PLEASE LOGIN TO KANNADANET.COM FOR REGULAR NEWS-UPDATES


ಯಲಬುರ್ಗಾ: ಶತ ಶತಮಾನಗಳ ಐತಿಹಾಸಿಕ ಹಿನ್ನಲೆಯಲ್ಲಿರುವ ಕನ್ನಡವನ್ನು ಮರೆತು ಇಂಗ್ಲಿಷ್ ಮಾಧ್ಯಮಕ್ಕೆ ಯಾರು ಒಳಗಾಗಿದ್ದಾರೋ ಅಂತವರು ಕನ್ನಡ ಮಾತೆಯ ಮಕ್ಕಳಲ್ಲ ಎಂದು ಶ್ರೀ ವಿಜಯ ಮಹಾಂತ ಸ್ವಾಮಿಜಿಗಳು ನುಡಿದರು.

 ತಾಲೂಕಿನ ಕುದರಿಮೋತಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ರವಿವಾರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ೧೦ನೇ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಇಂದಿನ ಪ್ರಸಕ್ತ ದಿನಗಳಲ್ಲಿ ಜನಪ್ರತಿನಿಧಿಗಳು ಬರಿ ಭಾಷಣದಲ್ಲಿ ಕನ್ನಡದ ಕುರಿತು ಹೊಗಳಿ ಮುಕ್ತಾಯ ಗೊಳಿಸುವ ಬದಲು ತಮ್ಮ ಮಕ್ಕಳನ್ನು  ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಮುಂದಾಗಬೇಕು. ಹಿಂದೂ ಸಂಸ್ಕೃತಿಯ ಹಿನ್ನಲೆಯಲ್ಲಿ ಕನ್ನಡದ ಅನೇಕ ತರಹದ ಸಾಹಿತ್ಯಗಳು ಇಂದಿಗೂ ದೊರೆಯದೆ ಮರೆಮಾಚಿ ಹೋಗಿವೆ ಅವುಗಳನ್ನು ಸಂಶೋಧನೆ ಮಾಡಬೇಕು ಎಂದರು
         ತಾಲೂಕ ಕಸಾಪ ನಿಕಟಪೂರ್ವ ಅದ್ಯಕ್ಷ ಮುನಿಯಪ್ಪ ಹುಬ್ಬಳ್ಳಿ ಸಮ್ಮೇಳನ ಅದ್ಯಕ್ಷ ಈರಪ್ಪ ಕಂಬಳಿ ಅವರಿಗೆ ಕನ್ನಡ ಧ್ವಜ ಹಸ್ತಾಂತರ ಮಾಡಿ ಮಾತನಾಡಿ ಕುದರಿಮೋತಿ ಗ್ರಾಮವ್ಲು ಪ್ರಪ್ರಥಮವಾಗಿ ರೈತ ಪರಿಷತ್‌ನಲ್ಲಿ ಸೆರ್ಪಡೆಯಾಗಿತ್ತು ಅಂದಿನಿಂದ ಇಂದಿನವರೆಗೂ ಜಿಲ್ಲೆಯ ಉತ್ತಮ ಗ್ರಾಮವಾಗಿ ಮಾರ್ಪಟ್ಟಿದೆ ಎಂದರು. ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ ಸಮ್ಮೇಳನಾದ್ಯಕ್ಷರ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ ಈರಪ್ಪ ಕಂಬಳಿ ಅನನ್ಯ ಕವನ ಸಾಧನೆ ಮಾಡಿದ ವ್ಯಕ್ತಿಯಾಗಿದ್ದು ಇಂತಹ ಸದ್ಭಾವನೆಯುಳ್ಳವರಿಗೆ ಸಮ್ಮೇಳನ ಅದ್ಯಕ್ಷರ ಭಾಗ್ಯ ದೊರೆತಿದೆ ಎಂದ ಅವರು ಸರ್ಕಾರ ಈಗಿರುವ ಕನ್ನಡ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದ್ದರು ಶಿಕ್ಷಕರ ನೇಮಕದ ಕುರಿತು ಕ್ರಮ ತೆಗೆದುಕೊಳ್ಳದೆ ಇರುವದು ಶೋಚನೀಯ ಎಂದರು.
    ಕಸಾಪ ಜಿಲ್ಲಾ ಅದ್ಯಕ್ಷ ವೀರಣ್ಣ ನಿಂಗೋಜಿ ಮಾತನಾಡಿ ಕರ್ನಾಟಕದ ಆರುಕೋಟಿ ಕನ್ನಡಿಗರು ಕನ್ನಡ ಮಾಧ್ಯಮ ಸಂಪೂರ್ಣ ಜಾರಿಯ ಸಲುವಾಗಿ ನ್ಯಾಯಯುತ ಹೋರಾಟ ಮಾಡುವದು  ಅತ್ಯಗತ್ಯವಾಗಿದೆ. ಕನ್ನಡಕ್ಕೆ ತನ್ನದೆ ಆದ ಶಕ್ತಿಯುಂಟು ಆದ್ದರಿಂದಲೇ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದು ರಾಷ್ಟ್ರದಲ್ಲಿ ಖ್ಯಾತಿ ಪಡೆದ ರಾಷ್ಟ್ರಕವಿ ಕುವೆಂಪು ಸೇರಿದಂತೆ ಇನ್ನಿತರ ಮಹಾನ್ ವ್ಯಕ್ತಿಗಳು ವಿದ್ವಾಂಸರಾಗಿ, ತತ್ವಜ್ಞಾನಿಗಳಾಗಿ, ಡಾಕ್ಟರೇಟ ಪದವಿ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದಂತವರು ಮಾತ್ರ . ರಾಜ್ಯ ವ್ಯಾಪ್ತಿಯ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಜಿಲ್ಲೆಯ ಎಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನಗಳಲ್ಲಿ ಕನ್ನಡದ ಉಳಿವಿಗಾಗಿ ಕನ್ನಡದಲ್ಲಿಯೇ ಶಿಕ್ಷಣ ಮಾಧ್ಯಮ ಜಾರಿ ಮಾಡಿ ಸಂಪೂರ್ಣ ಕನ್ನಡಕ್ಕೆ ಆದ್ಯತೆ ನಿಡುವಂತೆ ನಿರ್ಣಯ ತೆಗೆದುಕೊಳ್ಳಲಾಗಿದ್ದು ಸರ್ಕಾರ ಗಮನಹರಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದರು. 
          ಕಾರ್ಯಕ್ರಮದಲ್ಲಿ ತಾಪಂ ಅದ್ಯಕ್ಷೆ ಮಹಾದೇವಿ ಕಂಬಳಿ, ಗ್ರಾಪಂ ಅದ್ಯಕ್ಷೆ ದಾವಲಬಿ ನವಲಿ, ಕೆಆರ್ ಕುಲಕರ್ಣಿ, ಕೊಟ್ರಪ್ಪ ತೋಟದ, ಮೌಲಾಹುಸೇನ ಬುಲ್ಡಿಯಾರ, ಈಶ್ವರ ಅಟಮಾಳಗಿ, ಶಿವಣ್ಣ ರಾಯರೆಡ್ಡಿ, ಹನಮಂತ ಬಾಂಡಗೆ, ಸ.ಶರಣಪ್ಪ ಪಾಟೀಲ ಸೇರಿದಂತೆ ಮತ್ತಿತರರು ಇದ್ದರು. ತಾಲೂಕ ಕಸಾಪ ಅದ್ಯಕ್ಷ ಶಿವಮೂರ್ತಿ ಇಟಗಿ ಸ್ವಾಗತಿಸಿದರು ಶರಣಯ್ಯ ಕರಡಿಮಠ ವಂದಿಸಿದರು.

     

Advertisement

0 comments:

Post a Comment

 
Top