ಚಚಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟಿನ ಕಾರ್ಯದರ್ಶಿಗಳಾದ ಎಸ್.ಮಲ್ಲಿಕಾರ್ಜುನರವರು ವಿದ್ಯಾರ್ಥಿಗಳಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಿ ಎಂದರು.
ಸಮಾರಂಭದಲ್ಲಿ ಭಾಗವಹಿಸಿದ್ದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿಯ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಎಲ್.ಆರ್. ನಾಯಕರವರು ವಿದ್ಯಾರ್ಥಿ ಜೀವನದಲ್ಲಿ ಬರುವ ಅವಕಾಶಗಳ ಸದ್ಬಳಕೆ ನಿಮ್ಮ ವ್ಯಕ್ತಿತ್ವಕ್ಕೆ ಮೆರುಗು ತರಬಲ್ಲದು, ಇಂತಹ ಅವಕಾಶಗಳನ್ನು ವಿಶ್ವವಿದ್ಯಾಲಯ ಸೃಷ್ಟಿಸುತ್ತಿದ್ದು ಅಂತಹ ಅವಕಾಶಗಳನ್ನ ಬಳಸಿಕೊಳ್ಳಿ ಎಂದರು. ಸಮಾರಂಭದ ಇನ್ನೋರ್ವ ಮುಖ್ಯ ಅತಿಥಿಗಳಾದ ಕರ್ನಾಟಕ ಸಹಕಾರ ಮಹಾಮಂಡಳ, ಕೊಪ್ಪಳದ ಮುಖ್ಯಾಧಿಕಾರಿಗಳಾದ ಶರಣಬಸಪ್ಪ ಕಾಟ್ರಹಳ್ಳಿ ಸಹಕಾರ ಚಳುವಳಿಯ ಇತಿಹಾಸ ಸಾಧಿಸಿದ ಪ್ರಗತಿ ಹಾಗೂ ಅಗತ್ಯತೆ ಕುರಿತು ಮಾಹಿತಿ ನೀಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಎಸ್.ಎಲ್.ಮಾಲಿಪಾಟೀಲರವರು ಮಾತನಾಡಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಅವಕಾಶವಾಗುವಂತಹ ಸ್ಪರ್ಧೆ ನಡೆಸುತ್ತಿರುವದು ಸಂತಸದ ಸಂಗತಿ, ಇಂತಹ ಸ್ಪರ್ಧೆಯ ಆಯೋಜನೆಗೆ ನಮ್ಮ ಮಹಾವಿದ್ಯಾಲಯಕ್ಕೆ ಅವಕಾಶ ಕೊಟ್ಟಿರುವದು ಹೆಮ್ಮೆಯ ಸಂಗತಿಯಾಗಿದ್ದು, ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ನಿರ್ಭಯದಿಂದ ಮಾತನಾಡಿ ನಿಯಮಗಳನ್ನು ಅನುಸರಿಸಿ ವಿಜೇತರಾಗಿ ಎಂದು ಶುಭ ಹಾರೈಸಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿಯ ಕುಲಸಚಿವರಾದ ಪ್ರೊ. ವಿಜಯಕುಮಾರರವರು ಪ್ರಸ್ತುತ ವರ್ಷ ವಿಶ್ವವಿದ್ಯಾಲಯವು ಅನೇಕ ವಿದ್ಯಾರ್ಥಿಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಗೊಳಿಸಿದೆ. ಆ ನಿಟ್ಟಿನಲ್ಲಿ ಪ್ರಸ್ತುತ ಚರ್ಚಾಸ್ಪರ್ಧೆಯು ಕೂಡಾ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವಾಗಬಲ್ಲಂತಹ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮದ ಪ್ರಾರಂಭದಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ. ಶಾಂತನಾಯಕರವರು ಎಲ್ಲರನ್ನೂ ಸ್ವಾಗತಿಸಿ, ಚರ್ಚಾಸ್ಪರ್ಧೆಯ ನಿಯಮಾವಳಿಗಳನ್ನು ವಿವರಿಸಿದರು. ಪ್ರೊ. ಶರಣಬಸಪ್ಪ ಬಿಳಿಎಲಿಯವರು ಕಾರ್ಯಕ್ರಮವನ್ನು ಸಂಯೋಜಿಸಿ, ನಿರ್ವಹಿಸಿ ನಿರೂಪಿಸಿದರು.
ಅಂತರ್ ಕಾಲೇಜು ಚಚಾಸ್ಪರ್ಧೆ ಉದ್ಘಾಟನಾ ಸಮಾರಂಭ
ಉದ್ಘಾಟಕರು : ಶ್ರೀ ಎಸ್. ಮಲ್ಲಿಕಾರ್ಜುನ, ಕಾರ್ಯದರ್ಶಿಗಳು, ಶ್ರೀ.ಗ.ವಿ.ವ.ಟ್ರಸ್ಟ್, ಕೊಪ್ಪಳ.
ವೇದಿಕೆ ಮೇಲೆ ಎಡದಿಂದ: ಪ್ರಾಚಾರ್ಯರಾದ ಪ್ರೊ.ಎಸ್.ಎಲ್ ಮಾಲಿಪಾಟೀಲ, ಮೌಲ್ಯಮಾಪನ ಕುಲಸಚಿವರಾದ ಪ್ರೊ.ಎಲ್.ಆರ್.ನಾಯಕ್, ಕುಲಸಚಿವರಾದ ಶ್ರೀ ವಿಜಯಕುಮಾರ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಶ್ರೀ ಶಾಂತನಾಯಕ, ಕರ್ನಾಟಕ ಸಹಕಾರ ಮಹಾಮಂಡಳದ ಶ್ರೀ ಶರಣಬಸಪ್ಪ ಕಾಟ್ರಳ್ಳಿ ಹಾಗೂ ಪ್ರೊ. ಶರಣಬಸಪ್ಪ ಬಿಳಿಎಲಿಯವರು ಉಪಸ್ಥಿತರಿದ್ದಾರೆ.
0 comments:
Post a Comment