ಕೊಪ್ಪಳ : ಭಾರತೀಯ ಸಾಂಸ್ಕೃತಿಕ ಪರಂಪರೆಯ ಸೂಕ್ತ ನಿರ್ವಹಣೆ ಹಾಗೂ ಸಂರಕ್ಷಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸಿದ ಕಾನೂನು ಮತ್ತು ಅಂತರಾಷ್ಟ್ರೀಯ ಚಿಂತನೆಗಳನ್ನು ಗೌರವಿಸಿ ಅವುಗಳನ್ನು ಯಶಸ್ವಿಯಾಗಿ ಪರಿಪಾಲಿಸಬೇಕೆಂದು ಪುರಾತತ್ವ ಇಲಾಖೆಯ ನಿವೃತ್ತ ಅಧಿಕಾರಿ ಸಿ.ಬಿ ಪಾಟೀಲ ಕರೆ ನೀಡಿದರು. ಅವರು ಇಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರಂಪರಾಕೂಟ ಆಯೋಜಿಸಿದ್ದ ಭಾರತೀಯ ಸಾಂಸ್ಕೃತಿಕ ಸಂಪತ್ತು : ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಚಿಂತನೆ ಎಂಬ ವಿಷಯದಡಿ ಉಪನ್ಯಾಸ ನೀಡಿದರು. ಮುಂದುವರೆದು ಮಾತನಾಡಿ ನಮ್ಮ ದೇಶದ ಭವ್ಯ ಸಾಂಸ್ಕೃತಿಕ ಸಂಪತ್ತಿನ ವಿವಿಧ ಮುಖಗಳಾಗಿರುವ ಐತಿಹಾಸಿಕ, ಧಾರ್ಮಿಕ, ಆರ್ಥಿಕ, ಸಾಮಾಜಿಕ, ರಾಜಕೀಯ, ಕಲೆ ಹಾಗೂ ವಾಸ್ತುಶಿಲ್ಪ ಇವೆಲ್ಲವುಗಳ ಆಳವಾದ ಜ್ಞಾನ ಶಿಕ್ಷಕರಿಗೆ ಇರಬೇಕು. ಅಂತಹ ಬೋಧನೆ ವಿದ್ಯಾರ್ಥಿಗಳಲ್ಲಿ ಪರಂಪರೆಯ ಅರಿವು ಮೂಡಿಸಲು ಸಹಾಯಕವಾಗುತ್ತದೆ. ಇಂದು ಪ್ರಾಚೀನ ಸ್ಮಾರಕಗಳು ಹಾಗೂ ಪ್ರಾಚ್ಯಾವಶೇಷಗಳ ನೆಲೆಗಳು ಅನೈತಿಕ ಚಟುವಟಿಕೆಗಳ ತಾಣವಾಗಿವೆ.ಅದರಲ್ಲೂ ಸಾಂಸ್ಕೃತಿಕ ಸಂಪತ್ತಿನ ಕಳ್ಳಸಾಗಾಣಿಕೆದಾರರ ಕೇಂದ್ರಗಳಾಗಿವೆ. ಇವುಗಳ ರಕ್ಷಣೆಗೆ ಶಾಲಾ ಕಾಲೇಜುಗಳು ತಮ್ಮ ಪರಿಸರದಲ್ಲಿರುವ ಅರಕ್ಷಿತ ಸ್ಮಾರಕಗಳನ್ನು ದತ್ತು ಪಡೆದುಕೊಳ್ಳುವದರ ಮೂಲಕ ರಕ್ಷಿಸಬೇಕೆಂದರು. ಅದ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಶಿವಪ್ಪ ಶಾಂತಪ್ಪನವರು ನಮ್ಮ ಪರಂಪರೆಯ ಅರಿವು ಮೂಡಿಸುವದು ನಮ್ಮೆಲ್ಲರ ಪ್ರಥಮ ಕರ್ತವ್ಯ. ಆ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಉಪಯುಕ್ತವೆಂದರು. ಪ್ರಾರ್ಥನೆಯನ್ನು ಕು.ಮಲ್ಲಮ್ಮ, ಅತಿಥಿ ಪರಿಚಯವನ್ನು ಪ್ರಾಧ್ಯಾಪಕ ಮಹೇಶ ಮಮದಾಪುರ, ಪ್ರಾಸ್ತಾವಿಕ ನುಡಿಯನ್ನು ಪರಂಪರಾಕೂಟದ ಸಂಚಾಲಕಿ ಪ್ರಾಧ್ಯಾಪಕಿ ಶುಭಾ, ಸ್ವಾಗತವನ್ನು ಉಪನ್ಯಾಸಕ ಶರಣಪ್ಪ, ವಂದನಾರ್ಪಣೆ ಉಪನ್ಯಾಸಕ ಗೋಣಿಬಸಪ್ಪ, ನಿರೂಪಣೆ ಉಪನ್ಯಾಸಕ ಜ್ಞಾನೇಶ ಪತ್ತಾರ ನಿರ್ವಹಿಸಿದರು.
Home
»
koppal district information
»
Koppal News
»
koppal organisations
» ಭಾರತೀಯ ಸಾಂಸ್ಕೃತಿಕ ಸಂಪತ್ತು : ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಚಿಂತನೆ ಉಪನ್ಯಾಸ
Subscribe to:
Post Comments (Atom)
0 comments:
Post a Comment