PLEASE LOGIN TO KANNADANET.COM FOR REGULAR NEWS-UPDATES

 ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಡಿಎಸ್‌ಇಆರ್‌ಟಿ ಇವುಗಳ ಸಹಯೋಗದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಚಂದನ ವಾಹಿನಿಯಲ್ಲಿ ವಿಜ್ಞಾನ ಕ್ವಿಜ್ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ.
ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಯ್ದ ಮಕ್ಕಳು ಭಾಗವಹಿಸುತ್ತಿರುವ ಈ ವಿಶೇಷ ವಿಜ್ಞಾನ ಕಾರ್ಯಕ್ರಮವು ಫೆಬ್ರವರಿ ೨೭ರವರೆಗೆ ಚಂದನವಾಹಿನಿಯ ಥಟ್ ಅಂತ ಹೇಳಿ ಎಂಬ ಶೀರ್ಷಿಕೆಯಡಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ೯.೩೦ಕ್ಕೆ ಹಾಗೂ ಮರುದಿನ ಬೆಳಿಗ್ಗೆ ೧೧.೦೦ ಗಂಟೆಗೆ ಮರುಪ್ರಸಾರವಾಗಲಿದೆ.
ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಜ್ಞಾನ ಪಠ್ಯಕ್ರಮವನ್ನು ಆಧರಿಸಿದ ಪ್ರಯೋಗ ಪ್ರಾತ್ಯಕ್ಷಿಕೆಗಳೊಂದಿಗೆ ಹಲವಾರು ಕುತೂಹಲಭರಿತ ಸುತ್ತುಗಳನ್ನು ಒಳಗೊಂಡಿರುವ ಈ ಕಾರ್ಯಕ್ರಮವು ಉಪಯುಕ್ತವಾಗಿದ್ದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ವೀಕ್ಷಣೆ ಮಾಡಿ ಪ್ರಯೋಜನ ಪಡೆಯಬೇಕೆಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಪ್ರಕಟಣೆಯಲ್ಲಿ ತಿಳಿಸಿದೆ.
ಕಾರ್ಯಕ್ರಮ ಕುರಿತ ತಮ್ಮ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ಗೌರವ ಕಾರ್ಯದರ್ಶಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಭವನ, ನಂ ೨೪/೨, ೨೪/೩. ೨೧ನೇ ಮುಖ್ಯ ರಸ್ತೆ ಬನಶಂಕರಿ ಎರಡನೇ ಹಂತ ಬೆಂಗಳೂರು-೭೦. ಇಲ್ಲವೆ ಞಡಿvಠಿ.iಟಿಜಿo@gmಚಿiಟ.ಛಿom  (೦೮೦-೨೬೭೧೮೯೩೯) ಗೆ ತಿಳಿಸಬಹುದೆಂದು ಪರಿಷತ್ತಿನ ಅಧ್ಯಕ್ಷ ಪ್ರೊ. ಎಸ್ ವಿ ಸಂಕನೂರ, ಗೌರವ ಕಾರ್ಯದರ್ಶಿ ಡಾ. ವಸುಂಧರಾ ಭೂಪತಿ, ಕಾರ್ಯಕ್ರಮದ ರಾಜ್ಯ ಸಂಯೋಜಕ  ಆರ್. ಎಸ್. ಪಾಟೀಲ ತಿಳಿಸಿದ್ದಾರೆ.

Advertisement

0 comments:

Post a Comment

 
Top