PLEASE LOGIN TO KANNADANET.COM FOR REGULAR NEWS-UPDATES

ಬೆಂಗಳೂರು,   ಹೈದರಾಬಾದ್-ಕರ್ನಾಟಕ ಮೀಸಲಾತಿ ಕೋರಿ ಅರ್ಜಿ ಸಲ್ಲಿಸುವ ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ಸಲ್ಲಿಸಬೇಕಾಗಿರುವ ಪ್ರಮಾಣ ಪತ್ರದ ನಮೂನೆ ಕುರಿತು ಕರ್ನಾಟಕ ಲೋಕಸೇವಾ ಆಯೋಗವು ಈ ಕೆಳಕಂಡಂತೆ ಸ್ವಷ್ಟೀಕರಣ ನೀಡಿದೆ.
    ಗೆಜೆಟೆಡ್ ಪ್ರೊಬೆಷನರ್ಸ್ 2014 ನೇ ಸಾಲಿನ ನೇಮಕಾತಿಗಾಗಿ ಹೈದರಾಬಾದ್-ಕರ್ನಾಟಕ ಮೀಸಲಾತಿ ಕೋರಿ ಅರ್ಜಿ ಸಲ್ಲಿಸುತ್ತಿರುವ ಸರ್ಕಾರಿ ನೌಕರರು ದಿನಾಂಕ 29-1-2014 ರಲ್ಲಿ ಹೊರಡಿಸಲಾದ ಅಧಿಸೂಚನೆ -1 ಸಂಖ್ಯೆ ಡಿಪಿಎಆರ್ 43 ಹೆಚ್‍ಕೆ ಸಿ 2013 ರಲ್ಲಿನ ಅನುಬಂಧ-ಎ ನಲ್ಲಿ ಇರುವಂತೆ ತಮ್ಮ ಸೇವಾ ಪುಸ್ತಕದಲ್ಲಿ ದಿನಾಂಕ 1-1-2013 ಕ್ಕೆ ಮುಂಚಿನ ನಮೂದಿನಲ್ಲಿ ಅವರ ಸ್ವಂತ ಊರು ಅಥವಾ ಸ್ಥಳಕ್ಕೆ ಸಂಬಂಧಿಸಿದಂತೆ ಹೈದರಾಬಾದ್-ಕರ್ನಾಟಕ ಪ್ರದೇಶದ ಜಿಲ್ಲೆಗಳಾದ ಬೀದರ್, ಗುಲ್ಬರ್ಗಾ ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಕಂದಾಯ ಜಿಲ್ಲೆಯ ಅಡಿಯಲ್ಲಿ ಬರುವಂತಹ ಪ್ರದೇಶದ ನಮೂದು ಇದ್ದ ಪಕ್ಷದಲ್ಲಿ ಅಂತಹ ಪ್ರಕರಣಗಳಲ್ಲಿ ಸರ್ಕಾರಿ ನೌಕರರ ಸೇವಾ ಪುಸ್ತಕ ಹೊಂದಿರುವ ಕಛೇರಿ ಮುಖ್ಯಸ್ಥರಿಂದ ಮೇಲೆ ತಿಳಿಸಿದ ಅಧಿಸೂಚನೆ (1) ರಲ್ಲಿನ ನಿಯಮ 5 (2) ರಂತೆ ನೀಡಲಾದ ಅನುಬಂಧ-ಎ ನಲ್ಲಿ ಸ್ವ-ಗ್ರಾಮ ಪ್ರಮಾಣ ಪತ್ರವನ್ನು ಅಭ್ಯರ್ಥಿಗಳು ಪಡೆದುಕೊಳ್ಳತಕ್ಕದೆಂದು ಸರ್ಕಾರವು ದಿನಾಂಕ 11-2-2015 ರ ತನ್ನ ಪತ್ರದಲ್ಲಿ   ತಿಳಿಸಿದ್ದು, ಅದರಂತೆ ಅಭ್ಯರ್ಥಿಗಳು ಈ ನಮೂನೆಯಲ್ಲಿಯೇ ಪ್ರಮಾಣ ಪತ್ರ ಪಡೆದಿಟ್ಟುಕೊಳ್ಳುವಂತೆ ಆಯೋಗವು ಸೂಚಿಸಿದೆ.

Advertisement

0 comments:

Post a Comment

 
Top