PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ.ಜ,: ಮೋಚಿಗಾರ ಸಮುದಾಯದ ಪಾರಂಪಾರಿ ಕೌದಿಹೊಲೆಯುವ ವೃತ್ತಿಯನ್ನು ಗುಡಿ ಕೈಗಾರಿಕೆಗೆ ಸೇರಿಸಿ ಹಾಗೂ ಸಮಾಜದ ವಯೋವೃದ್ಧ ಮಹಿಳೆಯರಿಗೆ ಜೀವನ ಭದ್ರತೆಯ ಪಿಂಚಣಿ ಬದಗಿಸಬೇಕೆಂದು  ವಿವಿಧ ಬೇಡಿಕೆಗೆ ಆಗ್ರಹಿಸಿ ಮೋಚಿ ಸಮುದಾಯದ ಮಹಿಳೆಯರು ಸೇರಿದಂತೆ ಸಾವಿರಾರೂಜನ ಇಲ್ಲಿನ ಜಿಲ್ಲಾಢಳಿತದ ಕಚೇರಿಯ ಮುಂದೆ ಬುಧುವಾರ ಪ್ರತಿಭಟನೆ ನಡೆಸಿದರು.
   ಕನಾಟಕದಾದ್ಯಂತ ಎಲ್ಲಾ ಜಿಲ್ಲೆಯಲ್ಲಿಯೂ ಮೋಚಿಗಾರ ಸಮುದಾಯ ವಾಸವಾಗಿದೆ.   ಕೊಪ್ಪಳ ಜಿಲ್ಲೆಯಲ್ಲಿ ಸುಮಾರು ೧೫ ಸಾವಿರಕ್ಕೂ ಅಧಿಕವಾಗಿ ಮೋಚಿ ಜನಾಂಗವಿದೆ ಇದರಲ್ಲಿ ೫೦೦೦ಕ್ಕಿಂತ ಅಧಿಕವಾಗಿ ಮಹಿಳೆಯರೆ ಇದ್ದಾರೆ. ಪರಂಪರಾಗತವಾಗಿ ಬಂದ ಕೌದಿಹೊಲೆಯುವ ವೃತ್ತಿಯಲ್ಲಿ ಮಹಿಳೆಯರು ತೊಡಗಿಕೊಂಡೆರೆ. ಪುರುಷರು ಧರ್ಮ ಕೆಲಸವನ್ನು ಅವಲಂಬಿಸಿದ್ದಾರೆ.

 ಧರಣಿಯ ನೇತೃತ್ವವನ್ನು ರಾಮಚಂದ್ರ ಗಾರವಾಢ ರಾಜ್ಯ ಉಪಾಧ್ಯಕ್ಷ ಅ.ಕ.ಮೋ.ಸ,  ಜಿಲ್ಲಾ  ಮೋಚಿ ಸಮುದಾಯದ ಮುಖಂಡರುಗಳಾದ ಚಂದ್ರು ಸೂಡಿ, ರಮೇಶ ಕೋಟೆ, ಹುಲುಗಪ್ಪ ಕಬ್ಬರಗಿ, ಶಿವಪುತ್ರಪ್ಪ ಕೋಳೂರು, ಚನ್ನಬಸವ ಮಂಗಳೂರು, ಮಲ್ಲಿಕಾರ್ಜುನ್ ಕಲ್ಗುಡಿ, ಮಂಜಪ್ಪ ಜಾಲಿಹಾಳ, ಯಲ್ಲಪ್ಪ ಕೊಪ್ಪಳ, ವೀರಪ್ಪ ತಾವರಗೇರಿ, ಸೋಮಪ್ಪ ಬಿಸರಳ್ಳಿ, ಸೋಮಣ್ಣ ಹೊಸಮನಿ, ಜಿಲ್ಲಾ ಸಮಾಜದ ಮಹಿಳೆಯರಾದ ಲಕ್ಷವ್ವ ಕಳ್ಳಿಮನಿ, ರೇಣುಕಾ ದೊಡ್ಡಮನಿ, ಹನುಮವ್ವ ಮೂಲಿಮನಿ, ಮಂಜುಳಾ ಹಿಂದಲಮನಿ, ಲಕ್ಷ್ಮವ್ವ ಕವಲೂರು, ಯಲ್ಲಮ್ಮ ಹಾದಿಮನಿ, ಶರಣಮ್ಮ ಸಂಗನಾಳ, ಶಿವಮ್ಮ ಕೋಳೂರು, ವರಲಕ್ಷ್ಮಮ್ಮ, ಶಂಕ್ರಮ್ಮ ಮೂಲಿಮನಿ, ರೇಣುಕಾ ಸೂಡಿ, ಲಕ್ಷ್ಮವ್ವ ಇಟಗಿ, ಈರಮ್ಮ ನಡುಲಮನಿ, ಫಕೀರವ್ವ ಹಾದಿಮನಿ, ಗಿರಾಜ ಮರಗಟ್ಟಿ, ಕಸ್ತೂರೆವ್ವ ಜಾಳಿಹಾಳ, ರೇಣುಕಾ ಅಳವಂಡಿ, ಸರಸ್ವತಿ ಕನಕಗಿರಿ, ಮಂಜವ್ವ ಭರಮಪ್ಪ ಕುಕನೂರು, ಹುಲಿಗೆಮ್ಮ ತೇಜಪ್ಪ ಕುಕನೂರು ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

0 comments:

Post a Comment

 
Top