ಕೊಪ್ಪಳ: ಆತ್ಮೀಯ ಆದಿಜಾಂಬವ ಬಂದುಗಳೆ ದಿ ೨೮ ರಂದು ಆದಿ ಜಾಂಬವ ಜನಾಂಗದ ಇತಿಹಾಸದಲ್ಲೆ ಮೊಟ್ಟ ಮೊದಲು ಆದಿಜಾಂಬವ ಜಾಗೃತ ಪತ್ರಿಕೆ ಮತ್ತು ಅದರ ಸಂಪಾದಕರು ಹಾಗೂ ಕರ್ನಾಟಕ ರಾಜ್ಯ ಆದಿಜಾಂಬವ ವಕೀಲರ ಪರಿಷತ್ತಿನ ನೂತನ ರಾಜ್ಯಾಧ್ಯಕ್ಷರಾದ ಎಮ್ ಗಂಗಾಧರ್ ಅವರು ಕೊಪ್ಪಳ ಜಿಲ್ಲೆಗೆ ಬೇಟಿ ಕೊಟ್ಟಿದ್ದು, ಈ ಸಮಯದಲ್ಲಿ ಕೊಪ್ಪಳ ಜಿಲ್ಲೆಯ ವಕೀಲರುಗಳು, ಆದಿಜಾಂಬವ ಜಾಗೃತ ಪತ್ರಿಕೆ ಬಳಗದವರು, ಜಾಂಬವ ಚಿಂತಕರು ಹಾಗು ಹಿರಿಯರು ಸೇರಿ ಈ ಕೆಳಗಿನ ವಿಷಯಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು.
೧] ಕೊಪ್ಪಳ ಜಿಲ್ಲೆಯಲ್ಲಿ ಆದಿಜಾಂಬವ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳುವ ಬಗ್ಗೆ,
೨] ಕೊಪ್ಪಳದಲ್ಲಿ ಆದಿಜಾಂಬವ ಜಾಗೃತಿ ಪತ್ರಿಕೆಯ ಕಚೇರಿ ತೆರೆಯುವ ಬಗ್ಗೆ
೩] ಪರಿಷತ್ತಿನ ಉಳಿದ ರಾಜ್ಯ ಸಮಿತಿಯ ಪದಾದಿಕಾರಿಗಳು ಮತ್ತು ಜಿಲ್ಲಾ ಸಮಿತಿಯ ಪದಾದಿಕಾರಿಗಳ ಆಯ್ಕೆ ಮತ್ತು ಇತರ ವಿಷಯಗಳ ಕುರಿತು.
ಈ ಮೇಲ್ಕಂಡ ಎಲ್ಲಾ ವಿಷಯಗಳನ್ನು ಮತ್ತೊಮ್ಮೆ ಸಮಗ್ರವಾಗಿ ಚರ್ಚಿಸಲು ದಿನಾಂಕ ೧೪-೦೨-೨೦೧೫ ರಂದು ಶನಿವಾರ ಬೆಳಗ್ಗೆ ೧೦:೩೦ ಕ್ಕೆ ಕೊಪ್ಪಳ ನಗರದಲ್ಲಿರುವ ಹೋಟೆಲ್ ಪಾರ್ಥಾ ಇಂಟರನ್ಯಾಷನಲ್ ಸಭಾಂಗಣದಲ್ಲಿ ರಾಜ್ಯ ಮಟ್ಟದ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ. ಈ ಸಭೆಗೆ ೩೦ ಜಿಲ್ಲೆಗಳ ಹಿರಿಯ, ಕಿರಿಯ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ವಕೀಲರು, ಜಾಂಬವ ಚಿಂತಕರು ಭಾಗವಹಿಸುತ್ತಿದ್ದಾರೆ.
0 comments:
Post a Comment