ಅಕ್ಷರ ಜಾತ್ರೆಯಲ್ಲಿ ಸಮ್ಮೇಳನಾದ್ಯಕ್ಷರ ನುಡಿ
ಯಲಬುರ್ಗಾ: ಡಾ.ನಂಜುಂಡಪ್ಪ ವರದಿಯಂತೆ ಯಲಬುರ್ಗಾ ತಾಲೂಕು ಹಿಂದುಳಿದ ಪ್ರದೇಶವಾಗಿದೆ ಎಂದು ಸಮ್ಮೇಳನಾಧ್ಯಕ್ಷ ಈರಪ್ಪ ಎಂ.ಕಂಬಳಿ ವಿಷಾದಿಸಿದರು.
ತಾಲೂಕಿನ ಕುದುರಿಮೋತಿಯಲ್ಲಿ ನಡೆದ ಹತ್ತನೆ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರ ನುಡಿದ ಅವರು ಸ್ವಾತಂತ್ರ್ಯ ದೊರಕಿ ಆರುವರೆ ದಶಕ ಕಳೆದರು ಈವೆರಗೂ ತಾಲೂಕು ಹಿಂದುಳಿದ ಹಣೆ ಪಟ್ಟಿಯನ್ನು ಕಟ್ಟಿಕೊಂಡಿದೆ. ಹೈದ್ರಬಾದ್-ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲ್‌ರು ಹೈ.ಕದ ಹಿತಾಸಕ್ತಿಗಾಗಿ ತಮ್ಮ ಸಚಿವ ಸ್ಥಾನವನ್ನೆ ತೇಜಿಸಿದವರು. ಅವರ ನೇತೃತ್ವದ ಹೋರಾಟಕ್ಕೆ ಮಣಿದ ಸರ್ಕಾರ ಸಂವಿಧಾನ ೩೭೧(ಜೆ) ಕಲಂ ಜಾರಿ ತಂದು, ನಮ್ಮ ಪ್ರದೇಶದ ಜನರ ಹಿತಾಸಕ್ತಿಗೆ ಮುಂದಾಗಿರುವುದು ಸಂತೋಷ ಸಂಗತಿ. ಆದರೆ, ಶೀಘ್ರದಲ್ಲಿಯೇ ಉದ್ಯೋಗವಕಾಶಕ್ಕೆ ಒತ್ತು ನೀಡಬೇಕಾಗಿದೆ ಎಂದರು.
ತಾಲೂಕು ಎರಿ, ಮಸಾರಿ ಭೂಮಿ ಹೊಂದಿದ್ದು, ಮಳೆಯಾಶ್ರಿತ ಬೆಳೆ ಬೆಳೆಯುವಂತಾಗಿದೆ. ಕೆಲ ರೈತರು ಕೊಳವೆ ಬಾವಿ ಕೊರೆಯಿಸಿ, ತೋಡಗಳನ್ನು ಮಾಡಲು ಮುಂದಾಗಿದ್ದಾರೆ. ಅಂತರ್ಜಲ ಮಟ್ಟದ ಕುಸಿತದ ಪರಿಣಾಮದಿಂದ ರೈತನನ್ನು ಚಿಂತೆಗಿಡು ಮಾಡಿ, ಕೃಷಿಗೆ ಗುಡ್ ಬೈ ಹೇಳುವ ದುಸ್ಥಿತಿ ಬಂದೊದಗಿ, ದುಡಿಯುವ ಶ್ರಮಿಕ ವರ್ಗದ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ. ತಾಲೂಕಿನಲ್ಲಿ ಹರಿಯುವ ಹಿರೇಹಳ್ಳದಿಂದ ಕೆರೆಗಳ ಕಾಯಕಲ್ಪವಾಗಬೇಕು. ಕೃಷ್ಣ ಬಿಸ್ಕೀಂನಿಂದ ತಾಲೂಕಿಗೆ ಶಾಸ್ವತ ನೀರಾವರಿ ಯೋಜನೆ ಕಲ್ಪಿಸಲು ಸರ್ಕಾರ ಮುಂದೆ ಬರಬೇಕಾಗಿದೆ.
ಹೈದ್ರಾಬಾದ್ ವಿಮೋಚನಾಗಾಗಿ ಹೋರಾಟ ನಡೆದ ಬಳಿಕ ಕೊಪ್ಪಳ ಜಿಲ್ಲೆ ಸ್ವಾತಂತ್ರ್ಯ ಭಾರತದಲ್ಲಿ ವಿಲಿನಗೊಂಡಿತು. ಆದಾದ ಬಳಿಕ ೧೨-೧೨-೧೯೪೮ರಂದು ಕುದುರಿಮೋತಿ ಗ್ರಾಮದಲ್ಲಿ ಪ್ರಪ್ರಥಮ ರೈತ ಪರಿಷತ್ತು ಸಮಾವೇಶಗೊಂಡಿದ್ದು, ಅವಿಸ್ಮರಣೀಯ ಎಂದು ಬಣ್ಣಿಸಿದರು.
ನ್ಯಾಯಾಂಗ ಕ್ಷೇತ್ರಕ್ಕೆ ತಾಲೂಕಿನ ಕೊಡುಗೆ ಅಪಾರ.. ನಿವೃತ್ ನ್ಯಾಯಾಮೂರ್ತಿ ಕೆ.ಎ.ಸ್ವಾಮೀ ತಾಲೂಕಿನ ಕುದುರಿಕೋಟಗಿಯರವಾಗಿದ್ದಾರೆ. ಅಲ್ಲದೆ ೧೪ಜನರು ನ್ಯಾಯಾಮೂರ್ತಿಗಳನ್ನು ಹೆಮ್ಮೆಯ ವಿಷಯವಾಗಿದೆ.
ಬರಹ ಪರಿಪೂರ್ಣ ವ್ಯಕ್ತಿಯನ್ನಾಗಿ ಮಾಡುತ್ತದೆ. ಬರಹಗಾರರ ಮೇಲೆ ವರ್ತಮಾನದ ತಲ್ಲಣಗಳಿಗೆ ಸ್ಪಂಧಿಸುವ ಬಹು ದೊಡ್ಡ ಜವಾಬ್ದಾರಿಯಿದೆ. ಉದಾರೀಕರಣ-ಖಾಸಗೀಕರಣ-ಜಾಗತೀಕರಣ(ಎಲ್‌ಪಿಜಿ)ಗಳಿಂದಾಗಿ ಕಾರ್ಪೋರೇಟ್‌ನಿಂದ ಸಂಸ್ಕೃತಿಕ ದೇಶವನ್ನು ಆವರಿಸಿಕೊಳ್ಳುತ್ತದೆ. ಪರಿಣಾಮವಾಗಿ ಹೊಸ ವಸಾಹತುಶಾಹಿ ನೀತಿಗಯಿಂದಾಗಿ ನಮ್ಮ ಯುವ ಜನಾಂಗ ಹೊಸ ಸವಾಲು/ಸಮಸ್ಯೆಗಳನ್ನು ಎದುರಿಸಬೇಕಾಗದ ಕಾಲ ಬಂದೊದಿಗೆ. ಮುಂದೊದಿನ ಅನ್ಯ ದೇಶದವರು ನಮ್ಮ ಮೇಲೆ ದಾಳಿ ಮಾಡುವ ಬದಲು ನಿರುದ್ಯೋಗೀ ಯುವಕ ಪಡೆಯೇ ದೇಶದ ಅರಾಜಕತೆಗೆ ಕಾರಣವಾಗುವು ಸಾಧ್ಯತೆ ದೂರವಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

0 comments:
Post a Comment