PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ.ಫೆ.೧೮ ತಾಲುಕಿನ ಹಟ್ಟಿ ಗ್ರಾಮದಲ್ಲಿ ಶಿವರಾತ್ರಿ ಪ್ರಯುಕ್ತ ಮಂಗಳವಾರ ರಾತ್ರಿ ಏರ್ಪಡಿಸಿದ ಪೌರಾಣಿಕ ರಕ್ತ ರಾತ್ರಿ ನಾಟಕಕ್ಕೆ ಮಾಜಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಬಸವರಾಜ ಹಿಟ್ನಾಳ, ಪಕ್ಕದ ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಮತ್ತು ಸಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸಯ್ಯದ್ ರವರು ಜಂಟಿಯಾಗಿ ಚಾಲನೆ ನೀಡಿದರು.
ನಾಟಕದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿರವರು ನೆರವೆರಿಸಿ ಮಾತನಾಡಿ ಇಂದಿನ ಆಧೊನಿಕ ಯುಗದಲ್ಲಿ ರಂಗಭೂಮಿಕಲೆ ನಶಿಸಿ ಹೊಗುತ್ತಿದೆ ಇದನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸುವ ಕೆಲಸ ನಡೆಯಬೇಕೆಂದರು, ಮಾಜಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಬಸವರಾಜ ಹಿಟ್ನಾಳರವರು ರಿಬ್ಬನ್‌ಕಟ್ ಮಾಡುವುದರಮೂಲಕ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿ ನಮ್ಮ ಹಿಂದಿನ ಪರಂಪರೆ ಇತಿಹಾಸವನ್ನು ಇಂದಿನ ಯುವಪೀಳಿಗೆಗೆ ಪರಿಚೆಯೆಸುವ ಕೆಲಸ ಕಲಾವಿದರು ರಂಗಭೂಮಿ ಸಜ್ಜಿಕೆಯಲ್ಲಿ ತಮ್ಮ ಕಲೆ ಪ್ರದರ್ಶಿಸಬೇಕು ಇಂತಹ ಕಲೆಗಳಿಗೆ ಪ್ರತಿಯೊಬ್ಬರ ಪ್ರೋತ್ಸಾಹ ಅಗತ್ಯವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಒಹಿಸಿದ್ದ ಸಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸಯ್ಯದ್ ರವರು ಮಾತನಾಡಿ ಜೀವನವೆ ಒಂದು ನಾಟಕ ರಂಗ ಇದ್ದಂತೆ ಪ್ತಿಯೊಬ್ಬ ಮನುಷ್ಯ ಪಾತ್ರಧಾರಿಯಾದರೆ ಆ ಪರಮಾತ್ಮ ಸೂತ್ರಧಾರಿ ಪ್ರತಿಯೊಬ್ಬ ಮನುಷ್ಯ ಒಳ್ಳೆಯ ಕೆಲಸ ಮಾಡಬೇಕೆಂಬ ಸಂದೇಶ ಈ ರಂಗಭೂಮಿಯಿಂದ ಸಿಗುತ್ತದೆ, ಇದರಲ್ಲಿ ಬರುವ ಒಳ್ಳೆಯ ಸನ್ನಿವೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಕೆ.ಎಂ.ಸಯ್ಯದ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ತೋಟಪ್ಪಸಿಂಗ್ಲಿ, ಭರಮಪ್ಪ ಹಟ್ಟಿ, ಕೇಶವರೆಡ್ಡಿ, ಜಡಿಯಪ್ಪ ಬಂಗಾಳಿ, ಪಾಂಡಪ್ಪನಗರ, ದೇವಪ್ಪ ಹಳ್ಳಿ, ಯಲ್ಲಪ್ಪಮುಕ್ಕಣ್ಣವರ, ಯುವ ಸಾಹಿತಿ ಮೆಹಬೂಬ ಮುಲ್ಲಾ ಸೇರಿದಂತೆ ತಾ.ಪಂ. ಹಾಗೂ ಗ್ರಾ.ಪಂ. ಜನಪ್ರತಿನಿದಿಗಳು ಕಾರ್ಯಕರ್ತರು ಅಭಿಮಾನಿಗಳು ಮತ್ತು ವಿವಿಧ ಸಂಘಟೆಗಳ ಪದಾಧಿಕಾರಿಗಳು ಪಾಲಗೊಂಡಿದ್ದರು, ನಂತರ ರಕ್ತರಾತ್ರಿ ಎಂಬ ಪೌರಾಣಿಕ ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡು ಜನಮನ ರಂಜಿಸಿತು.
ಫೋಟೋ(ಫೇ೧೮ಕೆ.ಪಿ.ಎಲ್೦೧)

Advertisement

0 comments:

Post a Comment

 
Top