PLEASE LOGIN TO KANNADANET.COM FOR REGULAR NEWS-UPDATES

ಮುಖ್ಯಮಂತ್ರಿ   ಸಿದ್ದರಾಮಯ್ಯ ಅವರು ಮಾರ್ಚ್ 13 ರಂದು ರಾಜ್ಯ ಆಯವ್ಯಯ (ಬಜೆಟ್) ವನ್ನು ಮಂಡಿಸಲಿದ್ದಾರೆ.ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ನಡೆದ ಗ್ರ್ಯಾಮಿ ಪ್ರಶಸ್ತಿಗೆ ಪುರಸ್ಕೃತ  ರಿಖಿ ಕೇಜ್ ಅವರ ಸನ್ಮಾನ ಸಮಾರಂಭದ ನಂತರ ಹಣಕಾಸು ಖಾತೆಯನ್ನು ಹೊತ್ತ  ಸಿದ್ದರಾಮಯ್ಯ ಅವರು ಈ ವಿಷಯವನ್ನು ಮಾಧ್ಯಮದವರಿಗೆ ತಿಳಿಸಿದರು.

ರಾಜ್ಯದಲ್ಲಿ ಆರ್ಥಿಕ ಬೆಳವಣಿಗೆಯ ಗುರಿ ಶೇಕಡಾ 14.5 ಕ್ಕೆ ಪ್ರತಿಯಾಗಿ ಈಗಾಗಲೇ ಶೇಕಡಾ 14.3 ರಷ್ಟು ಸಾಧಿಸಲಾಗಿದೆ. ತಮ್ಮ ಆಯವ್ಯಯದಲ್ಲಿ ಎಂದಿನಂತೆ ನೀರಾವರಿ, ಕೃಷಿ, ಶಿಕ್ಷಣ, ವಿದ್ಯುತ್, ಗ್ರಾಮೀಣಾಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ ಕ್ಷೇತ್ರಗಳು ಆಧ್ಯತಾ ವಲಯಗಳಾಗಿವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಆಯವ್ಯಯವು   ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮಂಡಿಸುತ್ತಿರುವ ಮೂರನೇ ಆಯವ್ಯಯವಾಗಿದೆ. ಅಲ್ಲದೆ, ಹಣಕಾಸು ಸಚಿವರು ಹಾಗೂ ಉಪ ಮುಖ್ಯಮಂತ್ರಿಯಾಗಿ   ಸಿದ್ದರಾಮಯ್ಯ ಅವರು ಈ ಹಿಂದೆ ಮಂಡಿಸಿರುವ ಏಳು ಆಯವ್ಯಯಗಳನ್ನು ಲೆಕ್ಕಕ್ಕೆ ತೆಗೆದು ಕೊಂಡಲ್ಲಿ, ಇದು  ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ ಹತ್ತನೇ ಆಯವ್ಯಯವಾಗಿದೆ.

Advertisement

0 comments:

Post a Comment

 
Top