PLEASE LOGIN TO KANNADANET.COM FOR REGULAR NEWS-UPDATES




ಕೊಪ್ಪಳ : ಕೇದಾರ ಪೀಠದ ಶ್ರೀ ಭೀಮಾಶಂಕರ ಸ್ವಾಮೀಜಿಯವರ ಹೇಳಿಕೆ ವಿರುದ್ಧ ರಾ.ಬ.ದ./ ಲಿಂ.ಧ.ಮ.ಸ.ಹಾಗೂ ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ, ಜಯಕರ್ನಾಟಕ ಸಂಘ ಹಾಗೂ ಇನ್ನಿತರ ಸಂಘ ಸಂಸ್ಥೆಯವರು ನಗರದ  ಅಶೋಕ ವೃತ್ತದಲ್ಲಿ ಸಾಂಕೇತಿಕ ಪ್ರತಿಭಟನೆ ನೆರವೇರಿಸಿ, ಶ್ರೀಗಳ ಪ್ರತಿಕೃತಿ ದಹನ ಮಾಡಿದರು ನಂತರ ಮೆರವಣಿಗೆ ಮೂಲಕ ತಹಶೀಲ್ ಕಾರ್ಯಲಯಕ್ಕೆ ತೆರಳಿ ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಲಾಯಿತು. 
ವೀರಶೈವದ ಪರಿಜ್ಞಾನ ವಿಲ್ಲದವರು ಗೊಂದಲ ಸೃಷ್ಠಿಸುತ್ತಿದ್ದಾರೆ, ಇವರು ಒಳಗಿನ ವೈರಿಗಳು, ಇವರಿಂದ ಅದು ಅನೇಕ ನೋವುಗಳನ್ನು ಅನುಭವಿಸುತ್ತಿದೆ. ಆದ್ದರಿಂದ ವಾದ ವಿವಾದ ಬಿಟ್ಟು ಸಾಮರಸ್ಯದ ಬಾಳ್ವೆ ನಡೆಸಬೇಕು ಎನ್ನುವ ನಿಮ್ಮ ಆಶಯಕ್ಕೆ ಧನ್ಯವಾದ. 
ಮೇಲಿನ ಈ ಮಾತನ್ನು ನೀವು ಕೇದಾರ ಪೀಠದ ಶ್ರೀಗಳಿಗೆ ಹೇಳುತ್ತಿರುವಿರೆಂದು ನಾವು ಭಾವಿಸುತ್ತೇವೆ. ಏಕೆಂದರೆ ಇಲ್ಲ ಸಲ್ಲದ  ವಿಚಾರಗಳನ್ನು ಪತ್ರಿಕೆಗಳಲ್ಲಿ ಹೇಳಿಕೆ ನೀಡಿ ಗೊಂದಲ ಎಬ್ಬಿಸುತ್ತಿರುವವರು ಅವರೇ. 
ಪರಿಜ್ಞಾನ ಹೊಂದಿದ ವ್ಯಕ್ತಿಯ ಈ ನುಡಿ  ಬಹಳ ಪ್ರಸ್ತುತ  ಎಲ್ಲಿ ವೀರಶೈವವೊ ಅಲ್ಲಿ ಗೊಂದಲದ ವೈಭವ, ಅದು ಅವರ ಸ್ವಭಾವ ಏಕೆಂದರೆ ಅಲ್ಲಿ ಬಸವಣ್ಣನ ಅಭಾವ.  ರೇಣುಕಾಚಾರ್ಯರನ್ನು ನೀವು ಯುಗ ಪುರುಷ ಎಂದಾದರೂ ಕರೆಯಿರಿ ಕಲ್ಪ ಪುರುಷ ಎಂದಾದರೂ ಕರೆಯಿರಿ, ಶಕ ಪುರುಷರು ನೀವೇ  ರಂಬಾಪೂರಿ  ಪೀಠದವರೇ ಆಗಿರಿ ಅಭ್ಯಂತರವಿಲ್ಲ, ಅಲ್ಲಿ ಅಪ್ಪ ಬಸವಣ್ಣನವರ ಅವಶ್ಯಕತೆ ನಿಮಗೇಕೆ? ಮನುಷ್ಯನಿಗೆ ಎರಡು ಕಣ್ಣುಗಳಿದ್ದರೂ ದೃಷ್ಠಿ ಒಂದೇ ಆಗಿರುತ್ತದೆ. ಆದರೆ ಸರ್ವಸಮಾನತೆ ಸಾರಿದ ಗುರುಬಸವಣ್ಣನವರ ದೃಷ್ಠಿಗೂ  ಜಾತೀಯತೆಯನ್ನೇ ಮೂಲಭೂತವಾಗಿ ಬಿಂಬಿಸಿ ಜಾತಿ ಜಂಗಮರ ಹೊಟ್ಟೆಯಲ್ಲೇ ಹುಟ್ಟಿದವರಿಗೆ ಪೀಠಕ್ಕೆರುವ ಹಕ್ಕು ಇಟ್ಟಿರುವ ನಿಮ್ಮ ದೃಷ್ಠಿಗೂ ಅಜಗಜಾಂತರ ವ್ಯತ್ಯಾಸ. ನಟವರ ಜಾತಿಯಲ್ಲಿ ಹುಟ್ಟಿದ ಪರಮಜ್ಞಾನಿ ಅಲ್ಲಮ ಪ್ರಭುದೇವರು ಗುರು ಬಸವಣ್ಣನವರು ಸ್ಥಾಪಿಸಿದ ಶೂನ್ಯ ಪೀಠಕ್ಕೆ ಪ್ರಥಮ ಪೀಠಾಧೀಶರಾದದ್ದು ಇತಿಹಾಸ. ಈ ವಿಷಯ ನಿಮಗೇಕೆ ಅರ್ಥವಾಗುತ್ತಿಲ್ಲ? ಈ ಡಾಂಭಿಕತನವನ್ನು  ಇನ್ನಾದರೂ ನಿಲ್ಲಿಸಿ ಎಂದು ಎಚ್ಚರಿಸುತ್ತ್ತಿದ್ದೇವೆ.    
ಮತ ಸ್ಥಾಪಕರು ನೀವೇ ಆಗಿ, ಮತ್ತು ಮತ ಉದ್ಧಾರಕರೂ ನೀವೆಯಾಗಿ ಯಾರಾದರೂ ಬೇಡವೆಂದರೇ? ೧೯೦೪ ರಲ್ಲಿ ವೀರಶೈವ ಮಹಾಸಭೆ ಹುಟ್ಟಿ ಹಾನಗಲ್ ಕುಮಾರ ಸ್ವಾಮಿಗಳೇ ಆಗಬೇಕೇನು ಇದನ್ನು ಹೇಳಲು? ೧೭ ನೇ ಶತಮಾನದಲ್ಲಿ ಸರ್ವಜ್ಞ ಕವಿ ತುಂಬಾ ಸುಂದರವಾಗಿ ಹೇಳಿದ್ದಾರೆ.  ಬಸವಗುರುವಿನ  ಹೆಸರು ಬಲ್ಲವರಾರಿಲ್ಲ ಹುಸಿಮಾತನಾಡಿ ಕೆಡದಿರಿ| ಲಿಂಗಾಯತಕೆ   ಬಸವಣ್ಣನೇ ಕರ್ತೃ ಸರ್ವಜ್ಷ  

ನಿಮ್ಮ ಈ ವೇದ ಶಾಸ್ತ್ರ, ಆಗಮ, ಪುರಾಣ, ಉಪನಿಷತ್ತು ಆಧಾರಿತ ವೀರಶೈವವನ್ನು ನೀವು ಪ್ರತಿಪಾದಿಸುತ್ತಾ ನಡೆಯುವಲ್ಲಿ ನಮಗೇನು ಕೆಲಸ? ನಿಮ್ಮ ೨೮ ಶಿವಾಗಮಗಳ ಪ್ರಾಚೀನತೆ ಕಟ್ಟಿಕೊಂಡು ನಾವೇನು ಮಾಡೋಣ? ಗುರು ಬಸವಣ್ಣನವರು ವೇದಕ್ಕೆ ಒರೆಯ ಕಟ್ಟುವೆ, ಶಾಸ್ರ್ತಕ್ಕೆ ನಿಗಳನಿಕ್ಕುವೆ, ಆಗಮದ ಮೂಗ ಕೊಯ್ಯುವೆ ತರ್ಕದ ಬೆನ್ನಬಾರನೆತ್ತುವೆ. ಎಂದು ಹೇಳಿದುದರಲ್ಲಿ ನಮ್ಮ ನಂಬಿಕೆ. ತರ್ಕವೆಂಬುದು ತಗರ ಹರಟೆ, ಪುರಾಣವೆಂಬುದು ಪುಂಡರ ಗೋಷ್ಠಿ ಎನ್ನುವ ವಚನ ಸಾಹಿತ್ಯ ನಮ್ಮ ಧರ್ಮ ಗ್ರಂಥ. ಇದರಲ್ಲಿ ನಿಮ್ಮ ಸಿದ್ಧ್ದಾಂತ ಶಿಖಾಮಣಿ ಏನು ಹೇಳಿತು? ಆದಿಯಲ್ಲಿ ನೀನೇ ಗುರುವಾದ ಕಾರಣ ನಿನ್ನಿಂದ ಹುಟ್ಟಿತ್ತು ಲಿಂಗ ಎಂದು ಗುರು ಬಸವಣ್ಣನವರಿಗೆ ಅವರ ಸಮಕಾಲೀನ ಶರಣರಾದ 
ಶೂನ್ಯ ಪೀಠಾದೀಶ ಅಲ್ಲಮಪ್ರಭು ದೇವರು ಹೇಳುವ ಮಾತಿನಲ್ಲಿ ನಮಗೆ ಪೂರ್ಣವಿಶ್ವಾಸ ಇದು ನಮ್ಮ ಧರ್ಮಗ್ರಂಥವಾದ ವಚನ ಸಾಹಿತ್ಯ ಕಲಿಸುವ ಮೊದಲ ಪಾಠ, ಈ ಮಾತನ್ನು ಹೇಳಲಿಕ್ಕೆ ವೈರಾಗ್ಯನಿಧಿ ಅಲ್ಲಮಪ್ರಭು ದೇವರಿಗೆ ಯಾವ ಮೂಲಬೇರಿನ ಅವಶ್ಯಕತೆಯೂ ಬೀಳಲಿಲ್ಲ. ಏಕೆಂದರೆ ಅದು ಅವರ ಅನುಭಾವದ ನುಡಿ. ಧರ್ಮದ ಎಲ್ಲ್ಲಾ ಬೇರುಗಳನ್ನು ಅರೆದು ಭಟ್ಟಿ ಇಳಿಸಿ ಕೊಟ್ಟಂಥ ಅನುಭಾವದ ನುಡಿಗಳ ಮುಂದೆ ಆ ನಿಮ್ಮ ಸಿದ್ದಾಂತ ಶಿಖಾಮಣಿ ಯಾವ ಮೂಲೆಗೆ ನಿಲ್ಲುತ್ತದೆ? ವೀರಶೈವಕ್ಕೆ ನೀವು ಬುನಾದಿ ಕಲ್ಲಾದರೂ ಆಗಿ, ಗೋಡೆಕಲ್ಲಾದರೂ ಆಗಿ ಆದರೆ ನಾವು ನಡೆಯುವ ದಾರಿಯಲ್ಲಿ ಗೋಟಿ ಕಲ್ಲಾಗಿ ನಮ್ಮನ್ನು ಎಡವಿ ಬೀಳಿಸದಂತೆ ಎಚ್ಚರ ವಹಿಸಿ, ಪಕ್ಕಕ್ಕೆ ಸರಿದು ನಿಲ್ಲಿ. ಇಲ್ಲವಾದಲ್ಲಿ ಆ ಗೋಟಿ ಕಲ್ಲನ್ನು ಪುಡಿ ಪುಡಿ ಮಾಡುವ ವಚನ ಸಾಹಿತ್ಯವೆಂಬ ಬುಲ್ಡೋಜರಿಗೆ ಅರೆಕ್ಷಣ ಸಾಕು.  
ಹುಸಿ ಮಾತನಾಡಿ ಕೆಡದಿರಿ ಲಿಂಗಾಯತಕೆ ಬಸವಣ್ಣನೆ ಕತೃ ಎಂದು ಹೇಳಿದ ಸರ್ವಜ್ಞವಾಣಿಯನ್ನು ತಿಳಿದವರಾದ ನೀವು ಹಸಿ ಹಸಿಯಾಗಿ ಇಂದು ಹುಸಿಯನ್ನು ನುಡಿಯುತ್ತಲೇ ನಿಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ಶೋಚನೀಯ. ನಿಮ್ಮದೇ ಸಿದ್ಧ್ದಾಂತವನ್ನು ಜನರ ಮುಂದಿಟ್ಟ್ಟು ಪ್ರತಿಪಾದಿಸುವುದನ್ನು ಬಿಟ್ಟು ಲಿಂಗಾಯತ ಧರ್ಮದ ಗುರು ಅಪ್ಪ ಬಸವಣ್ಣನವರ ಆಸರೆಗೆ  ಬಂದು ನಿಲ್ಲುವುದು ವಚನ ಸಾಹಿತ್ಯವನ್ನು ಅದರೊಳಗಿತ್ತು ಇದರೊಳಗಿತ್ತು ಎಂದು ಬಾಲಿಷವಾಗಿ ನುಡಿಯುವುದು ನಿಮ್ಮ ಘನತೆಗೆ ಕುಂದಲ್ಲವೇ? ನಿಮ್ಮ ವೀರಶೈವದ ಸಾಧನೆಯಿಂದ ಏನೇನಾಗಿದೆ ಇಂದು ಸಮಾಜದಲ್ಲಿ ಅರ್ಥಮಾಡಿಕೊಂಡಿರುವಿರಾ? ಅಯ್ಯಪ್ಪ ಸ್ವಾಮಿ ಮಾಲೆಹಾಕುವುದು, ಬ್ರಹ್ಮಕುಮಾರಿ ಅನುಸರಿಸುವುದು ಇವೇ ನಿಮ್ಮ ಸಾಧನೆಯೆ? ಇದಕ್ಕೆ ನಿಮ್ಮ ವೀರಶೈವದಲ್ಲಿ ಯಾವ ಶ್ಲೋಕವಿದೆ ಹೇಳುವಿರಾ? ಲಿಂಗ ಭೇದ ಮಾಡದೆ ಎಲ್ಲರಿಗೂ ಸಮಾನ ಧರ್ಮ ಪಾಲನೆ ಅಧಿಕಾರ ಕೊಟ್ಟಿದೆ ಎನ್ನುವ ನೀವು ನಿಮ್ಮ ಪಂಚಪೀಠದಲ್ಲಿ ಎಂದಾದರೂ ಇಲ್ಲಿಯ ತನಕ ಒಬ್ಬ ಸ್ತ್ರೀಗೆ ಜಗದ್ಗುರುವಾಗಿ ಪೀಠವೇರಲು ಅವಕಾಶ ನೀಡಿದ್ದೀರಾ?  ಈ ಹುಸಿ ನಾಟಕ ನಿಮಗೇಕೆ? ಬಾಯಿ ಬೊಂಬಾಯಿ ಮಾಡಿ ಪತ್ರಿಕೆಗೆ ಹೇಳಿಕೆ ನೀಡುವ ನೀವು ಮಾಡಿ ತೋರಿಸಿ ನಿಮ್ಮ ಪೀಠಕ್ಕೆ ಒಬ್ಬ ಸ್ತ್ರೀಯನ್ನು ಪೀಠಾಧಿಕಾರಿಯಾಗಿ ಅಥವಾ ಒಬ್ಬ ದಲಿತ ವ್ಯಕ್ತಿಯನ್ನು ಪೀಠಾಧಿಕಾರಿಯಾಗಿ ಮಾಡಿ ತೋರಿಸಿ. ಬಿಟ್ಟು ಕೊಡಿ ನಿಮ್ಮ ಪೀಠವನ್ನು, ಇಲ್ಲವಾದರೆ ಬನ್ನಿ ಗುರು ಬಸವಣ್ಣನವರ ಮಾರ್ಗಕ್ಕೆ ! ಇವತ್ತು ತೋರಿಸುತ್ತೇವೆ ತಾಜಾ ಉದಾಹರಣೆಗಳನ್ನು ದಲಿತ ವ್ಯಕ್ತಿಗಳು ಲಿಂಗಾಯತ ಧರ್ಮದಲ್ಲಿ ಪೀಠವೇರಿ ಜಗತ್ತಿಗೆ ಆದರ್ಶವಾಗಿದ್ದಾರೆ. ಒಬ್ಬ ಸಾಮಾನ್ಯ ಸ್ತ್ರೀ ಕೂಡಾ ಅಖಂಡ ಜ್ಞಾನಗಳಿಸಿ ಜಗದ್ಗುರುವಾಗಿ ಪೀಠಾರೋಹಣ ಗೈದಿರುವುದು ಒಬ್ಬರಲ್ಲಾ ಬೇಕಾದಷ್ಟು ಜನ ಈ ಸಾಮರ್ಥ್ಯ ನಿಮ್ಮಲ್ಲಿದ್ದರೆ ಲಿಂಗಾಯತ ಧರ್ಮದ ತಂಟೆಗೆ ಬನ್ನಿ. ವಚನ ಸಾಹಿತ್ಯವನ್ನು ಸರಿಯಾಗಿ ಅಭ್ಯಾಸ ಮಾಡಿ ಅಪ್ಪ ಬಸವಣ್ಣನವರನ್ನು ಲಿಂಗಾಯತ ಧರ್ಮ ಗುರುವೆಂದು ಶಿರ ಸ್ರಾಷ್ಟಾಂಗದಿಂದ ಒಪ್ಪಿಕೊಳ್ಳಿ. ಇದಾವುದು ನಿಮ್ಮ ಕೈಯಲ್ಲಿ ಆಗದಿದ್ದರೆ ನೀವು ಉಂಟು ನಿಮ್ಮ ವೀರಶೈವ ಉಂಟು. ಯಾವತ್ತು ಇನ್ನಮುಂದೆ ವಚನ ಸಾಹಿತ್ಯ, ಗುರು ಬಸವಣ್ಣನವರು, ಲಿಂಗಾಯತ ಧರ್ಮ ಇವುಗಳ ತಂಟೆಗೆ ಬರಬೇಡಿ ಹಳೆಯ ಪುರಾಣ, ಡಾಂಭಿಕತೆ ಇವು ಎಲ್ಲಾ ನೀವೇ ಕಟ್ಟಿಕೊಂಡಂತಹವು. ನಿಮ್ಮೊಂದಿಗೇನೇ  ಇರಲಿ. ಸಮಾಜದಲ್ಲಿ ತಂದು ಹರಿಯಬಿಡಬೇಡಿ ಮೊದಲೆಲ್ಲಾ ಇದನ್ನೆ ಮಾಡಿದ್ದೇವೆ ಮುಂದೆಯೂ ಇದನ್ನೆ ಮಾಡುತ್ತೇವೆ ಎಂದೇನಾದರೂ ಬಡಬಡಿಸಿದರೆ  ಕಾಲ ಬಹಳ ಸೂಕ್ಷ್ಮವಾಗಿದೆ, ಜನ ಪ್ರಾಜ್ಞರಾಗಿದ್ದಾರೆ ಮೈಮೇಲೆ ಎಚ್ಚರವಿರರಿ. ಇಂದಲ್ಲಾ ನಾಳೆ ಲಿಂಗಾಯತ ಧರ್ಮ ಒಂದು ಸ್ವತಂತ್ರ್ಯ ಧರ್ಮವೆಂದು ನಮ್ಮ ಘನ ಸರಕಾರ ಅರ್ಥ ಮಾಡಿಕೊಳ್ಳುವುದರಲ್ಲಿ ನಮಗೆ ಸಂಶಯವಿಲ್ಲ ಭಾರತ ಸಂವಿಧಾನದಲ್ಲಿ ಎಲ್ಲಾ ಧರ್ಮಗಳಿಗೂ ಅವರ ಅವರ ಧರ್ಮವನ್ನು ಅಭಿಮಾನದಿಂದ ಹೇಳಿಕೊಳ್ಳುವ ಅದರಂತೆ ನಡೆಯುವ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ  ನಿಮ್ಮ ವೀರಶೈವದಲ್ಲಿ ನೀವು ಏನಾದರೂ ಹೇಳಿಕೊಂಡು ಹೋsಗಿ ಆದರೆ  ಸಮಾಜಕ್ಕೆ ದಿಶಾಬೂಲ   ( ಮಾರ್ಗ ತಪ್ಪಿಸುವ)  ಮಾಡುವ ಕಾರ್ಯ ಇಂದಿಗೆ ನಿಲ್ಲಲಿ. 

ಇದೇ ರೀತಿ ಅಸಂಬದ್ಧ ಹೇಳಿಕೆಗಳನ್ನು ಗುರುಬಸವಣ್ಣನವರ ಕುರಿತಾಗಿಯಾಗಲಿ, ಲಿಂಗಾಯತ ಧರ್ಮದ ಸಂಹಿತೆ ಪವಿತ್ರ ವಚನ ಸಾಹಿತ್ಯದ ಕುರಿತಾಗಲಿ ಹೇಳಿಕೆ ಕೊಟ್ಟಲ್ಲಿ ಶ್ರೀಗಳ ವಿರುದ್ಧ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಎಚ್ಚರಿಸಲಾಯಿತು. 

ಈ ಪ್ರತಿಭಟನೆಯಲ್ಲಿ ಶರಣರಾದ ಕೆ.ವೀರಣ್ಣ ಲಿಂಗಾಯತ, ವಿಜಯಕುಮಾರ ಕವಲೂರು, ಸಂಗಣ್ಣ ಮೇಟಿ, ಮಲ್ಲಿಕಾರ್ಜುನ ಬೆಲ್ಲದ, ಕೋಟ್ರಪ್ಪ ಶೆಡದ, ಬಸವನಗೌಡ್ರ ಪೊಲೀಸಪಾಟೀಲ, ಮಂಜುನಾಥ ಹಾದಿಮನಿ, ಶಿವಕುಮಾರ ಏಣಗಿ, ಡಾ.ಬಸವನಗೌಡ ಪಾಟೀಲ, ಶಂಕ್ರಪ್ಪ ಗೊಂದಕರ್, ಶ್ರೀಶೈಲ ಸಂಗೇನಹಳ್ಳಿ, ಶಿವಬಸವಯ್ಯ ವೀರಾಪೂರ, ನಂದಯ್ಯ ಹಿರೇಮಠ, ಸುಂಕಪ್ಪ ಅಮರಾಪೂರ, ಶರಣೆಯರಾದ ಸರಸ್ವತೆಮ್ಮ ವಂದಲಿ, ರೇಣುಕಾ ಗಾದಾರಿ, ಶಾಮತಮ್ಮ ಕವಲೂರು, ಸುವರ್ಣ ಪಾಟೀಲ, ಗೀತಾ ಮೇಟಿ, ಜಯದೇವಿ ಪಾಟೀಲ, ಶರಣಮ್ಮ ಪೊಲೀಸಪಾಟೀಲ, ಬಸಮ್ಮ ವಿರಾಪೂರ, ಶಿವಗಂಗಮ್ಮ ಹಿರೇಮಠ, ಇನ್ನೂ ಅನೇಕ ನೂರಾರು ಶರಣ ಶರಣೆಯರು ಪ್ರತಿಭಟನೆ ಭಾಗವಹಿದ್ದರು.  

Advertisement

0 comments:

Post a Comment

 
Top