ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಮಹವಿದ್ಯಾಲಯದಲ್ಲಿ ಇತ್ತೀಚಿಗೆ ಎನ್.ಸಿ.ಸಿ ದಿನಾಚರಣೆ ಜರುಗಿತು. ಬಳ್ಳಾರಿ ವಿಶ್ವವಿದ್ಯಾಲಯ ಎನ್.ಸಿ.ಸಿ ಅಧಿಕಾರಿ ಕರ್ನಲ್ ವಿಶ್ವನಾಥ ಪಾಟೀಲ ಅತಿಥಿಗಳಾಗಿ ಭಾಗವಹಿಸಿ ಶಿಸ್ತು ಹಾಗೂ ಸಂಯಮದಲ್ಲಿ ಎನ್.ಸಿ.ಸಿ ಮಹತ್ವ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ದೆಹಲಿಯಲ್ಲಿ ಜರುಗಿದ ೬೬ನೇ ಗಣರಾಜ್ಯೋತ್ಸವ ಪರೇಡಿಗೆ ಆಯ್ಕೆಯಾಗಿರು ಪಿ. ಯೂ.ಸಿ ವಿಭಾಗದ ಕುಮಾರ್ ನಾಯಕ್ ಇವರನ್ನು ಸನ್ಮಾನಿಸಲಾಯಿತು. ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್ ಎಲ್ ಮಾಲಿಪಾಟೀಲ ಹಾಗೂ ಪದವಿ ಪೂರ್ವ ವಿಭಾಗದ ಪ್ರಾಚಾರ್ಯ ಪರೀಕ್ಷಿತರಾಜ, ಎನ್.ಸಿ.ಸಿ ಅಧಿಕಾರಿ ಡಾ ದಯಾನಂದ ಸಾಳುಂಕೆ ಹಾಗೂ ಸಕಲ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
Home
»
koppal district information
»
Koppal News
»
koppal organisations
»
school college koppal district
» ಶ್ರೀ ಗವಿಸಿದ್ಧೇಶ್ವರ ಮಹವಿದ್ಯಾಲಯದಲ್ಲಿ ಎನ್.ಸಿ.ಸಿ ದಿನಾಚರಣೆ : ಕುಮಾರ್ ನಾಯಕ್ ಸನ್ಮಾನ
Subscribe to:
Post Comments (Atom)


0 comments:
Post a Comment