PLEASE LOGIN TO KANNADANET.COM FOR REGULAR NEWS-UPDATES

ಹೊಸಪೇಟೆ-ಪ್ರತಿಯೊಬ್ಬ ಮಹಿಳೆ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಿದಾಗ ಮಾತ್ರ ಸಮಾನತೆ ಸಾಧ್ಯ. ಸಮಾನತೆಗಾಗಿ ಹೋರಾಟದ ಬದಲು ಅವಕಾಶಗಳನ್ನು ಉಪಯೋಗಿಸಿಕೊಂಡು ಸಾಧನೆ ಮಾಡಬೇಕು ಎಂದು ನಗರಸಭೆಯ ಅಧ್ಯಕ್ಷೆ ಕಣ್ಣಿ ಉಮಾದೇವಿ ಹೇಳಿದರು. 
ವಿಕಾಸ ಸೇವಾ ಸಂಸ್ಥೆ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳಲ್ಲಿ ವಿಜೇಯಿತ ಮಹಿಳೆಯರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಸರ್ಕಾರ ಅನೇಕ ಯೋಜನೆಗಳ ಮೂಲಕ ಮಹಿಳೆಯರು ಹಾಗೂ ಆರ್ಥಿಕ ದುಬರ್ಲರಿಗೆ ಅವಕಾಶಗಳನ್ನು ನೀಡಿದೆ ಅವುಗಳನ್ನು ಉಪಯೋಗಿಸಿಕೊಂಡು ಸ್ವಾವಲಂಭನೆ ಸಾಧಿಸಬೇಕು, ಈ ರೀತಿಯ ಮಹಿಳಾ ಸ್ವಾವಲಂಭನೆಗೆ ಬೇಕಾಗುವ ಎಲ್ಲ ನೆರವನ್ನು ತಮ್ಮ ಅವಧಿಯಲ್ಲಿ ನೀಡುವುದಾಗಿಯು ಹೇಳಿದರು. 
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಡಾ.ತುಳಸಿ ಪ್ರಿಯಾ ಮಾತನಾಡಿ, ಬಾಳರಥದಲ್ಲಿ ಮಹಿಳೆ ಪುರುಷರು ಸಮಾನರು, ತಮ್ಮ ಮನೆಯ ಸಮಸ್ಯೆಗಳ ನಡುವೆಯು ಪ್ರತಿಯೊಬ್ಬ ಮಹಿಳೆ ತನ್ನ ಸುಂದರ ಭವಿಷ್ಯಕ್ಕಾಗಿ ಕನಸು ಕಾಣವ ಹಾಗೂ ಅದನ್ನು ಸಾಧಿಸಲು ನಿರಂತರ ಪ್ರಯತ್ನಗಳನ್ನು ಮಾಡಬೇಕು ಪ್ರಾಮಾಣಿಕ ಪ್ರಯತ್ನ ಯಶಸ್ಸು ಸಾಧಿಸಲು ಸಾಧ್ಯವಾಗಲಿದೆ ಎಂದರು.
ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಹೊಲಿಗೆ ತರಬೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ ಪ್ರಮಾಣ ಪತ್ರ ನೀಡಲಾಯಿತು ಸಂಸ್ಥೆಯಿಂದ ಡಾ.ತುಳಸಿಪ್ರೀಯಾ ಮತ್ತು ನಗರಸಭಾಧ್ಯಕ್ಷೆ ಕಣ್ಣಿ ಉಮಾದೇವಿಯವರನ್ನು ಸನ್ಮಾನಿಸಲಾಯಿತು. 
ಸಂಸ್ಥೆಯ ಅಧ್ಯಕ್ಷ ಅನಂತ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಹೊಲಿಕೆ ಕೇಂದ್ರ ಶಿಕ್ಷಕಿ ಸಾವಿತ್ರಿ ವೇದಿಕೆಯಲ್ಲಿದ್ದರು, ಜಿ.ರೇಖಾ ಸ್ವಾಗತಿಸಿದ, ಸಿ.ಶಿಲ್ಪಾ ವಂದಿಸಿದರು ಪುಷ್ಪಾಂಜಲಿ ಕಾರ್ಯಕ್ರಮ ನಿರೂಪಿಸಿದ್ದರು. 

Advertisement

0 comments:

Post a Comment

 
Top