ಕೊಪ್ಪಳ ಮಾ,೧೩ : ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಬಾರಿ ಬಜೆಟ್‌ನಲ್ಲಿ ಹಿಂದುಳಿದ ಭೋವಿ ಸಮಾಜದ ಅಭಿವೃದ್ಧಿಗಾಗಿ ನಿಗಮ ನೀಡಿ ಪ್ರಸಕ್ತ ಸಾಲಿನಲ್ಲಿ ೨೦ ಕೋಟಿ ರೂ ಅನುದಾನ ನೀಡಿರುವುದು ಸಂತಸವಾಗಿದೆ ಎಂದು ಜಿಲ್ಲಾ ಭೋವಿ ಸಮಾಜದ ಪ್ರಧಾನ ಕಾರ್ಯದರ್ಶಿ ಬಸವರಾಜ್ ಭೋವಿ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ನಡೆದ ಭೋವಿ ಸಮಾವೇಶದಲ್ಲಿ ಸಚಿವ ಶಿವರಾಜ್ ತಂಗಡಗಿಯವರಿಗೆ ನಿಮ್ಮ ಸಮಾಜದ ಅಭಿವೃದ್ದಿಗಾಗಿ ಶೀಘ್ರ ಭೋವಿ ಸಮಾಜದ ಅಭಿವೃದ್ಧಿ ನಿಗಮವನ್ನು ನೀಡುವುದಾಗಿ ಭರವಸೆ ನೀಡಿದ್ದರು, ಈಗ ಮುಖ್ಯಮಂತ್ರಿಗಳು ಮಾತಿನಂತೆ ನಡೆದುಕೊಂಡು ನಮ್ಮ ಸಮಾಜಕ್ಕೆ ನಿಗಮವನ್ನು ನೀಡಿದ್ದಾರೆ, ಇದರಿಂದ ಸಮಾಜದ ಅಭಿವೃದ್ಧಿಗೆ ಸಹಾಯಕವಾಗುತ್ತದೆ, ಸಮಾಜ ಸ್ವಂತ ಉದ್ಯೋಗ, ಶಿಕ್ಷಣಕ್ಕೆ ಆದ್ಯತೆ ನೀಡಲು ಸಹಕಾರಿಯಾಗುವುದು ಇದರಿಂದ ಸಮಾಜ ಅಭಿವೃದ್ಧಿಯಾಗುತ್ತದೆ ಎಂದು ಸಮಾಜದ ಜಿಲ್ಲಾಧ್ಯಕ್ಷ ಸತ್ಯಪ್ಪ ಭೋವಿ, ಪದಾಧಿಕಾರಿಗಳಾದ ನಿಂಗಪ್ಪ ಸುಣಗಾರ,ನಾಗಪ್ಪ ಚಿಕ್ಕೋಪ,ಗಾಳೆಪ್ಪ ಗಂಗಾವತಿ, ಸೂಚಪ್ಪ ಭೋವಿ,ಯಮನೂರಪ್ಪ ಭೋವಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

0 comments:
Post a Comment