ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗಸ್ವಾಮಿಯ ವಾರ್ಷಿಕ ಜಾತ್ರೆ ಅಂಗವಾಗಿ ಕಾರ್ಣಿಕೋತ್ಸವ, ಸರಪಳಿ, ಪವಾಡ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಜಾತ್ರೆಯನ್ನು ವೀಕ್ಷಿಸಲು ಸುತ್ತಮುತ್ತಲಿನ ಹಾಗೂ ವಿವಿಧ ರಾಜ್ಯಗಳಿಂದ ಸುಮಾರು ೦೮ ರಿಂದ ೧೦ ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ಜಾತ್ರೆಯ ಅಂಗವಾಗಿ ಜ.೨೬ ರಂದು ರಥಸಪ್ತಮಿ ಶ್ರೀ ಮಾರ್ತಾಂಡ ಭೈರವನ ಡೆಂಕನಮುರಡಿ ಆರೋಹಣ, ಕಡುಬಿನ ಕಾಳಗ, ಫೆ.೦೩ ರಂದು ಭಾರತ ಹುಣ್ಣಿಮೆ, ಫೆ.೦೪ ರಂದು ಧ್ವಜಾರೋಹಣ, ತ್ರಿಶೂಲ ಪೂಜೆ, ಫೆ.೦೫ ರಂದು ಶ್ರೀ ಸ್ವಾಮಿಯ ಮಲ್ಲಾಸುರನ ಸಂಹಾರಕ್ಕೆ ಡೆಂಕನ ಮರಡಿಗೆ ಗುಪ್ತಮೌನ ಸವಾರಿ ಹಾಗೂ ಸಂಜೆ ೫.೩೦ ಕ್ಕೆ ಕಾರ್ಣಿಕೋತ್ಸವ, ಫೆ.೦೬ ಕ್ಕೆ ಮೈಲಾರಲಿಂಗ ಸ್ವಾಮಿಯ ಹೆಗ್ಗಪ್ಪನ ಮರಡಿಗೆ ಉತ್ಸವ ಹೊರಡುವುದು. ಕಂಚಿವೀರರಿಂದ ಪವಾಡ ಮತ್ತು ಗೊರವರಿಂದ ಸರಪಳಿ ಪವಾಡ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ದೇವಸ್ಥಾನಕ್ಕೆ ಸಲ್ಲಿಸುವ ಮುಡುಪಿ,
ಕಾಣಿಕೆ ಇತ್ಯಾದಿ ವಸ್ತುಗಳನ್ನು ಯಾವುದೇ ಮದ್ಯವರ್ತಿಗಳಿಗೆ ನೀಡಬಾರದು. ಅವುಗಳನ್ನು ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಗೆ ಕೊಟ್ಟು ರಸೀದಿ ಪಡೆಯಬೇಕು. ಇಲ್ಲದಿದ್ದಲ್ಲಿ ಅದು ಸ್ವಾಮಿಯ ಭಂಡಾರಕ್ಕೆ ಸೇರುವುದಿಲ್ಲ. ಡಿಡಿ ಅಥವಾ ಚೆಕ್ ಮೂಲಕ ಸಲ್ಲಿಸುವವರು ದೇವಸ್ಥಾನದ ಪ್ರಗತಿ ಗ್ರಾಮೀಣ ಬ್ಯಾಂಕ್, ಮೈಲಾರದ ಉಳಿತಾಯ ಖಾತೆ ಸಂ: ೧೦೪೯ ಕ್ಕೆ ಸಂದಾಯ ಮಾಡಬೆಕು ಎಂದು ಬಳ್ಳಾರಿಯ ಸಹಾಯಕ ಆಯುಕ್ತ ಎಸ್.ಪಿ.ಬಿ. ಮಹೇಶ್ ತಿಳಿಸಿದ್ದಾರೆ.
0 comments:
Post a Comment