷ ವರ್ಗದ ಪ್ರಮಾಣ ಪತ್ರ, ೫ನೇ ತರಗತಿ ಅಂಕಪಟ್ಟಿ, ಅಲೆಮಾರಿ/ಅರೆಅಲೆಮಾರಿ ಪ್ರಮಾಣ ಪತ್ರಗಳೊಂದಿಗೆ ಹಾಜರಾಗಬಹುದಾಗಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.

0 comments:
Post a Comment