PLEASE LOGIN TO KANNADANET.COM FOR REGULAR NEWS-UPDATES

 ಜಿಲ್ಲೆಯಲ್ಲಿರುವ ಸರಕಾರಿ ಶಾಲಾ ಕಾಲೇಜು ಹಾಸ್ಟೆಲ್ ಹಾಗೂ ವಿಶ್ವವಿದ್ಯಾಲಯಗಳ ಮೂಲಭೂತ ಸೌಲಭ್ಯಕ್ಕಾಗಿ ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರ ಭತ್ಯೆ ೩೫೦೦ ರೂಪಾಯಿಗಳ ಹೆಚ್ಚಳಕ್ಕಾಗಿ ಹಾಗೂ ಎಸ್ಸಿ/ಎಸ್ಟಿ ಒಬಿಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆಗೆ ಒತ್ತಾಯಿಸಿ ರಾಜ್ಯ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಒಬಿಸಿ ವಿದ್ಯಾರ್ಥಿಗಳಿಂದ ಹೆಚ್ಚುವರಿಯಾಗಿ ತೆಗೆದುಕೊಂಡಿರುವ ಭೋಧನಾ ಶುಲ್ಕ ಮತ್ತು ಪರೀಕ್ಷಾ ಶುಲ್ಕವನ್ನು ವಾಪಾಸು ನೀಡಿ ಶುಲ್ಕ ವಿನಾಯ್ತಿ ಮುಂದುವರೆಸಲು ಒತ್ತಾಯಿಸಿ ಆರ್.ಟಿ.ಇ ಕಾಯ್ದೆ ಸಮರ್ಪಕ ಜಾರಿಗೆ ಸೇರಿದಂತೆ ರಾಜ್ಯ ಬಜೆಟ್‌ನಲ್ಲಿ ಶೇಕಡಾ ೩೦% ಅನುದಾನ ಮೀಸಲಿಡುವ ಸಲುವಾಗಿ ೧೯೮೩ ಶಿಕ್ಷಣ ಹಕ್ಕು ಕಾಯ್ದೆ ಹಾಗೂ ಆರ್.ಟಿ.ಇ ನಿಯಮ ಉಲ್ಲಂಘನೆ ಮಾಡಿರುವ ಜಿಲ್ಲೆಯ ಕೊಪ್ಪಳ ನಗರದ ಟ್ರಿನಿಟಿ ಪಬ್ಲಿಕ್ ಶಾಲೆಯು ಮಾನ್ಯತೆ ರದ್ದತಿಗೆ ಒತ್ತಾಯಿಸಿ ಸೇರಿದಂತೆ ದಿನಾಂಕ ೦೪/೦೨/೨೦೧೫ ರಂದು ೧೩ ಬೇಡಿಕೆಗಳು ಸಂಬಂದಿಸಿದಂತೆ ಜಿಲ್ಲಾಧಿಕಾರಿಗಳ ಭವನದ ಎದುರು ಬೆಳಿಗ್ಗೆ ೧೦:೩೦ ಕ್ಕೆ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದ್ದು ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಳ್ಳಲು   ಕೋರಲಾಗಿದೆ. 

Advertisement

0 comments:

Post a Comment

 
Top