ದಲಿತಳೆಂಬ ಕಾರಣಕ್ಕಾಗಿ ನನ್ನ ಸ್ವಂತ ಅಕ್ಕನಿಗೆ ಮನೆ ಸಿಕ್ಕಿರಲಿಲ್ಲ..! ಹೀಗೆಂದವರು ಇನ್ನಾರೂ ಅಲ್ಲ. ರಾಜ್ಯದ ಸಮಾಜ ಕಲ್ಯಾಣ ಸಚಿವ ಆಂಜನೇಯ.
ರವಿವಾರ ನಗರದ ಅಂಬೇಡ್ಕರ್ ಭವನದಲ್ಲಿ ಅಖಿಲ ಕರ್ನಾಟಕ ಮೋಚಿಗಾರ ಮಹಾಸಭಾ ಆಯೋಜಿಸಿದ್ದ ಗುರುದಾಸರ ಜೀವನ ಚರಿತ್ರೆ ಪುಸ್ತಕ ಹಾಗೂ ಭಾವಚಿತ್ರ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿದ ಬಳಿಕ ಅವರು ಈ ನೋವನ್ನು ಹಂಚಿಕೊಂಡರು. ಸಭಿಕರೊಬ್ಬರು ಮೋಚಿಗಾರ ಸಮುದಾಯಕ್ಕೆ ನಗರದಲ್ಲಿ ಬಾಡಿಗೆಗೆ ಯಾರೂ ಮನೆ ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡಾಗ ಈ ಘಟನೆಯನ್ನು ಆಂಜನೇಯ ಹಂಚಿಕೊಂಡರು.
‘‘ನಿಮ್ಮ ನಿಜವಾದ ಜಾತಿ ಹೇಳಿ ಏಕೆ ಕೊರಗುತ್ತೀರಾ? ಮುಂದುವರಿದ ಬ್ರಾಹ್ಮಣ ಅಥವಾ ಮತ್ಯಾವುದೋ ಜಾತಿ ಹೆಸರು ಹೇಳಿ ಮನೆ ಪಡೆದುಕೊಳ್ಳಿ’’ ಎಂದು ಆಂಜನೇಯ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ದಲಿತರು ಅನುಭವಿಸುತ್ತಿರುವ ಅವ ಮಾನಗಳ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿ, ಇದರ ವಿರುದ್ಧ ಎಲ್ಲರೂ ಒಂದಾಗಿ ಹೋರಾಡಬೇಕು. ಆತ್ಮವಿಶ್ವಾಸದಿಂದ ಸಮಾಜದಲ್ಲಿ ಮುಂದೆ ಬರಬೇಕು ಎಂದು ಕರೆ ಕೊಟ್ಟರು. ಸಭಿಕರೊಬ್ಬರು ನಮ್ಮ ಸಮುದಾಯದವರಿಗೆ ನಗರದಲ್ಲಿ ಬಾಡಿಗೆಗೆ ಮನೆ ಯಾರೂ ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಿನ್ನದೇನು ಮಹಾ! ಸ್ವಂತ ನನ್ನ ಅಕ್ಕನಿಗೆ ಮನೆ ಸಿಕ್ಕಿರಲಿಲ್ಲ. ನಿಜವಾದ ಜಾತಿಯನ್ನು ಹೇಳಿ ಕೊರಗುವುದೇಕೆ? ಬ್ರಾಹ್ಮಣ ಅಥವಾ ಇನ್ಯಾವುದೋ ಜಾತಿ ಹೆಸರು ಹೇಳಿ ಮನೆ ಪಡೆದುಕೊಳ್ಳಿ ಎಂದು ಉಚಿತ ಸಲಹೆ ನೀಡಿದರು.

0 comments:
Post a Comment