ರಾಜ್ಯ ಕಂಡ ದಕ್ಷ ಐ.ಎ.ಎಸ್ ಅಧಿಕಾರಿ ಡಿ.ಕೆ.ರವಿಯವರ ಅವರ ನಿಧನಕ್ಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ.
ಹೊರ ರಾಜ್ಯಗಳಲ್ಲಿ ಹಾಗೂ ರಾಜ್ಯದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಕಳೆದ ಒಂದೂವರೆ ವರ್ಷದಿಂದ ರಾಜ್ಯದ ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುವಲ್ಲಿ ಶ್ರಮಿಸಿದ್ದರು, ಮತ್ತು ಅವರು ಕೊಪ್ಪಳದ ಜಿಲ್ಲಾ ಪಂಚಾಯತ ಸಿ.ಇ.ಓ ಆಗಿದ್ದಾಗ ಜಿಲ್ಲೆಗೆ ಸಾಕಸ್ಟು ಒಳ್ಳೆಯ ಕೆಲಸ ಮಾಡಿದ್ದಾರೆ ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.
ಆದ್ದರಿಂದ ಕೊಪ್ಪಳ ಜಿಲ್ಲಾ ಪಂಚಾಯತ ಸಭಾಂಗಣಕ್ಕೆ ಡಿ.ಕೆ ರವಿ ಅವರ ಹೆಸರನ್ನು ಇಡಬೇಕೆಂದು ವಿಧ್ಯಾರ್ಥಿ ಪರಿಷತ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು.
ಈ ಸಂಧರ್ಭದಲ್ಲಿ ರವಿಚಂದ್ರ.ಎಸ್.ಮಾಲೀಪಾಟೀಲ, ದೀಪಕ.ಹಿರೆಮಠ, ಪ್ರಭುರಾಜ, ಭಾಗಣ್ಣ ಮತ್ತು ಇತರ ಕಾರ್ಯಕರ್ತರು ಇದ್ದರು.
0 comments:
Post a Comment