ಕೊಪ್ಪಳ: ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದಲ್ಲಿ ಜರುಗಿದ ಶ್ರೀ ಕೂಡಲ ಸಂಗಮೇಶ್ವರ ವಿದ್ಯಾಬಿವೃದ್ಧಿ ಸಂಸ್ಥೆಯ ದಶಮಾನೋತ್ಸವ ಹಾಗೂ ಸಾಮೂಹಿಕ ವಿವಾಹದ ಸಾನಿದ್ಯ ವಹಿಸಿ ಮಾತನಾಡಿದ ಷ,ಬ್ರ,೧೦೮ ಶ್ರೀ ಸಂಗಮೇಶ್ವರ ಸ್ವಾಮಿಜಿಯವರು ಇಂದಿನ ಸ್ಪರ್ದಾ ಪ್ರಪಂಚದಲ್ಲಿ ಮದುವೆಗೆ ದುಂದು ವೆಚ್ಚ ಮಾಡುವದನ್ನು ನಿಲ್ಲಿಸಿ ಸಾಮೂಹಿಕ ವಿವಾಹಕ್ಕೆ ಪ್ರೋತ್ಸಾಹ ನೀಡುವುದು ಅತ್ಯಗತ್ಯ ಆ ನಿಟ್ಟಿನಲ್ಲಿ ಸರಕಾರವು ಸಾಮೂಹಿಕ ವಿವಾಹಕ್ಕೆ ಸಹಕಾರ ನೀಡುವುದರ ಜೊತೆಗೆ ಸಮುದಾಯವು ಶ್ರಮಿಸಿದರೆ ಆರ್ಥಿಕೋದ್ದಾರ ವಾಗುತ್ತದೆ. ನವವಧು ವರರು ಹೊಸ ಬದುಕಿಗೆ ಪಾದಾರ್ಪಣೆ ಮಾಡುವುದರ ಜೊತೆಗೆ ಕೌಟುಂಬಿಕ ಕಲಹವನ್ನು ತಡೆಗಟ್ಟಿ ಗುರು ಹಿರಿಯರಿಗೆ ಗೌರವ ನಯ ವಿನಯತೆಯೊಂದಿಗೆ ಜೀವಿಸುವುದು ಮತ್ತು ಧಮಾರ್ಥದಲ್ಲಿ ನಂಬಿಕೆಯಿರಿಸಿ ಬಾಳಿದರೆ ಬದುಕು ಹಾಲು ಜೇನು ಸವಿದಂತೆ ಸಂತೋಷಾಗಿರುತ್ತದೆಂದು ಕರೆ ನೀಡಿದರು.
ಈ ಸಮಾರಂಭದ ಅಧ್ಯಕ್ಷತೆವಹಿಸಿಕೊಂಡು ಕುಕನೂರು ಜಿಲ್ಲಾ ಪಂಚಾಯತ ಸದಸ್ಯ ಈರಪ್ಪ ಕುಡಗುಂಟಿ ಮಾತನಾಡಿ, ಸಂಸ್ಥೆಯ ದಶಮಾನೊತ್ಸವ ಹಾಗೂ ಸಾಮೂಹಿಕ ವಿವಾಹವನ್ನು ನೋಡಿದರೆ ನಿಜಕ್ಕೂ ಸಂಸ್ಥೆಯ ಕಾರ್ಯ ಶ್ಲಾಘನೀಯ. ಮಕ್ಕಳಿಗೆ ಗುಣಾತ್ಮಕ ಹಾಗೂ ಋಣಾತ್ಮಕ ನೈತಿಕತೆಯ ಶಿಕ್ಷಣ ನೀಡುತ್ತ, ಗ್ರಾಮೀಣ ಭಾಗದಲ್ಲಿ ಇಂತಹ ಕಾಂiiವನ್ನು ನಡೆಸಿಕೊಂಡು ಬರುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಸದರಿ ಸಂಸ್ಥೆಯವರ ದೂರ ದೃಷ್ಠಿತ್ವ, ಆಡಳಿತ ಮಂಡಳಿಯ ಹೋರಾಟ ಮತ್ತು ಸಂಸ್ಥೆತೆಯ ಸಿಬ್ಬಂದಿಯೊಂದಿಗೆ ಸಮುದಾಯದ ಪಾತ್ರವು ಅತ್ಯಂತ ಮಹತ್ವದೆಂದು ಮಾತನಾಡಿದರು.
ಜಿಲ್ಲಾ ಪಂಚಾಯತಿಯ ಮಾಜಿ ಉಪಾಧ್ಯಕ್ಷ ಯಂಕಣ್ಣ ಯರಾಸಿ, ಶಿವಶಂಕರಯ್ಯ ದೇಸಾಯಿ, ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಬುಡ್ಡಪ್ಪ ಹಳ್ಳಿ, ಭೀಮಣ್ಣ ಟೀಕಲ, ವಿ.ಎಸ್.ಎಸ್.ಎನ್ ನಿರ್ದೇಶಕ, ಗ್ರಾ.ಪ. ಸದಸ್ಯ ಶಂಕರಗೌಡ ಟೀಕಲ್, ಚನ್ನಮ್ಮ ತಳವಾರ, ಕೂಡ್ಲೇಪ್ಪ ಗೊಂದಿ, ರುದ್ರಪ್ಪ ಕೊಳಜಿ, ಯಮನಪ್ಪ ಗಡ್ಡದ, ಸಿದ್ದಪ್ಪ ತುಪ್ಪದ, ಬಸಪ್ಪ ಹಳ್ಳಿ, ಮಾನಪ್ಪ ಬಡಿಗೇರ, ಮುಂತಾದವರು ಉಪಸ್ಥಿತರಿದ್ದರು.
ಶ್ರೀಮತಿ ಸುನಿತಾ ಜತ್ತಿ ಪ್ರಾರ್ಥಿಸಿದರು. ಸತ್ಯನಾರಾಯಣ ಸೋನಾರ ಸ್ವಾಗತಿಸಿದರು. ಕಾರ್ಯದರ್ಶಿ ದ್ಯಾಮಣ್ಣ ಗೊಂದಿ ನಿರೂಪಿಸಿದರು. ಮಾರುತಿ ಗುರಿಕಾರ ವಂದಿಸಿದರು.
0 comments:
Post a Comment