ಕೊಪ್ಪಳ,ಮಾ.೧೪: ನಗರದ ಕುಷ್ಟಗಿ ರಸ್ತೆಯಲ್ಲಿರುವ ಕಾಳಿದಾಸ ಪ್ರೌಢಶಾಲೆಯಲ್ಲಿ ಶುಕ್ರವಾರ ಸರಸ್ವತಿ ಪೂಜೆ ಹಾಗೂ ಸನ್ಮಾನ ಸಮಾರಂಭ ನೆರವೇರಿಸಲಾಯಿತು.
ಅಂದು ಬೆಳಿಗ್ಗೆ ವಿಧಿ ವಿಧಾನಗಳಿಂದ ವಿದ್ಯಾಧಾತೆ ಸರಸ್ವತಿಗೆ ವಿಶೇಷ ಅಲಂಕಾರಗೊಳಿಸಿ ಪೂಜೆ ನೇರವೇರಿಸಲಾಯಿತು. ನಂತರ ನಡೆಸ ಸರಳ ಸನ್ಮಾನ ಸಮಾರಂಭದಲ್ಲಿ ನಗರಸಭೆ ನೂತನ ಅಧ್ಯಕ್ಷರಾದ ಬಸಮ್ಮ ರಾಮಣ್ಣ ಹಳ್ಳಿಗುಡಿ ಹಾಗೂ ಉಪಾಧ್ಯಕ್ಷರಾದ ಬಾಳಪ್ಪ ಬಾರಕೇರ ರವರಿಗೆ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥೆ ಅಧ್ಯಕ್ಷರಾದ ಹನುಮಂತಪ್ಪ ಅಂಗಡಿ ಮಾತನಾಡಿ, ವಿದ್ಯೆಯಿಂದ ಎನ್ನನ್ನಾದರೂ ಸಾಧಿಸಿಸಬುಹುದು ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನ ಮಾಡಿ ಕೀರ್ತಿವಂತರಾಗಿ ಪಾಲಕರಿಗೆ ಹಾಗೂ ಸಂಸ್ಥೆಯ ಕೀರ್ತಿ ಹೆಚ್ಚಿಸುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಗವಿಸಿದ್ಧಪ್ಪ ಹಿಟ್ನಾಳ, ಸಂಸ್ಥೆಯ ಮುಖ್ಯಸ್ಥರಾದ ಎಸ್.ಎಸ್. ಗುರುವಿನ ಹಾಗೂ ಶಿಕ್ಷಕರ ವೃಂದ ಹಾಗೂ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

0 comments:
Post a Comment