ಬೆಂಗಳೂರು, : ಮೂರರಿಂದ ಐದು ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಬಡ ರೈತರ ಜಮೀನನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಲಾಗುವುದಿಲ್ಲವೆಂದು ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಭರವಸೆ ನೀಡಿದರು.
ವಿಧಾನ ಪರಿಷತ್‍ನ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಅಲ್ಲಮಪ್ರಭು ಪಾಟೀಲ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯಾದ್ಯಂತ 2 ಲಕ್ಷ 91 ಸಾವಿರದಷ್ಟು ಎಕರೆಯಷ್ಟು ಸರ್ಕಾರಿ ಜಮೀನನ್ನು ಬಡ ರೈತರು ಒತ್ತುವರಿ ಮಾಡಿದ್ದಾರೆ. ಅದೇ ರೀತಿ 5 ರಿಂದ 10 ಎಕರೆಯಷ್ಟು ಒತ್ತುವರಿ ಮಾಡಿರುವುದು ಸುಮಾರು 43 ಸಾವಿರ ಎಕರೆ ಇದ್ದರೆ, 10 ಎಕರೆಗಿಂತÀ ಮೇಲ್ಪಟ್ಟು ಒತ್ತುವರಿ ಮಾಡಿರುವುದು 41 ಸಾವಿರ ಎಕರೆಯಷ್ಟಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.
ಸರ್ಕಾರಿ ಜಮೀನುಗಳ ಒತ್ತುವರಿಯನ್ನು ತೆರವುಗೊಳಿಸಲು ಸಾರ್ವಜನಿಕ ಹಿತಾಸಕ್ತಿ ಪ್ರಕರಣವು ಉಚ್ಫ ನ್ಯಾಯಾಲಯದಲ್ಲಿ ದಾಖಲಾಗಿದ್ದು, ಅದರಂತೆ ಒತ್ತುವರಿ ತೆರವುಗೊಳಿಸಲು ಕ್ರಿಯಾ ಯತೋಜನೆಯನ್ನು ತಯಾರಿಸಿ ಒತ್ತುವರಿ ತೆರವುಗೊಳಿಸಲಾಗುತ್ತಿದೆ. 3 ರಿಂದ 5 ಎಕರೆಯಷ್ಟು ಒತ್ತುವರಿಮಾಡಿಕೊಂಡಿರುವ ಬಡ ರೈತರನ್ನು ಬಿಟ್ಟು 5 ಕ್ಕಿಂತ ಹೆಚ್ಚು ಎಕರೆ ಭೂಮಿಯನ್ನು ಒತ್ತುವರಿ ಮಾಡಿರುವವರ ವಿರುದ್ಧ ಕರ್ನಾಟಕ ಭೂ ಕಂದಾಯ ಅಧಿನಿಯಮದಡಿ ನೋಟೀಸ್ ನೀಡಿ ಒತ್ತುವರಿ ತೆರವುಗೊಳಿಸಲು ಆದೇಶ ಹೊರಡಿಸಲಾಗಿದ್ದು ತೆರವುಗೊಳಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಹಾಗೆಯೇ ತೆರವುಗೊಸದ ಜಮೀನನ್ನು ಸರ್ಕಾರ ವಶಕ್ಕೆ ಪಡೆದುಕೊಂಡು ಸ್ಥಳೀಯ ಅಭಿವೃದ್ಧಿಗೆ ಅವಶ್ಯಕವಾಗಿರುವ ಇಲಾಖೆಗೆ ಒದಗಿಸಲಾಗುವುದೆಂದು ಸಚಿ ವರು ಹೇಳಿದರು.
0 comments:
Post a Comment