ಕೊಪ್ಪಳ, ೧೯- ಪ್ರತಿದಿನ ಪರಿಸರ ವೈಪರಿತ್ಯ ಹೆಚ್ಚಾಗುತ್ತಿದ್ದು ಪ್ರತಿಯೋಬ್ಬರು ಸೈಕಲ ಬಳಸಿ ಪರಿಸರ ಸಂರಕ್ಷಿಸುವ ಹಾಗೂ ಆರೋಗ್ಯ ರಕ್ಷಣೆ ಮಾಡಿ ಕೊಳ್ಳಬೇಕೆಂದು ನಗರ ಠಾಣ ಪಿ,ಹೆಚ್,ಐ ಪಿ, ಗಣೇಶ ಕರೆ ನೀಡಿದರು.
ಅವರು ವಿಶ್ವ ಸೈಕಲ ದಿನಾಚರಣೆ ಅಂಗವಾಗಿ ನಗರದಲ್ಲಿ ರವಿವಾರ ಬೃಹತ್ತ ಸೈಕಲ ಜಾಗ್ರತಿ ಜಾಥ ಕ್ಕೆ ಕೊಪ್ಪಳ ನಗರದ ಗವಿಮಠದ ಬಳಿ ಹಸಿರು ನಿಶಾನೆ ತೊರಿಸುವ ಮುಲಕ ಚಾಲನೆ ನೀಡಿ ಮಾತನಾಡುತ್ತಿದ್ದರು.
ಹೆಚ್ಚು ವಾಹನ ಬಳಕೆ ಯಿಂದಾಗಿ ಪರಿಸರ ಮಾಲಿನ್ಯ ಹಾಗೂ ಶಬ್ಧ ಮಾಲಿನ್ಯ ಹೆಚ್ಚುತ್ತಿದ್ದು ಸಂಚಾರಕ್ಕೆ ಸರಳ ಮಾರ್ಗ ಸೈಕಲ ಬಳಕೆ ಎಂದು ಹೇಳಿದ ಇವರು ,ವಿಶ್ವ ಸೈಕಲ ದಿನಾಚರಣೆಯಂದು ಯುವಜನತೆಗೆ ಜಾಗೃತಿ ಮುಡಿಸುವದು ಅಗತ್ಯವಾಗಿದೆ ಎಂದರು.
ಸೈಕಲ ಜಾಥ ಗವಿಮಠದಿಂದ ಪ್ರಾರಂಭವಾಗಿ ಗಡಿಯಾರ ಕಂಭ, ಜವಾಹರ ರಸ್ಥೆ ಮೂಲಕ ಸಂಚರಿಸಿ, ಅಶೋಕ ವೃತ್ತದಿಂದ ಬಸ ನಿಲ್ದಾಣ, ಸಿಂಪಿಲಿಂಗಣ್ಣ ರಸ್ಥೆ ಮೂಲಕ ಟಾಂಗಾ ಸ್ಟ್ಯಾಡ ಬಳಿ ಸಮಾರೋಪ ಗೊಂಡಿತು.
ಈ ಸಂದರ್ಭದಲ್ಲಿ ಪತ್ರಕರ್ತ ಸೋಮರೆಡ್ಡಿ ಅಳವಂಡಿ, ರೆಡ್ ಕ್ರಾಸ ಸಂಸ್ಥೆ ಕಾರ್ಯದರ್ಶಿ ಡಾ, ಶ್ರೀನಿವಾಸ ಹ್ಯಾಟಿ, ಸುದೀರ ಅವರಾಧಿ, ರಾಜೇಶ ಯಾವಗಲ, ಗುರುರಾಜ ಗುಡಿ, ಮಂಜುನಾಥ ಅಂಗಡಿ, ಸಂತೋಷ ದೇಶಪಾಂಡೆ, ಬಸವರಾಜ ಸಂಕನಗೌಡ್ರ, ಮಲ್ಲಿಕಾರ್ಜುನ ಹ್ಯಾಟಿ, ಹುಲಗಪ್ಪ ಕಟ್ಟಮನಿ,ಬಸವರಾಜ ಶಿರಗುಂಪಿ ಶೆಟ್ರ, ಮಾರುತಿ ನಾಯ್ಕಾರ ಸೇರಿದಂತೆ ೫೦ಕ್ಕು ಹೆಚ್ಚು ಜನ ಉಪಸ್ಥಿತರಿದ್ದರು.
0 comments:
Post a Comment